Sunday, 15th December 2024

ಲೋಕೇಶ್ವರ್ ರಾಜಕೀಯ ಶ್ರೇಯೋಭಿವೃದ್ದಿಗಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ

ತಿಪಟೂರು: ರಾಜ್ಯ ಕೋಕೋ ಸಂಸ್ಥೆಯ ಅಧ್ಯಕ್ಷರಾದ ಮತ್ತು ತಾಲ್ಲೂಕಿನ ಕಾಂಗ್ರೇಸ್ ಮುಖಂಡರಾದ ಲೋಕೇಶ್ವರರವರ ರಾಜಕೀಯ ಉನ್ನತಿಗಾಗಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು ಸಿಗಲೆಂದು ತಾಲ್ಲೂಕಿನ ಅಭಿಮಾನಿ ಬಳಗ ಹಾಗೂ ಹಳ್ಳಿಕಾರ್ ಸಾಮ್ರಾಜ್ಯ ಸಂಸ್ಥೆಯ ವತಿಯಿಂದ ಕಲ್ಲೇಶ್ವರ ದೇವಾಲಯದಲ್ಲಿ ರುದ್ರಹೋಮ, ಗಣಪತಿ ಹೋಮ ಮೂಲಕ ರುದ್ರಾಭಿಷೇಕ ನೇರವೇರಿಸಿ ನೂರಾರು ಕಾರ್ಯಕರ್ತ ರೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಿಪಟೂರಿನಿಂದ ಪಾದಯಾತ್ರೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಹಳ್ಳಿಕಾರ್ ಸಾಮ್ರಾಜ್ಯ ಸಂಸ್ಥೆಯ ಮುಖ್ಯಸ್ಥ ವಿನಯ್ ಮಡೆನೂರು, ನಗರಸಭಾ ಉಪಾಧ್ಯಕ್ಷ ಸೊಪ್ಪು ಗಣೇಶ್, ಬಸವರಾಜು, ಕಾರ್ಯಕರ್ತರಾz ರಾಜಶೇಖರ್, ಭಾರತಿಮಂಜುನಾಥ್, ರೇಣು, ಕೆಈಬಿ ತೋಂಟಾರಾಧ್ಯ, ಪೃಥ್ವಿ, ಪುನಿತ್, ವಾಟರ್ ಮಂಜು, ತಿಮ್ಮೆಗೌಡ ಬೊಮ್ಮಲಾ ಪುರ, ನಾಗರಾಜು, ವಿಜಯ್, ಪ್ರಕಾಶ್, ಬೆಳಗರಹಳ್ಳಿ ಕಾಂತರಾಜು, ಸೃಜಯ್, ನಿಜಗುಣ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.