ತುಮಕೂರು: ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ದುಷ್ಕರ್ಮಿಗಳು ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಚಿಕ್ಕಪೇಟೆಯ ಮಧುಸೂದನ್ ಹಾಗೂ ನೆಲಮಂಗಲದ ಟಿ.ಬೇಗೂರು ನಿವಾಸಿ ಮಂಜುನಾಥ್ ಅವರನ್ನು ಪೊಲೀಸರು ಜೈಲಿಗಟ್ಟಿ ದ್ದಾರೆ. ಇನ್ನು ಹಲ್ಲೆಗೊಳಗಾದ ನಗರ ಠಾಣಾಧಿಕಾರಿ ಹನುಮಂತರಾಜು ಸಿಬ್ಬಂದಿ ಮಂಜುನಾಥ್ ಪಿ. ಗೌಡರ್ ಹಲ್ಲೆಗೊಳಗಾದವರು.
ಪ್ರಕ್ರರಣವೇನು?
ಆರೋಪಿಗಳಿಬ್ಬರು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರಯಾಣಿಕರಾದ ಧ್ರುವ ಹಾಗೂ ಪ್ರದೀಪ್‌ಗೆ ಡ್ರಾಗನ್‌ನಿಂದ ಹಲ್ಲೆ ನಡೆಸಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಇದನ್ನು ಕಂಡ ಗಸ್ತಿನಲ್ಲಿದ್ದ ಪೊಲೀಸರಾದ ನಗರ ಠಾಣಾಧಿಕಾರಿ ಹನುಮಂತರಾಜು ಸಿಬ್ಬಂದಿ ಮಂಜುನಾಥ್ ಪಿ. ಗೌಡರ್ ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಡ್ರಾಗನ್‌ನಿಂದ ತಿವಿಯಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಎಎಸ್‌ಐ ಮಲ್ಲೇಶಯ್ಯ, ಸಿಬ್ಬಂದಿ ಹನುಮೇಶ, ಎನ್‌ಇಪಿಎಸ್ ಠಾಣೆಯ ಸಿಬ್ಬಂದಿ ಮಂಗಳಮ್ಮ, ಆಟೋ ಚಾಲಕರಾದ ಅರುಣ, ವಿಜಯ್ ಅವರ ಸಹಕಾರದಿಂದ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಬ್ಬರ ವಿರುದ್ಧ ೩೫೩,೩೩೨, ೩೦೭ ಮತ್ತು ೩೪ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.