ಶಿರಾ: ಶಿರಾ ನಗರದ ಬುಕ್ಕಾಪಟ್ಟಣ ಸರ್ಕಲ್ನಲ್ಲಿರುವ ತಂಗುದಾಣದಲ್ಲಿ ಸುಮಾರು ೩೫ ರಿಂದ ೪೦ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಅ.೩೦ರ ಬುಧವಾರ ಪತ್ತೆಯಾಗಿದೆ.
ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸ ಕಂಡುಬAದಿಲ್ಲ. ವ್ಯಕ್ತಿಯ ಮೈಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ವ್ಯಕ್ತಿಯು ದುಂಡು ಮುಖ, ದೃಡಕಾಯ ಶರೀರ, ೫ ಅಡಿ ಎತ್ತರ, ಗೋಧಿ ಮೈಬಣ್ಣ, ಚಿಗುರು ಮೀಸೆ, ಕಪ್ಪು ಕಲರ್ ಜರ್ಕಿನ್, ಕಂದುಬಣ್ಣದ ಟೀಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದು, ವ್ಯಕ್ತಿಯು ಯಾವುದೋ ಖಾಯಿಲೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಅಪರಿಚಿತ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಾದಲ್ಲಿ ಶಿರಾ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: ೦೮೧೩೫-೨೭೫೨೩೭, ೯೪೮೦೮೦೨೯೫೮, ಶಿರಾ ಡಿವೈಎಸ್ಪಿ ಕಚೇರಿ ೦೮೧೩೫-೨೭೫೧೮೪, ೯೪೮೦೮೦೨೯೨೧, ತುಮಕೂರು ನಿಸ್ತಂತು ಕಚೇರಿ ೦೮೧೬-೨೨೭೮೦೦೦ ಸಂಪರ್ಕಿಸಲು ಕೋರಿದ್ದಾರೆ.