Thursday, 12th December 2024

ವಚನಗಳು ಕನ್ನಡದ ಉಪನಿಷತ್ತು, ವಚನಕಾರರು ಬೇಸಾಯಗಾರರು

ಮಧುಗಿರಿ : ವಚನಗಳು ಕನ್ನಡದ ಉಪನಿಷತ್ತು, ವಚನಕಾರರು ಬೇಸಾಯಗಾರರು ಎಂದು ಪ್ರೊ.ಸಾಹಿತಿ ಮ.ಲ.ನಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಎಂ ಜಿ ಎಂ ಶಾಲೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ವಚನಕಾರರು ಕನ್ನಡ ಸಾಹಿತ್ಯ ವನ್ನು ರಾಜಶ್ರಯದಿಂದ ಜನಾಶ್ರಯಕ್ಕೆ ತಂದರು. ವೃತ್ತಿ ತಾರತಮ್ಯವಿಲ್ಲದೆ ಎಲ್ಲಾ ವಚನಗಳು ಅಂಕಿತನಾಮ ಪಡೆದಿವೆ. ಗದ್ಯ ಸ್ಪರ್ಶಿತ ವಚನಗಳು ಜನಮಾನಸದಲ್ಲಿ ಹೊಸ ಅಲೆ ಮೂಡಿಸಿದವು ಮತ್ತು ದೇವತ್ವವನ್ನು ತಂದರು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ .ಜಿ. ಸಿದ್ದರಾಮಯ್ಯ ಮಾತನಾಡಿ, ನಾಡಿ ನಾದ್ಯಂತ ಶರಣರ ವಿಚಾರ ಧಾರೆಗಳನ್ನು ಹಚ್ಚಿ ಹರಡಬೇಕು ಎಂದರು. ಆರೋಗ್ಯಕರ ಸಮಾಜ ಕಟ್ಟಲು ವಚನಾಮೃತ ವನ್ನು ಮನೆ ಮನೆಗೆ ತಲುಪಿಸಬೇಕು, ಆಚರಣೆಗೆ ತರಬೇಕು .ಇಂತಹ ಕಾರ್ಯಕ್ರಮಗಳಲ್ಲಿ ಜಾತಿ – ಮತ ಭರವಿಲ್ಲದ ಎಲ್ಲರೂ ಭಾಗವಹಿಸಬೇಕೆಂದವರು ಮನವಿ ಮಾಡಿದರು.

ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷೆ ಉಮಾ ಮಲ್ಲೇಶ್ ಮಾತನಾಡಿ , ಶರಣ ಸಾಹಿತ್ಯದ ತತ್ವ ಮತ್ತು ಆದರ್ಶಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ತಿಂಗಳಿಗೊಮ್ಮೆ ಮನೆ ಮನೆ ವಚನ ಗೋಷ್ಠಿಯನ್ನು ಆಯೋಜಿಸ ಲಾಗುವುದು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ರವೀಂದ್ರನಾಥ ಟಾಗೂರ್ , ತಾಲ್ಲೂಕು ಮಾಜಿ ಅಧ್ಯಕ್ಷ ಸಿದ್ದಗಂಗಪ್ಪ, ನಿವೃತ್ತ ಪ್ರಾಂಶುಪಾಲ ಮಲ್ಲೇಶ್, ಪ್ರಾಂಶುಪಾಲ ದೊಡ್ಡಮಲ್ಲಯ್ಯ, ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ, ವಕೀಲ ನರಸಿಂಹ ರಾಜು ಇದ್ದರು.