Monday, 9th December 2024

ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವಾದ್ಯಂತ ತಾರತಮ್ಯ: ಶ್ರೀಮತಿ ಆನಂದ ಮದನ್

ತುರುವೇಕೆರೆ: ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವದಾದ್ಯಂತ ತಾರತಮ್ಯ ನಡೆಯುತ್ತಿದೆ ಎಂದು ಶ್ರೀಮತಿ ಆನಂದ ಮದನ ಹೇಳಿದರು.

ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ರಿ ವತಿಯಿಂದ ಗ್ರಾಮದ ಶ್ರೀರಾಜೀಮತಿ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕರ‍್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪುರುಷನಷ್ಟೇ  ಸಾರ‍್ಥ್ಯವನ್ನು ಮಹಿಳೆಯರು ಹೊಂದಿ ದ್ದರೂ, ಅವರನ್ನು ಕೀಳಾಗಿ ಕಾಣುವ ದುಷ್ಟ ಸಂಸ್ಕೃತಿ ನಮ್ಮ ದೇಶದಲ್ಲಿ ಇತ್ತು ಮತ್ತು ಈಗಲೂ ಅದು ಸಂಪರ‍್ಣವಾಗಿ ಕೊನೆಗೊಂಡಿಲ್ಲ.

ಮನುಸ್ಮೃತಿಯ ದುಷ್ಟ ಆಚರಣೆಗಳಿಂದಾಗಿ ಮಹಿಳೆಯರು ಸಾವಿರಾರು ರ‍್ಷಗಳಿಂದ ಇಂದಿಗೂ ಶೋಷಿತರಾಗಿಯೇ ಉಳಿದಿದ್ದಾರೆ. ಮಹಿಳೆಯನ್ನು ಕಟ್ಟಕಡೆಯ ಪ್ರಜೆಯಾಗಿ ಪರಿಗಣಿಸಲಾಗುತ್ತಿತ್ತು. ಆಕೆ ಕೇವಲ ಭೂಗದ ವಸ್ತು ಅಥವಾ ಪುರುಷರ ಸೇವೆಗೆಂದೇ ಇರುವ ನರ‍್ಜೀವ, ನರ‍್ಭಾವ ವಸ್ತು ಎಂದೇ ಮನುಸಂಸ್ಕೃತಿಯ ಪುರುಷ ಪ್ರಧಾನ ವ್ಯವಸ್ಥೆ ನಡೆಸಿಕೊಂಡಿತು.

ಇಂದಿಗೂ ಮಹಿಳೆ ತನ್ನ ಇಷ್ಟದಂತೆ ಸಮಾಜದಲ್ಲಿ ಬದುಕು ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಳೆ. ಮಹಿಳೆ ಯಾವ ಬಟ್ಟೆ ಧರಿಸಬೇಕು, ಎಲ್ಲಿ ಹೋಗಬೇಕು, ಯಾರ ಜೊತೆಗೆ ಮಾತನಾಡಬೇಕು, ಯಾರ ಜೊತೆಗೆ ಮದುವೆ ಯಾಗಬೇಕು, ಯಾವ ಶಿಕ್ಷಣ ಪಡೆಯಬೇಕು ಅನ್ನೋದನ್ನು ಪುರುಷ ಪ್ರಧಾನ ಸಮಾಜವೇ ನರ‍್ಧರಿಸುವ ಸ್ಥಿತಿ ಇಂದಿಗೂ ಮರೆಯಾಗಿಲ್ಲ.

ಇತ್ತೀಚೆಗೆ ಚಿತ್ರದರ‍್ಗದ ಹಿರಿಯೂರಿನಲ್ಲಿ ಮುಟ್ಟಾದ ಮಹಿಳೆಯರು ಮನೆಯ ಹೊರಗಿನ ಕಾಡಿನಲ್ಲಿ ಮಲಗಿರುವ ಘಟನೆಯನ್ನು ಅಲ್ಲಿನ ಶಾಸಕಿ ಪರ‍್ಣಿಮಾ ಶ್ರೀನಿವಾಸ್ ಅವರು ಪತ್ತೆ ಹಚ್ಚಿದರು.

ಹಿಂದಿನ ಕಾಲದ ಅನಿಷ್ಠ ಸಂಸ್ಕೃತಿಗಳು ಇನ್ನೂ ಕೂಡ ಮಹಿಳೆಯನ್ನು ಕಾಡುತ್ತಲೇ ಇದೆ. ಕಾಡು ಪ್ರಾಣಿಗಳ ಉಪಟಳದ ಮಧ್ಯೆಯೂ ಒಂದು ಹೆಣ್ಣಿನ ಜೀವಕ್ಕಿಂತ ಪುರುಷರ ಮಡಿ ಮೈಲಿಗೆಗೆ ಅನ್ನೋ ಮೌಢ್ಯತೆ ಹೆಚ್ಚು ಬೆಲೆ ಅನ್ನೋ ದುರಂತ ಬಹುಶಃ ಯಾವ ದೇಶದಲ್ಲಿಯೂ ಇರಲಾರದು ಎಂದರು.
ಈ ವೇಳೆ ಸಂಘದ ಮಹಿಳೆಯರಿಂದ ವಿಶೇಷ ಸಾಂಸ್ಕೃತಿಕ ಕರ‍್ಯಕ್ರಮಗಳು ಕ್ರೀಡಾ ಚಟುವಟಿಕೆಗಳು ನೆರವೇರಿತು.

ಈ ಸಂರ‍್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಲೀಲಾವತಿ.ಕರ‍್ಯರ‍್ಶಿ ಜ್ವಾಲಾ. ನರ‍್ದೇಶಕರುಗಳಾದ ಸ್ರ‍್ಣಾಂಬ. ಭುವನೇಶ್ವರಿ. ವಿಜಯವಸಂತರಾಜ್. ಆಶಾಚಂದು. ಶೈಲಪ್ರಸಾದ್. ಸಹನಾಸತ್ಯಾನಂದ್. ಅಂಜಲಿಭಾನುಪ್ರಕಾಶ್. ಪರ‍್ಣಿಮಾಬಾಬು. ಪರ‍್ವತಮ್ಮ. ಹಾಗೂ ಸಂಘದ ಎಲ್ಲಾ ಸದಸ್ಯರುಗಳು ಮೀನಾ ನಾಗೇಂದ್ರ. ಸಂಗೀತ ಬ್ಯೂಟಿ ಪರ‍್ಲರ್. ಕೋಮಲ. ಶೃತಿ ಸೇರಿದಂತೆ ಮುಂತಾದ ಮಹಿಳೆಯರು, ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿದ್ದರು.