Saturday, 5th October 2024

ಶ್ರೀದೇವಿ ಮಹಾತ್ಮೆ ನಾಟಕ ಪ್ರದರ್ಶನ ಜೂ.6ಕ್ಕೆ

ತುಮಕೂರು: ಚಿ.ನಾ.ಹಳ್ಳಿ ತಾಲೂಕಿನ ಬೆಳಗುಲಿ ಗ್ರಾಪಂ ಹೊಸಗೊಲ್ಲರಹಟ್ಟಿಯಲ್ಲಿ ಜೂ.6ಕ್ಕೆ  ಶ್ರೀದೇವಿ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ.
ಉದ್ಘಾಟನೆಯನ್ನು ಶಾಸಕ ಸುರೇಶ್ ಬಾಬು ಉದ್ಘಾಟಿಸಲಿದ್ದು, ಗ್ರಾಪಂ ಅಧ್ಯಕ್ಷೆ ಶಾರದಮ್ಮ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮಾಧುಸ್ವಾಮಿ, ಮಾಜಿ ಶಾಸಕ ಕಿರಣ್ ಕುಮಾರ್ ಸೇರಿದಂತೆ ಇತರ ಗಣ್ಯರು ಭಾಗವಹಿಸುವರು.
ಹಿರಿಯ ಭಾಗವತರಾದ ಪಿ.ಎಚ್.ದೇವರಾಜು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ನಾಟಕದಲ್ಲಿ ದೇವಿ ಪಾತ್ರದಲ್ಲಿ ಜಗದೀಶ್, ರಕ್ತ ಬಿಜಾಸುರ ಪಾತ್ರದಲ್ಲಿ ಬಾಲರಾಜ್, ರಾಜಕುಮಾರ್, ಸುಗ್ರೀವಾ ಪಾತ್ರದಲ್ಲಿ ಪರಮೇಶ್ವರ್, ಕೃಷ್ಣನಾಗಿ ಚಿಕ್ಕಣ್ಣ, ಬಾಲಕೃಷ್ಣನಾಗಿ ಭರತೇಶ್, ದೇವೇಂದ್ರನಾಗಿ ಪ್ರಜ್ವಲ್, ಚಂಡಾಸುರನಾಗಿ ಗುರುಸ್ವಾಮಿ, ಮಹಿಷಾಸುರನಾಗಿ ಕ್ಯಾತಯ್ಯ, ಮಾಯಾವಿಯಾಗಿ ಮಂಜಯ್ಯ, ಸಾರಥಿಯಾಗಿ ಈಶ್ವರಯ್ಯ, ರಂಭಾಸ್ತ್ರೀಯರಾಗಿ ಲಾವಣ್ಯ, ನಯನ, ಪುಷ್ಪ, ರೂಪ, ಗಗನ, ಪವಿತ್ರ  ಅಭಿನಯಿಸಲಿದ್ದಾರೆ.