Thursday, 21st November 2024

Tumkur News: ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕನಾಯಕನಹಳ್ಳಿ: ಮಾರುತಿ ಸೇವಾ ಸಮಿತಿ, ಚಟ್ಟಾಲೆ ಪ್ರತಿಷ್ಠಾನ, ಸಾರ್ವಜನಿಕ ಆಸ್ಪತ್ರೆ ಹಾಗೂ ರೋಟರಿಕ್ಲಬ್ ಮತ್ತು ಉಮಾಕಾಂತ್ ಕುಟುಂಬದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು.

ಪಟ್ಟಣದ ಧರ್ಮಾವರ ಬೀದಿಯಲ್ಲಿನ ಶ್ರೀಸೀತಾರಾಮ ಭಜನಾಮಂದಿರದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಗೋಡೆಕೆರೆ ಸಂಸ್ಥಾನಮಠಾಧೀಶರಾದ ಶ್ರಿ ಮೃತ್ಯುಂಜಯದೇಶೀಕೇಂದ್ರಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಪತ್ನಿಯ ಸ್ಮರಣಾರ್ಥ ಉಮಾಕಾಂತ್‌ರವರು ಹಮ್ಮಿಕೊಂಡಿರುವ ಈ ಶಿಬಿರ ಸಾರ್ಥಕತೆಯ ಭಾವ ಮೂಡಿಸುತ್ತದೆ. ಕಣ್ಣು ಪ್ರಮುಖ ಅಂಗವಾಗಿದ್ದು, ಅದರ ಸಂರಕ್ಷಣೆ ಎಲ್ಲರಿಗೂ ಮುಖ್ಯ ವಾಗಿರುತ್ತದೆ, ಅಗತ್ಯವಿರುವವರೆಲ್ಲರೂ ಈ ಶಿಬಿರದ ಉಪಯೋಗಪಡೆಯಿರಿ ಎಂದರು. ಶಿಬಿರದಲ್ಲಿ ೨೦೦ಕ್ಕೂ ಹೆಚ್ಚು ಮಂದಿಗೆ ನೇತ್ರ ಪರೀಕ್ಷೆ ನಡೆಸಲಾಯಿತು. ಆಗತ್ಯವಿರುವವರಿಗೆ ಉಚಿತ ಕನ್ನಡಕಗಳನ್ನು ನೀಡಲಾಯಾಯಿತು.

ಶ್ರೀಮತಿ ಸಿ.ಎಂ. ವಿಜಯಉಮಾಕಾಂತ್ ರವರ ಸ್ಮರಣಾರ್ಥ ಈ ಶಿಬಿರವನ್ನು ಹಮ್ಮಿಕೊಂಡಿದ್ದು, ಅವರ ಪತಿ ಉಮಾಕಾಂತ್‌ರವರು ಶಿಬಿರಾರ್ಥಿ ಗಳ ಕಣ್ಣನ್ನು ಪರೀಕ್ಷಿಸಿ ಅಗತ್ಯವಿರುವವರಿಗೆ ಉಚಿತ ಕನ್ನಡಕಗಳನ್ನು ನೀಡಿದರು. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಪಡುವವರನ್ನು ಸಾರ್ವಜನಿಕ ಆಸ್ಪçತೆಯ ಹಿರಿಯ ಮೇಲ್ವಿಚಾರಕರಾದ ಸಿ.ವಿ. ವೆಂಕಟರಾಮಯ್ಯನವರ ಉಸ್ತುವಾರಿಯಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಿ ಉಚಿತವಾಗಿ ಶಸ್ತçಚಿಕಿತ್ಸೆಯನ್ನು ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್. ವೆಂಕಟೇಶಮೂರ್ತಿ ವಹಿಸಿದ್ದರು. ಭಜನಾ ಮಂದಿರರದವತಿಯಿಂದ ಉವiಕಾಂತ್‌ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಸಿ.ಬಸವರಾಜು, ಜ್ಞಾನಪೀಠ ಪ್ರೌಢಶಾಲಾ ಅಧ್ಯಕ್ಷರಾದ ಪ್ರಸನ್ನಕುಮಾರ್, ಸೀತಾರಾಮ ಭಜನಾ ಮಂದಿರದ ಅಧ್ಯಕ್ಷರಾದ ಬಂಡಿ ನಾರಾಯಣಪ್ಪ, ವೇದಮೂರ್ತಿ, ಎನ್. ನರಸಿಂಹಮೂರ್ತಿ, ನಾಗರಾಜ್ ಉಪ್ಪಿನ ಮುಂತಾದವರಿದ್ದರು.

ಇದನ್ನೂ ಓದಿ: #TumkurBreaking