Sunday, 15th December 2024

ತುಮಕೂರು ವಿವಿ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ನೇಮಕವಾಗಿದ್ದಾರೆ.
ಪ್ರೊ.ಸಿದ್ದೇಗೌಡ ಅವರ ನಿವೃತ್ತಿ ನಂತರ ತೆರವಾಗಿದ್ದ ಸ್ಥಾನಕ್ಕೆ 56 ಮಂದಿ ಅರ್ಜಿ ಸಲ್ಲಿಸಿದ್ದರು. ಕುಲಪತಿ ಶೋಧನಾ ಸಮಿತಿಯ ನಿರ್ಣಯದಂತೆ ಅಂತಿಮವಾಗಿ ಮೂವರ ಹೆಸರು ರಾಜ್ಯಪಾಲರ ಅಂಗಳದಲ್ಲಿತ್ತು.
ಅದರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೆಂಕಟೇಶ್ವರಲು ಅವರನ್ನು ಕುಲಪತಿ ಯನ್ನಾಗಿ ರಾಜ್ಯಪಾಲರು ನೇಮಕ ಮಾಡಿದ್ದಾರೆ.  ಈ ಹಿಂದೆ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಿದ್ದರು.
***
ಕುಲಪತಿಯಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದೆ. ತುಮಕೂರು ವಿಶ್ವವಿದ್ಯಾನಿಲಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಪ್ರೊ.ವೆಂಕಟೇಶ್ವರಲು, ನೂತನ ಕುಲಪತಿ
ವಿಶ್ವವಾಣಿ ಪಕ್ಕಾ ವರದಿ
ತುಮಕೂರು ವಿವಿಗೆ ನೂತನ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ನೇಮಕವಾಗುವ ಬಗ್ಗೆ ಜೂನ್.7ರಂದು ಪತ್ರಿಕೆಯಲ್ಲಿ ಪಕ್ಕಾ ವರದಿ ಪ್ರಕಟಗೊಂಡಿತ್ತು. ವರದಿ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.