Thursday, 12th December 2024

ಶಿಕ್ಷಕರ ಚುನಾವಣೆಯಲ್ಲಿ ಬಿಜೆಪಿ ಗೆಲುವು: ಜಿಲ್ಲಾಧ್ಯಕ್ಷ

ತುಮಕೂರು: ಆಗ್ನೆಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಭ್ಯರ್ಥಿ ಡಾ. ವೈ.ನಾರಾಯಣ ಸ್ವಾಮಿ ಗೆಲುವು ನಿಶ್ಚಿತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾರ್ ರವಿಶಂಕರ್ ಹಾಗೂ ಬಿಜೆಪಿ ಆರ್ಥಿಕ ಪ್ರಕೋಷ್ಟ ಜಿಲ್ಲಾ ಸಂಚಾಲಕ ಕೊಪ್ಪಳ್ ನಾಗರಾಜು ತಿಳಿಸಿದ್ದಾರೆ.

ನಗರದ ಹಲವು ಶಾಲೆಗಳಲ್ಲಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ನಡೆಸಿ ಸುದ್ದಿಗಾರರೊಂದಿಗೆ ಜಂಟಿಯಾಗಿ ಮಾತನಾಡಿದರು.

ಇಡೀ ಜಿಲ್ಲಾದ್ಯಂತ ವೈ.ಎ.ನಾರಾಯಣಸ್ವಾಮಿ ಪರ ಅಲೆ ಜೋರಾಗಿದೆ. ಸಂಸ್ಥೆಗಳ ಶಿಕ್ಷಕರು ನಾರಾಯಣಸ್ವಾಮಿ ಬೆಂಬಲಿಸುವು ದಾಗಿ ಹೇಳಿರುವುದು ಇನ್ನಷ್ಟು ಬಲ ಬಂದಂತಾಗಿದೆ ಎಂದರು. ಬಹುತೇಕ ಶಿಕ್ಷಕರ ಸಂಘಗಳ ಮುಖಂಡರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು ಗೆಲುವು ನಮ್ಮದೇ ಆಗಿರುತ್ತದೆ ಎಂದು ತಿಳಿಸಿದರು.