ತುಮಕೂರು: ಹಲವು ವಿಶಿಷ್ಟ ಸಾಧನೆಗಳ ಮೂಲಕ ಗ್ರಾಹಕರ ಸೇವೆ ಮಾಡುತ್ತಿರುವ ಟಿಎಂಸಿಸಿ ಬ್ಯಾಂಕ್(TTMC Bank) ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದ್ದು, ಗೋಲ್ಡ್ ಎಟಿಎಂ(Gold ATM) ಲೋಕಾರ್ಪಣೆಗೆ ಸಿದ್ಧತೆ ನಡೆಸಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಟಿಎಂಸಿಸಿ ಬ್ಯಾಂಕ್ ಗೋಲ್ಡ್ ಎಟಿಎಂ ಪರಿಚಯಿಸುತ್ತಿದ್ದು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸೆ.29 ರಂದು ಗೋಲ್ಡ್ ಎಟಿಎಂಗೆ ಚಾಲನೆ ದೊರೆಯಲಿದೆ.
ಅರ್ಧ ಗ್ರಾಂ ನಿಂದ 10 ಗ್ರಾಂ ವರೆಗೆ ಎಟಿಎಂ ನಲ್ಲಿ ಗೋಲ್ಡ್ ಖರೀದಿಸಬಹುದು. ಬಡ, ಮಧ್ಯಮ ವರ್ಗದ ಕುಟುಂಬ ಗಳು ಬಂಗಾರವನ್ನು ಉಳಿತಾಯ ಮಾಡಲು ಅನುಕೂಲವಾಗುತ್ತದೆ. ನಮಗೆ ಲಾಭಕ್ಕಿಂತ ಗ್ರಾಹಕರ ಸೇವೆಯೇ ಮುಖ್ಯ. ಶೀಘ್ರವೇ ಸಿಲ್ವರ್ ಎಟಿಎಂ ಲೋಕಾರ್ಪಣೆಗೂ ಸಿದ್ಧತೆ ನಡೆಸಲಾಗಿದೆ ಎಂದು ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಎನ್. ಎಸ್. ಜಯಕುಮಾರ್ ಅವರು ತಿಳಿಸಿದರು.
ಗೋಲ್ಡ್ ಎಟಿಎಂ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಗೋಲ್ಡ್ ಎಟಿಎಂ ನಲ್ಲಿ ಅರ್ಧ ಗ್ರಾಂ ನಿಂದ ಹತ್ತು ಗ್ರಾಂ ವರೆಗೆ ಚಿನ್ನ ಖರೀದಿಸಬಹುದು. ಪ್ರತಿದಿನದ ಚಿನ್ನದ ಬೆಲೆ ಎಟಿಎಂ ನಲ್ಲಿ ಪ್ರದರ್ಶನವಾಗುತ್ತಿರುತ್ತದೆ. ಗ್ರಾಹಕರ ಬಳಿ ಇರುವ ಯಾವುದಾದರೂ ಎಟಿಎಂ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಅವಶ್ಯಕತೆಗೆ ತಕ್ಕಂತೆ ಎಟಿಎಂನಿಂದ ಗೋಲ್ಡ್ ಪಡೆಯಬಹುದು. ನಂತರ ಬಿಲ್ ಸಮೇತ ಗ್ರಾಹಕರಿಗೆ ದೊರೆಯುತ್ತದೆ.
ಇದನ್ನೂ ಓದಿ: Tumkur News: ತುಮಕೂರು ಜಿಲ್ಲಾಡಳಿತದಿಂದ ದಸರಾ ಉತ್ಸವ ಸಮಿತಿ ಕಡೆಗಣನೆ: ಜಿ.ಎಸ್. ಬಸವರಾಜು ಆರೋಪ