Wednesday, 11th December 2024

KPSC: ಪರೀಕ್ಷಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕು

ತುಮಕೂರು: ಕರ್ನಾಟಕ ಲೋಕಸೇವಾ ಆಯೋಗ (KPSC)ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority) ದ ಗೊಂದಲಗಳಿಂದ ಇತ್ತೀಚೆಗೆ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಆಗಿರುವ ಎಡವಟ್ಟು ಗಳಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಯುವಜನರ ಆತ್ಮಸ್ಥೈರ್ಯ ಕುಸಿದಿದ್ದು, ಪರೀಕ್ಷಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ಸರಕಾರ ಮತ್ತು ಪರೀಕ್ಷಾರ್ಥಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ (Muralidhar halappa) ತಿಳಿಸಿದ್ದಾರೆ.

ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ತುಮಕೂರು ವಿವಿ(Tumkur University)ಯ ಸಹಯೋಗದಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಆತ್ಮವಿಶ್ವಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಯುಪಿಎಸ್ಸಿ (UPSC) ಪರೀಕ್ಷೆಯ ರೀತಿಯೇ ಕೆಪಿಎಸ್ಸಿ ಪರೀಕ್ಷೆಯೂ ನಡೆಯಬೇಕು. ಇದುವರೆಗೂ ವೇಳಾಪಟ್ಟಿ ಪ್ರಕಟಣೆ, ಪರೀಕ್ಷೆಗಳನ್ನು ನಡೆಸುವ ರೀತಿ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಅನೇಕ ಬದಲಾವಣೆ ಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ತೆಗೆದು ಕೊಳ್ಳುವ ಆಕಾಂಕ್ಷಿಗಳು ಬಯಸಿದ್ದು, ಈ ವಿಚಾರವನ್ನು ಕೆಪಿಎಸ್ಸಿ ಸದಸ್ಯ, ಕಾರ್ಯದರ್ಶಿಯವರಿಗೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮುಟ್ಟಿಸುವುದರ ಜೊತೆಗೆ, ಜಿಲ್ಲೆಯ ಹಿರಿಯ ಸಚಿವರುಗಳ ಮೂಲಕ ಸರ್ಕಾರದ ಮುಖ್ಯಸ್ಥರ ಗಮನಕ್ಕೂ ತರುವ ಕೆಲಸವನ್ನು ಹಾಲಪ್ಪ ಪ್ರತಿಷ್ಠಾನ ಮಾಡಲಿದೆ ಎಂದರು.

ಕೇAದ್ರ ಸರಕಾರ ನಡೆಸುವ ರೈಲ್ವೆ, ಐಪಿಪಿಎಸ್, ಎಸ್.ಎಸ್.ಸಿ, ನ್ಯಾಷನಲ್ ಡಿಫೇನ್ಸ್ ಅಕಾಡೆಮಿ ಪರೀಕ್ಷೆಗಳಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲದ ಕಾರಣ, ಅವಕಾಶಗಳಿಂದ ವಂಚಿತ ರಾಗುತ್ತಿದ್ದಾರೆ. ಕೇಂದ್ರ ಸರಕಾರದ ಪರೀಕ್ಷೆಗಳಲ್ಲಿಯೂ ಮಾತೃಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಬರೆಯಲು ಅವಕಾಶ ಸಿಗಬೇಕು ಎಂಬುದು ಬಹುತೇಕ ಅಭ್ಯರ್ಥಿಗಳ ಬಯಕೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರಾದ ವಿ.ಸೋಮಣ್ಣ ಅವರ ಮೂಲಕ ಕೇಂದ್ರ ಸರಕಾರಕ್ಕೆ ಪ್ರಬಲವಾದ ಮನವಿ ಮಾಡಲು ಸಹ ಮುಂದಾಗಿರುವುದಾಗಿ ಮುರುಳೀಧರ ಹಾಲಪ್ಪ ನುಡಿದರು.

ಯುಪಿಎಸ್ಸಿ, ಕೆಪಿಎಸ್ಸಿ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದಕ್ಷಿಣ ಕನ್ನಡ, ಕರಾವಳಿ, ಮಲೆನಾಡು ಭಾಗಗಳಿಂದ ಹೆಚ್ಚು ಅಭ್ಯರ್ಥಿಗಳು ಯಶಸ್ಸುಗಳಿಸುತ್ತಿದ್ದು, ಮಧ್ಯಕರ್ನಾಟಕಕ್ಕೆ ಸೇರಿದ ಬಯಲು ಸೀಮೆಯಲ್ಲಿ ಈ ಪ್ರಮಾಣ ಕಡಿಮೆ ಇದೆ. ಹಾಗಾಗಿ ಈ ಭಾಗದಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯುವಕರು ಯಶಸ್ಸುಗಳಿಸಬೇಕೆಂಬ ನಿಟ್ಟಿ ನಲ್ಲಿ ಹಾಲಪ್ಪ ಪ್ರತಿಷ್ಠಾನ ಈಗಾಗಲೇ ಪರೀಕ್ಷೆಯ ಪೂರ್ವ ತಯಾರಿಯಲ್ಲಿರುವ ಯುವಕರೊಂದಿಗೆ, ಈಗಾಗಲೇ ಪರೀಕ್ಷೆ ಎದುರಿಸಿ, ಆಯ್ಕೆಯಾಗಿ ಸರಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ನಡುವೆ ಸಂವಾದ ಏರ್ಪಡಿಸಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸಗಳಲ್ಲಿ ಮುಂದಿನ ದಿನಗಳಲ್ಲಿ ಮಾಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಇರುವ ಹಿಂಜರಿಕೆಯನ್ನು ಹೋಗಲಾಡಿಸಲು ಎಲ್ಲಾ ರೀತಿಯ ಕ್ರಮಗಳನ್ನು ಹಾಲಪ್ಪ ಪ್ರತಿಷ್ಠಾನ ಕೈಗೊಳ್ಳಲಿದೆ ಎಂದು ಮುರುಳೀಧರ ಹಾಲಪ್ಪ ಭರವಸೆ ನೀಡಿದರು.

ತುಮಕೂರು ಜಿಲ್ಲೆಯಿಂದ ಯುಪಿಎಸ್ಸಿ ಪರೀಕ್ಷೆ ಪ್ರಥಮ ಹಂತದ ಪರೀಕ್ಷೆ ಪಾಸು ಮಾಡಿ, ಮುಖ್ಯ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ತುಮಕೂರು ಜಿಲ್ಲೆಯ ಸಮಾನ ಮನಸ್ಕ ಗೆಳೆಯರು ಸೇರಿ ದೆಹಲಿಯ ಐಎಎಸ್ ತರಬೇತಿ ಸಂಸ್ಥೆಯೊAದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಜಿಲ್ಲೆಯ ೧೨ ಜನ ಅಭ್ಯರ್ಥಿಗಳಿಗೆ ಊಟ ತಿಂಡಿಯ ಜೊತೆಗೆ, ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಅಗತ್ಯ ಇರುವವರು ಸಂಪರ್ಕಿಸಬಹುದು. ಮುಂದಿನ ದಿನಗಳಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿ, ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಸಾಧಕರನ್ನು ಕರೆಯಿಸಿ, ಅವರ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಮುರುಳೀಧರ ಹಾಲಪ್ಪ ನುಡಿದರು.

ನವೋದಯ ಐಎಎಸ್ ಅಕಾಡೆಮಿಯ ಗೌರವಾಧ್ಯಕ್ಷ ನಾಗರಾಜರಾವ್ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಇತ್ತೀಚಿನ ದಿನಗಳಲ್ಲಿ ಪೈಪೋಟಿ ಹೆಚ್ಚಿದೆ.

ಇಂಜಿನಿಯರಿ0ಗ್, ಮೆಡಿಕಲ್, ಐಐಟಿ ಕಲಿತವರು ಸಹ ಸಿವಿಲ್ ಸರ್ವಿಸ್ ಏಕ್ಸಾಂ ತೆಗೆದುಕೊಳ್ಳುತ್ತಿರುವ ಕಾರಣ, ಕಲೆ, ಸಾಹಿತ್ಯ, ವಿಜ್ಞಾನ ಓದಿದ ಮಕ್ಕಳು ಹೆಚ್ಚು ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪರಿಶ್ರಮದ ಜೊತೆಗೆ, ಸ್ವಲ್ಪ ಲೋಕಜ್ಞಾನ ಬಳಕೆ ಮಾಡಿದರೂ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದು. ವಿಭಿನ್ನ ಆಲೋಚನೆ,ದೇಶದ ಆಗು, ಹೋಗುಗಳ ಬಗ್ಗೆ ಅರಿವು ಇದ್ದರೆ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು. ಕೀಳಿರಿಮೆ ಬಿಟ್ಟು ಮುನ್ನುಗ್ಗುವ ಅಭ್ಯಾಸ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಗಳ ಕುರಿತು ಮಾತನಾಡಿದ ಸ್ಕಡರ್ನಾ ಲೀಡರ್ ಭಾಸ್ಕರ್, ಡಿಫೆನ್ಸ್ ಅಂದರೆ ಯುದ್ದಭೂಮಿ ಎಂದು ತಪ್ಪು ತಿಳಿಯಬಾರದು. ಎಸ್.ಎಸ್.ಸಿ ಪರೀಕ್ಷೆಗಳಿಂದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಅಧಿಕಾರಿ ಹುದ್ದೆಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಯುವಜನರು ಗಮನಹರಿಸಬೇಕೆಂದರು.

ವೇದಿಕೆಯಲ್ಲಿ ಕೃಷ್ಣ ಏಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಮರಿಚನ್ನಮ್ಮ, ಮುಖಂಡರಾದ ರೇವಣ್ಣಸಿದ್ದಯ್ಯ, ಪ್ರಗತಿಪರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಎಂ.ವಿ.ಬಸವರಾಜು, ಗ್ರಾಹಕರ ವೇದಿಕೆಯ ಟಿ.ಎಸ್.ನಿರಂಜನ್, ದೀಪ್ತಿ ರಾಜೇಶ್ ಸಿದ್ದಗಂಗಾ ಐಎಎಸ್ ಅಕಾಡೆಮಿ, ತ್ರಿವೇಣ ಪೃಥ್ವಿ ಐಎಎಸ್ ಅಕಾಡೆಮಿ, ವಿಭೂಷಣ್, ಬಿ.ಬೈಹರ್ಟ್ ಕ್ಲಾಸಸ್, ಪೃಥ್ವಿ ಹಾಲಪ್ಪ, ಸಂಜೀವ್, ಶಿವಕುಮಾರ್, ನಟರಾಜು, ಶಾಬುದ್ದೀನ್, ವಸುಂಧರ, ಪ್ರೇಮ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Tumkur News: ಗಣೇಶ ಮೂರ್ತಿ ವಿಸರ್ಜನೆಗೆ ಕೆರೆಗೆ ಇಳಿದಿದ್ದ ತಂದೆ-ಮಗ ಸೇರಿ ಮೂವರು ನೀರುಪಾಲು