Sunday, 13th October 2024

ಮತದಾರರ ಪರಿಷ್ಕರಣೆ ಜಾಗೃತಿ ಅಭಿಯಾನ

ಬಿಜೆಪಿ ಯುವಮೋರ್ಚ ಕಾರ್ಯಕರ್ತರಿಂದ ಬೈಕ್ರ‍್ಯಾಲಿ.. ಕೊರಟಗೆರೆ ಪಟ್ಟಣದ ಮುಖ್ಯರಸ್ತೆಯಲ್ಲಿ ಅಭಿಯಾನ

ಕೊರಟಗೆರೆ: ಮತದಾರರ ಪರಿಷ್ಕರಣೆ ಗೃತಿ ಮತ್ತು ನೂತನ ಯುವ ಮತದಾರರ ಸೇರ್ಪಡೆಯ ಅರಿವು ಕಾರ್ಯಕ್ರಮವು ಬೈಕ್‌ಜಾಥಾದ ಮೂಲಕ ಕೊರಟಗೆರೆ ಕ್ಷೇತ್ರದ ೬ಹೋಬಳಿಯಲ್ಲಿ ೪ದಿನ ನಡೆಯಲಿದೆ ಎಂದು ಕೊರಟಗೆರೆ ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್‌ಕುಮಾರ್ ತಿಳಿಸಿದರು.

ಕೊರಟಗೆರೆ ಪಟ್ಟಣದಲ್ಲಿ ಬಿಜೆಪಿ ಜನತಾಪಾರ್ಟಿ ಮತ್ತು ಯುವಮೋರ್ಚದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಮತದಾರರ ವಿಶೇಷ ಪರಿಷ್ಕರಣೆ ಜಾಗೃತಿ ಅಭಿಯಾನ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನೂತನ ಯುವ ಮತದಾರರ ಹೆಸರು ಸೇರ್ಪಡೆ, ವಾಸಸ್ಥಳ ಬದಲಾವಣೆ, ತಿದ್ದುಪಡಿ ಸೇರಿದಂತೆ ಮತದಾರರ ಪಟ್ಟಿಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯಲಿದೆ. ಗ್ರಾಮೀಣ ಪ್ರದೇಶದ ಯುವಕ ಮಿತ್ರರು ತಪ್ಪದೇ ತಮ್ಮ ಗ್ರಾಮದಲ್ಲಿ ವಿಶೇಷವಾಗಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಮನವಿ ಮಾಡಿದರು.

ಕೊರಟಗೆರೆ ಬಿಜೆಪಿ ಅಧ್ಯಕ್ಷ ಪವನಕುಮಾರ್ ಮಾತನಾಡಿ ಭಾರತೀಯ ಜನತಾ ಪಕ್ಷ ಮತ್ತು ಯುವ ಮೋರ್ಚದಿಂದ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಪಕ್ಷದ ಸೇರ್ಪಡೆಗೆ ಕೊರಟಗೆರೆ ಕ್ಷೇತ್ರದ ಯುವಕ ಮಿತ್ರರಿಗೆ ವಿಶೇಷ ಕಾರ್ಯಕ್ರಮ ರೂಪಿಸಲಿದೆ ಎಂದು ತಿಳಿಸಿದರು.

ಕೊರಟಗೆರೆ ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಿಂದ ಮುಖ್ಯರಸ್ತೆಯ ಮೂಲಕ ಊರ್ಡಿಗೆರೆ ವೃತ್ತದವರೇಗೆ ನೂರಾರು ದ್ವೀಚಕ್ರ ವಾಹನದಲ್ಲಿ ಬಿಜೆಪಿ ಯುವಮೊರ್ಚದ ಕಾರ್ಯಕರ್ತರು ಬಿಜೆಪಿ ಮುಖಂಡ ಅನಿಲ್‌ಕುಮಾರ್ ನೇತೃತ್ವದಲ್ಲಿ ಮತದಾರರ ಪರಿಷ್ಕರಣೆ ಮತ್ತು ನೂತನ ಮತದಾರರ ಸೇರ್ಪಡೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಸ್ವಾಮಿ, ಕೊರಟಗೆರೆ ಯುವ ಅಧ್ಯಕ್ಷ ಅರುಣ್, ಪ್ರಧಾನ ಕಾರ್ಯದರ್ಶಿ ಗುರುಧತ್, ಕೊರಟಗೆರೆ ಬಿಜೆಪಿ ಉಸ್ತುವಾರಿ ಕಂಬಣ್ಣ, ಮುಖಂಡರಾದ ಹನುಮಂತರಾಜು, ಡಾಡಿ ವೆಂಕಟೇಶ್, ರಘು, ಆಟೋಗೋಪಿ, ಚೇತನ್, ನಯನ್‌ಗೌಡ, ಲೊಕೇಶ್, ದಯಾನಂದ, ಆನಂದ್, ಸಿದ್ದರಾಜು, ನವೀನ್, ಗಿರೀಶ್‌ಗೌಡ ಸೇರಿದಂತೆ ಇತರರು ಇದ್ದರು.