Wednesday, 11th December 2024

ಜೆಡಿಎಸ್ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತಾಗಲಿದೆ

ಗುಬ್ಬಿ : ತಾಲೂಕಿನ ಮತದಾರರು ಜೆಡಿಎಸ್ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತು ಮಾಡಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಾಯಿತ್ರಿ ದೇವಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಗುಬ್ಬಿ ತಾಲೋಕಿನ ಅಳಿಲುಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಮನೆ ಪ್ರಚಾರ ಕೈಗೊಂಡು ಮಾತನಾಡಿ ಗುಬ್ಬಿ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪ್ರತಿಷ್ಠಾ ಕಣವಾಗಿದೆ. ಕ್ಷೇತ್ರದ ಮತ ದಾರರು ವ್ಯಕ್ತಿಯ ಬದಲಾವಣೆ ಬಯಸುತ್ತಿದ್ದು ಸ್ವಯಂ ಪ್ರೇರಿತವಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ.
ಕುಮಾರಣ್ಣನವರ ಪಂಚರತ್ನ ಯೋಜನೆ ಅಭಿವೃದ್ಧಿಗೆ ಪೂರಕವಾದ ಯೋಜನೆಯಾಗಿದೆ ನೀರಾವರಿ, ಹೈಟೆಕ್ ಆಸ್ಪತ್ರೆ ನಿರ್ಮಾಣ ಸೇರಿದಂತೆ ಮಹಿಳೆಯರಿಗೆ, ನಿರುದ್ಯೋಗಿಗಳಿಗೆ, ರೈತರಿಗೆ ಅನುಕೂಲವಾಗುವಂತಹ ಕಾರ್ಯ ಕ್ರಮಗಳನ್ನು ಜಾರಿಗೆ ತರಲು ಪ್ರತಿಯೊಬ್ಬರೂ ಜೆಡಿಎಸ್ ಬೆಂಬಲಿಸುವ ಮೂಲಕ ಕುಮಾರಣ್ಣನವರಿಗೆ ಶಕ್ತಿ ತುಂಬಬೇಕಾಗಿದೆ. ಪ್ರಚಾರ ಕೈಗೊಂಡ ದಿನದಿಂದಲೂ ಬಿಎಸ್ ನಾಗರಾಜು ಅವರಿಗೆ ಪ್ರತಿ ಗ್ರಾಮದಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. ತಾಲೂಕಿನ ಜನತೆ ಬಿಎಸ್ ನಾಗರಾಜ್ ಅವರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಜೆಡಿಎಸ್ ಭದ್ರಕೋಟೆ ಎಂದು ಸಾಬೀತು ಮಾಡಲಿದ್ದಾರೆ ಎಂದ ಅವರು ಜಿಎನ್ ಬೆಟ್ಟಸ್ವಾಮಿ ಅವರು ಜೆಡಿಎಸ್ ಗೆ ಸೇರ್ಪಡೆಯಾದ ನಂತರ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು.
ಜೆಡಿಎಸ್ ಮುಖಂಡ ಗ್ರಾಮ ಪಂಚಾಯತಿ ಸದಸ್ಯ ಅರೇಹಳ್ಳಿ ನಟರಾಜ್ ಮಾತನಾಡಿ ಕುಮಾರಣ್ಣನವರ ಜನಪರ ಹೋರಾಟಕ್ಕೆ ರೈತರು ಯುವಕರು ಮನಸೋತಿದ್ದಾರೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರೈತರ ಹಿತ ಕಾಯುವ ಪಕ್ಷವಾಗಿದೆ. ನಮ್ಮ ಭಾಗದಲ್ಲಿ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಬಿಎಸ್ ನಾಗರಾಜು ಅವರನ್ನು ಗೆಲ್ಲಿಸುತ್ತೇವೆ.
ಈ ಸಂದರ್ಭದಲ್ಲಿ ಮುಖಂಡರಾದ ಹೊಸಕೆರೆ ಬಸವರಾಜು, ಜಯಣ್ಣ, ನಟರಾಜು, ಬಸವರಾಜ್ ಹೊರಟ್ಟಿ, ಹೊಸಕೆರೆ ಶಶಿ ,ಇರುಕಸಂದ್ರ ರಮೇಶ್ , ಮುಚುಬಿರನಹಳ್ಳಿ ಲಕ್ಷ್ಮಣ್, ಹಂಡ ನಹಳ್ಳಿ ಶಿವರಾಜು, ಕರಿಬಸವಯ್ಯ, ದೇವರಾಜು, ಹಾಗಲವಾಡಿ ಶ್ರೀನಿವಾಸ್, ಮಾದೇವಯ್ಯ, ಮನು,ರಾಮಣ್ಣ, ನಾಗರಾಜು, ರಾಮಲಿಂಗಯ್ಯ, ವಿಶ್ವನಾಥ್, ಶ್ರೀನಿವಾಸ್ ಇತರರು ಇದ್ದರು.