Thursday, 12th December 2024

ಸಿ ಎ ಫೌಂಡೇಷನ್ ಪರೀಕ್ಷೆ:  ವಿದ್ಯಾವಾಹಿನಿ ವಿದ್ಯಾರ್ಥಿಗಳ  ಸಾಧನೆ

ತುಮಕೂರು: ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು 2022ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ನಡೆದ ಸಿಎ ಫೌಂಡೇಷನ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಉತ್ತಮ ಅಂಕಗಳೊಂದಿಗೆ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಗಳಿಸಿದ್ದಾರೆ.
 ದಿವ್ಯಪ್ರಭ, ಓಂಕಾರ್, ನರೇಶ್‌ಕುಮಾರ್ ಆರ್., ಅಖಿಲೇಂದ್ರ, ತ್ರಿಶಲ, ಬೃಂದಾ, ಇಂಚರ ಉತ್ತಮ ಅಂಕಗಳೊಂದಿಗೆ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಕುರಿತು ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ ಕುಮಾರ್‌ ಮಾತನಾಡುತ್ತಾ, ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ತುಂಬಾ ಸಂತೋಷ ವಾಗಿದೆ. ಇದರ ಗೌರವ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಸೇರಬೇಕು.
ನಮ್ಮ ಕಾಲೇಜು ಅತ್ಯುತ್ತಮ ಉಪನ್ಯಾಸಕ ವೃಂದವನ್ನು ಹೊಂದಿದೆ, ಹಾಗೂ ಪ್ರತಿಭಾ ವಂತ ವಿದ್ಯಾರ್ಥಿಗಳನ್ನು ಹೊಂದಿದೆ. ಹೀಗಾಗಿ ತುಮಕೂರು ಜಿಲ್ಲೆಯ ವಿವಿಧ ಭಾಗಗಳಿಂದ ನಮ್ಮ ಕಾಲೇಜಿಗೆ ವಿದ್ಯಾರ್ಥಿಗಳು ಬಂದು ಪ್ರವೇಶ ಪಡೆಯುತ್ತಾರೆ ಎಂದರು.
ಗ್ರಾಮೀಣ  ವಿದ್ಯಾರ್ಥಿ ಅಖಿಲೇಂದ್ರ ಮಾತನಾಡಿ, ನಾನು ಗ್ರಾಮೀಣ ವಿದ್ಯಾರ್ಥಿಯಾಗಿದ್ದು ಪಾವಗಡದಲ್ಲಿ 1ರಿಂದ 6 ನೇ ತರಗತಿ ಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ್ದಾನೆ. ನಂತರ ಸಿಬಿಎಸ್‌ಇ ಶಾಲೆಗೆ ಸೇರಿ ಓದಿ ನಂತರ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿಗೆ ಪಿಯುಸಿಗೆ ಪ್ರವೇಶ ಪಡೆದಿದ್ದು, ಇಲ್ಲಿನ ಉಪನ್ಯಾಸಕರ ಬೋಧನೆ ಅವನಿಗೆ ಪ್ರೇರಣೆಯಾಗಿ ನಾನು ಸಿಎ ಮಾಡಲೇ ಬೇಕೆಂಬ ಮನಸ್ಸು ಮಾಡಿದ್ದಾಗಿ ತಿಳಿಸಿದನು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ವೀರೇಶ್‌ಬಾಬು, ಉಪಪ್ರಾಚಾರ್ಯ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ನವೀನ್‌ ರಾಜ್, ಉಪನ್ಯಾಸಕರಾದ ಮಂಜುನಾಥ್, ಪ್ರಮೋದ್, ಪ್ರಕಾಶ್ ಉಪಸ್ಥಿತರಿದ್ದರು.