Thursday, 12th December 2024

ಕ.ರಾ.ಮು.ವಿ: ಜುಲೈ ಆವೃತ್ತಿ ಪ್ರವೇಶಾತಿಗೆ ಸೆಪ್ಟೆಂಬರ್ 30 ಕೊನೆಯ ದಿನ

ತುಮಕೂರು: ತುಮಕೂರಿನ ಕ.ರಾ.ಮು.ವಿ ಪ್ರಾದೇಶಿಕ ಕೇಂದ್ರದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್‌.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಪ್ರವೇಶಾತಿಗೆ ಅವಕಾಶವಿದ್ದು, 2023ರ ಸೆಪ್ಟೆಂಬರ್ 30 ಪ್ರವೇಶಾತಿಗೆ ಕೊನೆಯ ದಿನಾಂಕವಾಗಿದೆ.

ಮೇಲ್ಕಂಡ ಪದವಿಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಭರ್ತಿಮಾಡಿ ನಂತರ ತುಮಕೂರಿನ ಕರಾಮುವಿ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಆನ್ ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು. ಪ್ರಸಕ್ತ ವರ್ಷದಿಂದ ಹೊಸದಾಗಿ ಮೈಸೂರಿನ ಕರಾಮುವಿಯು ಬಿ.ಎ, ಬಿ.ಕಾಂ, ಎಂ.ಎ (ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ), ಎಂ.ಕಾಂ, ಎಂ.ಬಿ‌.ಎ, ಎಂ.ಸ್ಸಿ (ಗಣಿತಶಾಸ್ತ್ರ) ವಿಷಯಗಳಲ್ಲಿ ಆನ್ ಲೈನ್ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ ಆರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ಹೆಚ್ಚಿನ ವಿವರಗಳಿಗಾಗಿ: ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ಟೂಡಾ ಲೇಔಟ್, ರಾಜೀವ್‍ಗಾಂಧಿ ನಗರ, ಗಂಗಸಂದ್ರ ಮುಖ್ಯರಸ್ತೆ, ಮೆಳೆಕೋಟೆ, ತುಮಕೂರು-572105 ದೂರವಾಣಿ ಸಂಖ್ಯೆ- 0816-2955580, 9844506629, 9886112434, 7349474339 ಅನ್ನು ಸಂಪರ್ಕಿಸಬಹುದು