Friday, 22nd November 2024

ಮೇ ಮೊದಲ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ

ತಿಪಟೂರು : ರಾಜ್ಯದಲ್ಲಿ ಮೇ ಮೊದಲ ವಾರದಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ತಿಪಟೂರು ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರೀಶೀಲನೆ ನಡೆಸಿದ ಅವರು ವಿದ್ಯಾರ್ಥಿ ಗಳಿಗೆ ಗುಲಾಬಿ ಹೂ ನೀಡುವ ಮೂಲಕ ನಿರ್ಭಿತಿಯಿಂದ ಪರೀಕ್ಷೆ ಎದುರಿಸುವಂತೆ ಶುಭ ಕೋರಿದರು.

ಕಳೆದ ಶೈಕ್ಷಣಿಕ ವರ್ಷಗಳಲ್ಲಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಶೈಕ್ಷಣಿಕ ಮಟ್ಟವೂ ಕುಸಿದಿ ರುವ ಕಾರಣದಿಂದ ಪರೀಕ್ಷೆಗಳು ಸರಳವಾಗಿ ಇರುತ್ತವೆ. ಈ ಬಾರಿ ಪ್ರತಿ ವಿಷಯದಲ್ಲಿಯೂ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಿದ್ದು ಸಮಯ ಮತ್ತು ಅಂಕಗಳಿಕೆಗೆ ಸಹಾಯವಾಗಲಿದೆ. ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಎದುರಿಸಬಹುದು. ಪರೀಕ್ಷಾ ಕೇಂದ್ರಕ್ಕೆ ಅಗತ್ಯವಿರುವಷ್ಟು ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಕಳುಹಿಸಲಾಗಿದ್ದು ಎಲ್ಲಾ ಮುನ್ನೆಚ್ಚ ರಿಕೆಗಳನ್ನು ಪರೀಕ್ಷಾ ಕೇಂದ್ರದಲ್ಲಿ ತೆಗೆದುಕೊಳ್ಳಲಾಗಿದೆ.

ರಾಜ್ಯದ ೧,೧೦೯ ಕೇಂದ್ರಗಳಲ್ಲಿ ಪರೇಕ್ಷೆ ನಡೆಯುತ್ತಿದ್ದು, ಸುಮಾರು ೭ ಲಕ್ಷ ಮಂದಿ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ಸ್ನೇಹಿಯಾಗಿ ಪರೀಕ್ಷೆಗಳು ನಡೆಯಲಿದ್ದು ಪರೀಕ್ಷೆಗಳಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಪರೀಕ್ಷೆ ನಡೆಸಲಾಗುವುದು ಎಂದರು.

ರಾಜ್ಯದ ಶೇ.೯೯ ಭಾಗದ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಯಾವುದೇ ಘಟನೆಗಳಲ್ಲಿ ಭಾಗವಹಿಸದೇ ತರಗತಿಗಳಿಗೆ ಬಂದು ಉತ್ತಮವಾಗಿ ಕಲಿಯುತ್ತಾ ಹೆಚ್ಚಿನ ಅಂಕಗಳೊAದಿಗೆ ಉತ್ತೀರ್ಣರಾಗಿದ್ದಾರೆ. ಹಿಜಾಬ್‌ಗಿಂತ ಶಿಕ್ಷಣ ಮುಖ್ಯ ಎಂಬುದು ಮುಸ್ಲಿಂ ವಿದ್ಯಾರ್ಥಿಗಳಿಗೆ ತಿಳಿದಿದ್ದು ಕಳೆದ ಬಾರಿಗಿಂತ ಅಧಿಕ ಮಂದಿ ಪರೀಕ್ಷೆಗೆ ನೋಂದಣಿ ಮಾಡಿ ಕೊಂಡಿದ್ದಾರೆ.

ಮಕ್ಕಳಲ್ಲಿ ಹಿಜಾಬ್ ಯಾವುದೇ ಗೊಂದಲ ಇಲ್ಲ ಕೆಲ ಸಂಘಟನೆಗಳು ಅವರನ್ನು ಪ್ರಚೋದಿಸಿ ಇಷ್ಟೆಲ್ಲಾ ತೊಂದರೆ ಆಗುವಂತೆ ಮಾಡಿದೆ. ಹೈಕೋರ್ಟ್ ನಿರ್ಣಯ ಮಾಡಿದ ಮೇಲೆ ರಾಷ್ಟ್ರೀಯ ಪಕ್ಷವೂ ಇಲ್ಲಸಲ್ಲದ ಮಾತುಗಳನ್ನಾಡಿ ಹೆಣ್ಣು ಮಕ್ಕಳಿಗೆ ಪ್ರಚೋದಿಸುತ್ತಿದ್ದಾರೆ. ಯಾರ ಕಾಲದಲ್ಲಿ ಕರ್ನಾಟಕ ಶಿಕ್ಷಣ ನೀತಿ ಬಂದಿದ್ದು ಎಂಬುದನ್ನು ಅಲೋಚಿಸಬೇಕಿದೆ. ಕೇವಲ ೬ ಮಂದಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೈಕೋರ್ಟ್ಗೆ ಹೋಗಿದ್ದು ಅದರಲ್ಲಿ ೩ ಮಂದಿ ಪುನಃ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು ಉಳಿದ ಮೂವರ ಬಗ್ಗೆ ಮಾಹಿತಿ ಇಲ್ಲ.