ತಿಪಟೂರು: ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜು.೨೬, ೨೭ ರಂದು ೨ ದಿನಗಳ ಕಾಲ ದತ್ತಾಂಶ ವಿಜ್ಞಾನ (ಡೇಟಾ ಸೈನ್ಸ್) ಮತ್ತು ಅಂತರ್ಜಾಲ ಭದ್ರತೆ (ನೆಟ್‌ವರ್ಕ್ ಸೆಕ್ಯೂರಿಟಿ) ವಿಷಯ ಕುರಿತ ೨ನೇ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ಬೆಳಿಗ್ಗೆ ೧೦ಗಂಟೆಗೆ ಕೆ.ಐ.ಟಿ. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಇಟಲಿ ದೇಶದ ಡಾ.ಅಲೆಸ್ಯಾಂಡ್ರೋ ವಜೆರಿ ಮತ್ತು ಗೌರವಾನ್ವಿತ ಅತಿಥಿಗಳಾಗಿ ಚಂದ್ರಶೇಖರ್ ಬಿ.ಯು., ಸೀನಿಯರ್ ಆರ್ಕಿಟೆಕ್ಟ್ ಸಿನೊಪ್ಸಿಸ್ ಐ.ಎನ್.ಸಿ. ಬೆಂಗಳೂರು, ಡಾ|| ಸುಧನ್ ಮಜ್ಜಿ ಐ.ಐ.ಎಸ್.ಸಿ. ಬೆಂಗಳೂರು ಮತ್ತು ಡಾ|| ಪರಮೇಶಾಚಾರಿ ವಿ.ಡಿ. ಎಸ್.ಎ.ಸಿ.ಚೇರ್ ಐಇಇಇ, ಬೆಂಗಳೂರು ವಿಭಾಗ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ವಹಿಸಲಿದ್ದು, ಕಾಲೇಜಿನ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಕಾರ್ಯಕಾರಿ ಸದಸ್ಯರುಗಳು, ಪ್ರಾಂಶುಪಾಲರು, ಕಾರ್ಯಕ್ರಮದ ಸಂಯೋಜಕರು, ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.