Saturday, 14th December 2024

ತುಮಕೂರು ದಸರಾ ಉತ್ಸವಕ್ಕೆ ವಿನಯ್ ಗುರೂಜಿ ಚಾಲನೆ

ಭಾಷಣದಿಂದ ಭಾರತ ಬದಲಾಗುವುದಿಲ್ಲ, ಹಳ್ಳಿಗಳಿಂದ ಬದಲಾಗಬೇಕು
ತುಮಕೂರು: ತುಮಕೂರು ಜಿಲ್ಲಾ ದಸರಾ ಸಮಿತಿಯಿಂದ ದಸರಾ ಉತ್ಸವಕ್ಕೆ ಅವಧೂತ ಶ್ರೀವಿನಯ ಗುರೂಜೀ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಅವಧೂತ ಶ್ರೀವಿನಯ ಗುರೂಜಿ ಅಶೀರ್ವಚನ ನೀಡುತ್ತಾ, ಭಾಷಣದಿಂದ ಭಾರತದಿಂದ ಬದಲಾಗಲ್ಲ, ಹಳ್ಳಿಗಳು ಬದಲಾಗ ಬೇಕು. ಮನುಷ್ಯರ ನಡುವೆ ಮಾನವೀಯತೆ ರೂಢಿಸುತ್ತದೆ. ನಿಮ್ಮ ತಪ್ಪುಗಳನ್ನು ತಿಳಿದುಕೊಳ್ಳುವುದೇ ನಿಜವಾದ ಅಧ್ಯಾತ್ಮ.ಪ್ರತಿ ಸ್ತ್ರೀಯರಲ್ಲಿಯೂ ದೇವಿಯನ್ನು ನೋಡುವ ಸಂಸ್ಕೃತಿ ನಮ್ಮದು.ಹಾಗಾಗಿ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಿ. ದಸರಾ ಶಕ್ತಿ ಸ್ವರೂಪಿಣಿಯ ಆರಾಧನೆ. ಪಾಶ್ಚಾತ್ಯ ಸಂಸ್ಕೃತಿ ಮುಳುಗಿಸುವುದೇ ಆಗಿದೆ.ಬದುಕು ಪ್ರಚಾರವಾಗಬಾರದು, ಪ್ರಸಾರವಾಗಬೇಕು ಎಂದರು.
ಇಂದು ಹಣ,ಹೆಸರು,ಕೀರ್ತಿ ನಮ್ಮನ್ನು ಆಳುತ್ತಿದೆ. ಮಕ್ಕಳಿಗೆ ಸಂಸ್ಕಾರ ನೀಡಬೇಕಿದೆ. ಭಾರತೀಯರಿಗೆ ವಿಶ್ವದವರು ತಲೆಬಾಗುವುದು ಸಂಸ್ಕಾರಕ್ಕೆ, ಶ್ರೀಮಂತಿಕೆಗಲ್ಲ. ನಮ್ಮೊಳಗಿನ ಶಕ್ತಿಯನ್ನು ಉದ್ದೀಪನಗೊಳಿಸುವ ಕೆಲಸ ಆಗಬೇಕಿದೆ. ವಾಸ್ತುವಿ ಗಿಂತ, ವಾಸ್ತವ ನಂಬಿ ಬದುಕೋಣ.ನಡೆದಾಡುವ ದೇವರನ್ನು ನೋಡಿ ಬದುಕಿದವರು ನೀವು, ಮೊದಲು ಮನೆಗೆ ಮಗನಾಗಿ, ಆಮೇಲೆ ದೇಶಕ್ಕೆ ಪ್ರಜೆಯಾಗಿ, ಬಡವರ ಅಭ್ಯುದಯಕ್ಕೆ ದುಡಿಯಿರಿ ಎಂದು ಯುವಜನರಿಗೆ ಕಿವಿಮಾತು ಹೇಳಿದರು.
ದಸರಾ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಜ್ಯ ಪರಿಸರ ಸಂಯೋಜಕ ಜೈರಾಮ್ ಬೋಳ್ಳಾಜೆ, ಭಾರತೀಯ ಚಿಂತನೆ ಯಾರನ್ನು ದ್ವೇಷಿಸುವುದಿಲ್ಲ. ಬದಲಾಗಿ ಪ್ರಿತಿಸುತ್ತದೆ. ವಸುದೈವ ಕುಟುಂಬ ಎಂಬುದು ನಮ್ಮ ಆಶಯ. ತ್ಯಾಗ ಮತ್ತು ಸೇವೆ ಭಾರತದ ಆಶಯ ಇದನ್ನು ಪುನರ್ ಸ್ಥಾಪಿಸುವ ಆಶಯವಿದೆ ಎಂದರು.
ಶಮಿಪೂಜೆ ನೆರವೇರಿಸಿದ ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಬನ್ನಿ ವಿಜಯದ ಸಂಕೇತವಾಗಿದೆ. ತುಮಕೂರು ಸರ್ವ ಜನಾಂಗದ ಶಾಂತಿಯ ತೋಟ.ಇಂತಹ ನಾಡಿನಲ್ಲಿ ನಾವೆಲ್ಲರೂ ಸುಖಃ ಶಾಂತಿಯಿAದ ಬಾಳುತ್ತಿದ್ದೇವೆ. ಕೆಟ್ಟದರ ಧಮನದ ಸಂಕೇತವಾದ ವಿಜಯ ದಶಮಿ ಇಡೀ ನಾಡಿಗೆ ವಿಶೇಷ ಹಬ್ಬ.ಮೈಸೂರು ಅರಸರುಗಳು ಆರಂಭಿಸಿದ ಈ ಹಬ್ಬ ಇಂದು ನಾಡಿನ ಎಲ್ಲಾ ಭಾಗಗಳಲ್ಲಿ ವಿಜೃಂಭಣೆಯಿAದ ಆಚರಿಸಲ್ಪಡುತ್ತಿದೆ ಎಂದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ್ ಮಾತನಾಡಿ, ತುಮಕೂರು ದಸರ ಕಳೆದ ಮೂರು ದಶಕಗಳಿಂದ ಭಕ್ತಿ ಮತ್ತು ಶ್ರದ್ದೆಯಿಂದ ಆಚರಿಸುತ್ತಿದ್ದೇವೆ. ದೇವಾಲಯಗಳ ನಾಡಾದ ತುಮಕೂರಿನಲ್ಲಿ ಪ್ರತಿವರ್ಷ ನೂರಾರು ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ.ಜನಪದ ಕಲಾವಿದರು,ವಿಚಾರವಂತರು ಹಲವರು ವಿಷಯಗಳ ಕುರಿತು ಮಾತನಾಡಿ, ನಮಗೆ ಸ್ಪೂರ್ತಿ ತುಂಬಿದ್ದಾರೆ. ಈ ಬಾರಿ ದಸರಾ ಉತ್ಸವದ ಜೊತೆಗೆ, ಗಣೇಶ ವಿಸರ್ಜನಾ ಮಹೋತ್ಸವ ಸೇರಿರುವುದು ವಿಶೇಷ ಮೆರಗು ನೀಡಿದೆ. ದಸರಾ ಸಮಿತಿಗೆ ಯುವಜನತೆ ಕೈಜೋಡಿಸಿ,ಮೈಸೂರಿನ ದಸರಕ್ಕೆ ಸರಿಸಮನಾಗಿ ಈ ಉತ್ಸವವನ್ನು ಮುಂದಿನ ದಿನಗಳಲ್ಲಿ ಮಾಡೋಣ ಎಂಬ ಆಶಯ ವ್ಯಕ್ತಪಡಿಸಿದರು.
 ದಸರಾ ಸಾಮೂಹಿಕ ಶಮಿ ಪೂಜೆಗೆ ತುಮಕೂರು ತಾಲೂಕು ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಶಮಿ ಪೂಜೆ ನೆರವೇರಿಸಿದರು. ಶಾಸಕ ಜೋತಿಗಣೇಶ್,ಮೇಯರ್ ಪ್ರಭಾವತಿ ಎಂ.ಸುಧೀಶ್ವರ್, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ್,ಅಧ್ಯಕ್ಷರಾದ ಬಿ.ಎಸ್.ಮಂಜುನಾಥ್, ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರ ಶೇಖರ್, ಜಿ.ಕೆ.ಶ್ರೀನಿವಾಸ್,ಜಿ.ಎಸ್.ಬಸವರಾಜು,ಮಹಿಳಾ ಸಮನ್ವಯ ಸಮಿತಿಯ ವಾಸವಿ ಗುಪ್ತ್, ರೇಖಾ ಮಹೇಶ್ ಸೇರದಂತೆ ಸದಸ್ಯರುಗಳು ಮತ್ತಿತರರು ಪಾಲ್ಗೊಂಡಿದ್ದರು.