Sunday, 16th June 2024

ಗಮನ ಸೆಳೆದ ಸಖಿ ಲೈಫ್‌ ಸ್ಟೈಲ್ ಪ್ರದರ್ಶನ

ತುಮಕೂರು: ನಗರದ ಜೆ.ಸಿ.ರಸ್ತೆಯಲ್ಲಿರುವ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಮರಳೂರಿನ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಜುಲೈ 21ರಂದು ನಡೆದ ಸೀರೆಮೇಳ `ಸಖಿ ಲೈಫ್‌ ಸ್ಟೈಲ್ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮವನ್ನು ರೇಖಾಬಾಬು ಹಾಗೂ ಡಾ. ಯು. ವಿಶಾಲಾಕ್ಷಿ ಉದ್ಘಾಟಿಸಿದರು. ಇದು 2023-24 ರ ನೂತನ ಪದಾಧಿಕಾರಿ ಗಳಿಂದ ನಡೆದ ಮೊದಲ ಕಾರ್ಯಕ್ರಮವಾಗಿದ್ದು ಸ್ವಾವ ಲಂಭನೆಗಾಗಿ ಸ್ವಯಂ ಉದ್ಯೋಗ ಮಾಡುವವರಲ್ಲಿ ಆತ್ಮಸ್ಥೈರ್ಯ, ಭರವಸೆ ಮೂಡಿಸ ಲಾಯಿತು. ಈ ಮೂಲಕ ಕಾರ್ಯಕ್ರಮ ಮಹಿಳೆಯರ ಪಾಲಿಗೆ ಭರವಸೆಯ ಕಿರಣವಾಗಿದೆ. ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಈಗಾಗಲೇ ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿತ್ತು.
ಇಂತಹ ಕಾರ್ಯಕ್ರಮಗಳಿಂದಾಗಿ ಮಹಿಳೆಯರಲ್ಲಿ ಭರವಸೆಯ ಕಿರಣ ಮೂಡಲಿ, ತಮ್ಮ ಮುಂದಿನ ವ್ಯಾಪಾರ ವ್ಯವಹಾರ ಗಳನ್ನು ಹೆಚ್ಚಾಗಿ ಮಾಡಿಕೊಂಡು ಸ್ವತಂತ್ರ ಜೀವನ ವನ್ನು ರೂಪಿಸಿಕೊಳ್ಳಬೇಕು. ಜತೆಗೆ ತುಮಕೂರು ನಗರದ ಜನತೆಗೆ ಉತ್ತಮ ಗುಣಮಟ್ಟದ ಹಾಗೂ ಗೃಹಿಣಿಯರ ಮನ, ಮನೆಯ ಉಪಯೋಗಿ ವಸ್ತುಗಳು, ವಿನೂತನ ಉತ್ಪನ್ನಗಳನ್ನು ಕೊಳ್ಳಲು ಒಂದು ಅವಕಾಶ ನೀಡಲಾಯಿತು.
ಇನ್ನರ್‌ವ್ಹೀಲ್ ಕ್ಲಬ್‌ಗೆ ಈಗ ನೂರರ ಸಂಭ್ರಮ. 1924 ರಲ್ಲಿ ಇಂಗ್ಲೆ0ಡಿನ ಮ್ಯಾಂಚೆಸ್ಟರಿನಲ್ಲಿ ಸೇನೆಯಲ್ಲಿ ಸೇವೆಗೈದ ದಾದಿಯಾದ ಮಾರ್ಗರೇಟ್ ಆಲಿವರ ಗೋಲ್ಡಿಂಗ್ ಎಂಬ ಮಹಿಳೆ ಸ್ನೇಹ, ಸೇವೆ ಮತ್ತು ತಿಳುವಳಿಕೆ ನೀಡುವ ಸಮಾಜಮುಖಿ ಕಾರ್ಯಗಳನ್ನು ಮಾಡುವ ನಿಮಿತ್ತ ಸ್ಥಾಪಿಸಿದ ಸಂಸ್ಥೆ ಇಂದು ಜಗತ್ತಿನಾದ್ಯಂತ ನೂರಾರು ಕವಲುಗಳು ಚಿಗುರಿದ್ದು, ಇಂದು ವಿಶ್ವಸಂಸ್ಥೆಗೂ ಸಲಹೆ ನೀಡುವಂತಹ ಶ್ರೇಷ್ಠ ಸಂಸ್ಥೆಯಾಗಿ ನಿಂತಿದೆ. ಈ ಸಂತೋಷಕ್ಕಾಗಿ ಎಲ್ಲಾ ಕ್ಲಬ್‌ಗಳು, ಶತಮಾನೋತ್ಸವವನ್ನು ಮಾದರಿ ಯಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸುತ್ತಲಿವೆ. ಅದರಲ್ಲಿ ತುಮಕೂರಿನ ಮರಳೂರಿನ ಇನ್ನರ್‌ವ್ಹೀಲ್ ಕ್ಲಬ್ ಸಹ ಒಂದಾ ಗಿದೆ.
ಕಾರ್ಯಕ್ರಮದಲ್ಲಿ ಕ್ಲಬ್‌ನ ಅಧ್ಯಕ್ಷರಾದ ಪವಿತ್ರ ಶಿವಪ್ರಕಾಶ್, ಕಾರ್ಯದರ್ಶಿಗಳಾದ ಪ್ರತಿಭಾ ಜಯಪ್ರಕಾಶ್ ಹಾಗೂ ಪದಾಧಿ ಕಾರಿಗಳಾದ ನಾಗಶಿಲ್ಪ, ಮೀರಾ ನಾಗರಾಜ್, ಭವಾನಿ ನಟರಾಜ್, ಪ್ರಭವಸಂತ್, ಉಮಾನಟರಾಜ್, ರೂಪಾ ಉದಯ್, ಪ್ರಿಯಾ ಪ್ರದೀಪ್, ನಿರ್ಮಲ, ವೀಣಾ, ಶಕುಂತಲಾ, ಶಾಂತಲ, ಪ್ರತಿಭಾ ದಯಾನಂದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!