Monday, 18th November 2024

Tumkur News: ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ರಾಜ್ಯಮಟ್ಟದ ಮಹಾಧಿವೇಶನ

ತುಮಕೂರು: ಕರ್ನಾಟಕದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ರಾಜ್ಯಮಟ್ಟದ ಮಹಾಧಿವೇಶನ ಅ.5 ಶನಿವಾರ ಮತ್ತು ಅ.6  ಭಾನುವಾರ ನಗರದ ಏಂಪ್ರೆಸ್ ಕೆಪಿಎಸ್‌ಶಾಲೆಯ ಸಭಾಂಗಣದಲ್ಲಿ ಜರುಗಲಿದೆ ಎಂದು ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಬಿ.ಕೃಷ್ಣಪ್ಪ ಅವರು ಎಲ್ಲಾ ಶೋಷಿತ ಸಮುದಾಯಗಳ ಏಳಿಗೆ ಗಾಗಿ ದಲಿತ ಸಂಘರ್ಘ ಸಮಿತಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ. ಇತ್ತೀಚಿನ ಸಾಮಾಜಿಕ, ಆರ್ಥಿಕ ಅಸ ಮಾನತೆಯ ಜತೆಗೆ, ಕೋಮುವಾದಿಕರಣವೂ ರಾಜ್ಯವನ್ನು ಕಿತ್ತು ತಿನ್ನುತಿದ್ದು, ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿರುವ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಯಾವ ರೀತಿಯ ಹೆಜ್ಜೆಗಳನ್ನೀಡಬೇಕು.ದಲಿತ ಸಂಘರ್ಷ ಸಮಿತಿಯ ಮುಂದಿರುವ ಆಯ್ಕೆಗಳೇನು ಎಂಬ ವಿಚಾರವಾಗಿ ಚರ್ಚಿಸುವ ನಿಟ್ಟಿನಲ್ಲಿ ಈ ಸರ್ವಸದಸ್ಯರ ಮಹಾಧೀವೇಶನ ಮಹತ್ವದ ಹೆಜ್ಜೆಯಾಗಿದೆ. ಯುವ ಜನರಿಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ  ಜಿಲ್ಲಾಧ್ಯಕ್ಷ ಕುಂದೂರು ತಿಮ್ಮಯ್ಯ ಮಾತನಾಡಿ, ರಾಜ್ಯದ ಚಳವಳಿಗಳಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಹೋರಾಟ ರೋಚಕವಾದದ್ದು, ಹಲವಾರು ನಾಯಕರು ಚಳವಳಿಯ ರಥ ಎಳೆದಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಸುಮಾರು 400 ಜನರು ಭಾಗವಹಿಸಲಿದ್ದು, ಜಿಲ್ಲೆಯಿಂದ 200 ಜನರು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚೇಳೂರು ಶಿವನಂಜಪ್ಪ, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುರುಳಿ ಕುಂದೂರು, ಶ್ರೀನಿವಾಸ್,ತಾಯಪ್ಪ,ನಾಗಣ್ಣ ಬಡಿಗೇರ್,ವೀರೇಶ್ ಹಿರೇಹಳ್ಳಿ,ಡಾ.ಮಹೇಶ್, ಸಿದ್ದಪ್ಪ ಕಾಂಬ್ಳೆ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Delhi-Mumbai Expressway: ದೆಹಲಿ- ಮುಂಬಯಿ ಎಕ್ಸ್‌ಪ್ರೆಸ್‌ವೇನಲ್ಲಿ ಗುಂಡಿಗಳಾಗಲು ಇಲಿಗಳು ಕಾರಣ ಎಂದಿದ್ದ ನೌಕರ ವಜಾ!