ಗುಬ್ಬಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ಗಳನ್ನು ವಿತರಿಸಲಾಯಿತು.
ಜಿಲ್ಲಾ ನಿರ್ದೇಶಕಿ ದಯಾಶೀಲಾ ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಡೆಯವರು ಹಾಗೂ ಹೇಮಾವತಿ ಹೆಗಡೆ ಯವರ ಪರಿಕಲ್ಪನೆಯಲ್ಲಿ, ಮೂಡಿ ಬಂದಂತಹ “ವಾತ್ಸಲ್ಯ ಕಾರ್ಯಕ್ರಮ” ದಡಿ ತಾಲೂಕಿನಲ್ಲಿ ಒಟ್ಟು 09 ಅಶಕ್ತ ಕುಟುಂಬದ ಮಾಶಾಸನ ಸದಸ್ಯರಿಗೆ ಎರಡನೇ ವರ್ಷದ ಸಮೀಕ್ಷೆಯಂತೆ ಉಚಿತವಾಗಿ ದಿನನಿತ್ಯ ಬಳಕೆಯ ಅಗತ್ಯ ವಸ್ತು ಗಳಾದ, ಬಟ್ಟೆ,ಚಾಪೆ,ಹೊದಿಕೆ, ದಿಂಬು, ಟವಲ್, ಬಾಚಣಿಕೆ, ಹಾಗೂ ವಾತ್ಸಲ್ಯ ಮಿಕ್ಸ್ ಫುಡ್ ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆ.ನ.ಲಿಂಗಪ್ಪ, ಯೋಜನಾಧಿಕಾರಿ ರಾಜೇಶ್, ಸಮನ್ವಯಧಿಕಾರಿ ಪ್ರೇಮ, ಮೇಲ್ವಿಚಾರಕ ಸುರೇಂದ್ರ, ಒಕ್ಕೂಟ ಅಧ್ಯಕ್ಷ ರಾಜಶೇಖರ್, ಸದಸ್ಯೆ ರಾಜೇಶ್ವರಿ, ಸೇವಾ ಪ್ರತಿನಿದಿ ಶಿವರತ್ನ, ಚಾಲಕ ರಾಜಶೇಖರ್ ಇದ್ದರು.