ತಿಪಟೂರು: ದೇಶದ ಜನರ ಅಭಿಲಾಷೆಗೆ ತಕ್ಕಂತೆ ದೇಶ ಮತ್ತು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅಭಿವೃದ್ಧಿ ಆಶಯ ರೈಲ್ವೆ ಇಲಾಖೆ, ದೇಶದ ಎಲ್ಲಾ ರೈಲ್ವೆ ನಿಲ್ದಾಣ ಗಳನ್ನು ಉನ್ನತ ದರ್ಜೇಗೇರಿಸಿ ಸಾಮಾನ್ಯ ಜನರ ಅನುಕೂಲಕ್ಕೆ ತಕ್ಕಂತೆ ರೈಲುಗಳನ್ನು ಓಡಾಡಲು ಅನುಮತಿ ನೀಡಿದ್ದಾರೆ ಮೊದಲ ಮೇಕ್ ಇನ್ ಇಂಡಿಯಾ ವೇಗದೂತ ನಮ್ಮ ಮಾರ್ಗದಲ್ಲಿ ಓಡಾಡುತ್ತಿರುವುದು ಸಂತೋಷದ ವಿಚಾರ ಮುಂದಿನ ದಿನಗಳಲ್ಲಿ ಈ ಭಾಗದ ಜನರ ಅನುಕೂಲಕ್ಕಾಗಿ ಈ ರೈಲು ನಿಲುಗಡೆಗೆ ಪ್ರಯತ್ನಿಸುತ್ತೇನೆ ಎಂದು ಸಂಸದ ಜಿ.ಎಸ್. ಬಸವರಾಜು ಹೇಳಿದರು.
ತಿಪಟೂರಿನ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಮೊದಲ ಸಂಚಾರದಲ್ಲಿ ಸ್ವಾಗತ ಬಯಸಲು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿ ದೇಶದಲ್ಲಿ ಇಲ್ಲಿಯವರೆಗೆ ಯಾರೂ ಮಾಡದ ಸಾಧನೆಯನ್ನು ಪ್ರಪಂಚ ಮೆಚ್ಚಿದ ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ ವಿಶೇಷವಾಗಿ ರೈಲ್ವೆ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಮುಂಚೂಣಿ ಯಲ್ಲಿರುವುದು ದೇಶದ ಅಭಿವೃದ್ಧಿಗೆ ಸಂಕೇತವಾಗಿದೆ ಎಂದರು.
ಶಾಸಕರಾದ ಕೆ. ಷಡಕ್ಷರಿ ಮಾತನಾಡಿ ಪ್ರತಿನಿತ್ಯ ತಿಪಟೂರು ರೈಲ್ವೆ ನಿಲ್ದಾಣದಿಂದ ೭೦ಕ್ಕೂ ಅಧಿಕ ರೈಲುಗಳು ಓಡಾಡುತ್ತಿದ್ದು ಅತ್ಯಧಿಕ ರೇವಿನ್ಯು ತಿಪಟೂರು ರೈಲ್ವೆ ನಿಲ್ದಾಣದಿಂದ ಬರುತ್ತಿದೆ ಸಂಸದರು ಈ ವಿಚಾರವಾಗಿ ರೈಲ್ವೆ ಮಂತ್ರಿಗಳ ಜೊತೆ ಚರ್ಚಿಸಿ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಮನವಿ ಮಾಡಬೇಕಿದೆ ಎಂದರು.
ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿ ಕೇಂದ್ರ ಸರ್ಕಾರದ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ಜನಸಾಮಾನ್ಯರು ಸಂಚರಿಸುವ ರೈಲುಗಳನ್ನು ಹೆಚ್ಚಿಸಿ ಸ್ವಚ್ಛತೆ ಮತ್ತು ಸಮಯಾನುಸಾರ ಅಭಿವೃದ್ಧಿಪಡಿಸುತ್ತಿರುವುದು, ನರೇಂದ್ರ ಮೋದಿಯವರ ಸ್ವದೇಶಿ. ಸ್ವಚ್ಛತೆಗೆ ಸಾಕ್ಷಿಯಾಗಿದೆ. ಎಂದು ಮಾತನಾಡಿದರು.
*
ಸ್ವದೇಶಿ ನಿರ್ಮಿತ ಮೊದಲ ವೇಗದೂತ ವಂದೇ ಭಾರತ್ ರೈಲು ನೋಡಲು ರೈಲ್ವೆ ನಿಲ್ದಾಣದಲ್ಲಿ ಸುಮಾರು ೨ ಗಂಟೆಯಿAದ ಸಾವಿರಕ್ಕೂ ಅಧಿಕ ಜನ ಕಾಯುತ್ತಿದ್ದರು, ಶಾಲೆಯ ಮಕ್ಕಳನ್ನು ರೈಲು ತೋರಿಸಲು ಶಿಕ್ಷಕರು ಫ್ಲಾಟ್ ಫಾರಂ ನಲ್ಲಿ ಒಂದು ಗಂಟೆಗೂ ಅಧಿಕಕಾಲ ಕುಳಿತುಕೊಂಡಿದ್ದರು. ಮಧ್ಯಾಹ್ನ ೪.೩೦ ಆಗಮಿಸಿದ ರೈಲು ಬರುತ್ತಿದ್ದಂಗೆ ನೆರೆದಿದ್ದ ಜನಸ್ತೂಮ ಮೋದಿ, ಮೋದಿ, ಎಂದು ಕೂಗುತ್ತಿದ್ದರು.
ತಿಪಟೂರು ರೈಲ್ವೆ ನಿಲ್ದಾಣದ ಮೂಲಕ ದೆಹಲಿಯ ಸಂಪರ್ಕಕ್ರಾ೦ತಿ, ಹುಬ್ಬಳ್ಳಿ ಜನಶತಾಬ್ದಿ, ಮೈಸೂರು-ವಾರಣಾಸಿ ರೈಲು, ಮೈಸೂರು-ಶಿರಡಿ ರೈಲು, ಹೀಗೆ ಸುಮಾರು ರೈಲುಗಳು ಸಂಚರಿಸುತ್ತಿದ್ದು ಇವುಗಳ ನಿಲುಗಡೆ ಸಾರ್ವಜನಿಕರು ಲೋಕಸಭಾ ಸದಸ್ಯ ಹಾಗೂ ವಿಧಾನಸಬಾ ಸದಸ್ಯರಿಗೆ, ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.