ಚಿಕ್ಕನಾಯಕನಹಳ್ಳಿ : ಬೆಳಗುಲಿ ಗ್ರಾಮದ ರಂಗನಾಥ ಪ್ರೌಢಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಉಚಿತ ಟ್ಯೂಷನ್ ಕ್ಲಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತಾಲ್ಲೂಕು ಯೋಜನಾಧಿಕಾರಿ ಪ್ರೇಮಾನಂದ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಈ ಕಾರ್ಯಕ್ರಮ ಡಾ. ಹೇಮಾವತಿ ಅಮ್ಮನವರ ಆಶಯ ದಂತೆ ನಡೆಯುತ್ತಿದ್ದು, ಧರ್ಮಸ್ಥಳ ಸಂಘವು ಕರ್ನಾಟಕದಾದ್ಯಂತ ವಿಭಿನ್ನ ರೀತಿಯಲ್ಲಿ ಸಮಾಜದ ಕಾರ್ಯಗಳು ಮಾಡುತ್ತಿವೆ. ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಭೋದನೆಯನ್ನು ಧರ್ಮಸ್ಥಳ ಸಂಘದ ವತಿಯಿಂದ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಶ್ರಮದಿಂದ ಕಳುಹಿಸುತ್ತಾರೆ. ಅವರ ಶ್ರಮವನ್ನು ಗೌರವಿಸಿ ಈ ಟ್ಯೂಷನ್ ಮೂಲಕ ಉತ್ತಮ ಫಲಿತಾಂಶ ಪಡೆದು ಉನ್ನತ ವ್ಯಾಸಂಗಕ್ಕೆ ತೆರಳುವಂತೆ ವಿದ್ಯಾರ್ಥಿಗಳಿಗೆ ಹಾರೈಸಿದರು.
ಮುಖ್ಯ ಶಿಕ್ಷಕ ಧನಂಜಯ್, ಸಹಶಿಕ್ಷಕ ಪ್ರೇಮಸಾಗರ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ನೇತ್ರಾವತಿ, ಸೇವಾ ಪ್ರತಿನಿಧಿ ಆಶಾ ಇದ್ದರು.