Friday, 15th November 2024

Tumkur News: ಮಕ್ಕಳೇ ರಾಷ್ಟ್ರದ ಭವಿಷ್ಶದ ದೊಡ್ಡ ಆಸ್ತಿ; ಡಾ.ಬಿ.ಗೋವಿಂದಪ್ಪ

ಪೂನಂ ಆಂಗ್ಲಮಾಧ್ಶಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಶಿರಾ: ಇಂದಿನ ಮಕ್ಕಳೇ ರಾಷ್ಟ್ರದ ಭವಿಷ್ಶದ ದೊಡ್ಡ ಆಸ್ತಿಯಾಗಿದ್ದು, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಎಂದು ಪೂನಂ ಆಂಗ್ಲಮಾಧ್ಶಮ ಶಾಲೆಯ ಅಧ್ಶಕ್ಷರಾದ ಡಾ.ಬಿ.ಗೋವಿಂದಪ್ಪ ಹೇಳಿದರು.

ಅವರು ನಗರ ಪೂನಂ ಆಂಗ್ಲಮಾಧ್ಶಮ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ ಮಹಿಳಾ ಮತ್ತು ಮಕ್ಕಳ ಕಲ್ಶಾಣ ಸಚಿವಾಲಯದಿಂದ ಮಕ್ಕಳ ರಕ್ಷಣೆ ಹಾಗೂ ಪೌಷ್ಠಿಕಾಹಾರದ ಬಗ್ಗೆ ಸಾಕಷ್ಟು ಉತ್ತಮ ಕಾರ್ಯಯೋಜನೆಗಳನ್ನು ಕೈಗೊಂಡಿದೆ.

ಬಾಲಾಪರಾಧಗಳನ್ನು ತಡೆಯಲು ಹಲವಾರು ರೀತಿಯ ಕಾನೂನುಬದ್ದವಾದ ಶಾಸನಗಳನ್ನು ಸರಕಾರ ಹಾಗೂ ಸಾರ್ವಜನಿಕ ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿವೆ. ಆದ್ದರಿಂದ ಮಕ್ಕಳ ಶೈಕ್ಷಣಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಹಲವಾರು ಆಟಪಾಠ ಸಾಂಸ್ಕçತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ನರ್ಸರಿಯಿಂದ ೧೦ನೇ ತರಗತಿಯ ವಿಜೇತ ಮಕ್ಕಳಿಗೆ ಆಕರ್ಷಕ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಮುಖ್ಶ ಅತಿಥಿಗಳಾಗಿ ಪ್ರತಿಭಾವಂತ ಇಂಜನಿಯರ್ ವಿದ್ಶಾರ್ಥಿನಿ ಯಲಿಯೂರಿನ ಕು.ವೈಎಸ್ ಆಶಾ ರವರು ಭಾಗವಹಿಸಿ ಮಕ್ಕಳಿಗೆ ಹಲವಾರು ಹಿತನುಡಿಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಶಶಿಕ್ಷಕರಾದ ಗ್ರೇಷಿಯನ್ ಡಿ’ಸೌಜ, ಶಿಕ್ಷಕಿ ಅನುಪಮಾ ಹಾಗೂ ಶಾಲೆಯ ಎಲ್ಲ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.