ಬೆಂಗಳೂರು: ಎಂಎಸ್‌ಎಂಇ ಗಳ ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳನ್ನು ಪೂರೈಸಲು ಬಲವಾದ ಪೂರೈಕೆ ಹಣಕಾಸು ಸರಬರಾಜು ಸರಪಳಿಗಳನ್ನು ಒದಗಿಸಲು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಉಜ್ಜಿವನ್ ಎಸ್‌ಎಫ್‌ಬಿ), ಪ್ರಮುಖ ಸಪ್ಲೈ ಚೈನ್ ಫೈನಾನ್ಸ್ (ಎಸ್‌ಸಿಎಫ್) ಪರಿಹಾರ ಪೂರೈಕೆದಾರ ವೀಫಿನ್ ಸಲ್ಯೂಷನ್ಸ್ ಜೊತೆ ಮಹತ್ವದ ಪಾಲುದಾರಿಕೆಗೆ ಸಹಿ ಹಾಕಿದೆ. ಈ ಪಾಲುದಾರಿಕೆಯ ಮೂಲಕ, ಉಜ್ಜೀವನ್ ಎಸ್‌ಎಫ್‌ಬಿ, ವೀಫಿನ್‌ನ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಹಣಕಾಸಿನ ಪೂರೈಕೆ ಸರಪಳಿಯಾದ್ಯಂತ ಅಗತ್ಯವಾದ ಪರಿಹಾರಗಳನ್ನು ನೀಡುತ್ತದೆ.
ಇದರಲ್ಲಿ ಪೂರೈಕೆದಾರ ಮತ್ತು ಮಾರಾಟಗಾರರ ಆನ್‌ಬೋರ್ಡಿಂಗ್, ಲೋನ್ ಆರಿಜಿನೇಷನ್ ಸಲ್ಯೂಷನ್ (ಎಲ್ಒಎಸ್), ಲೋನ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ (ಎಲ್ಎಮ್ಎಸ್) ಮೂಲಕ ಕ್ರೆಡಿಟ್ ಅಂಡರ್‌ರೈಟಿಂಗ್, ಮತ್ತು ಡೆಲಿಂಕ್ವೆನ್ಸಿ ಮ್ಯಾನೇಜ್‌ಮೆಂಟ್ ಸಲ್ಯೂಷನ್ ಮೂಲಕ ಮೂಲಕ ಸಂಗ್ರಹಗಳ ನಿರ್ವಹಣೆ ಒಳಗೊಂಡಿರುತ್ತವೆ. ವೀಫಿನ್‌ನ ರಿಪೋರ್ಟಿಂಗ್ ಮತ್ತು ಬಿಸಿನೆಸ್ ಇಂಟೆಲಿಜೆನ್ಸ್ ಸಲ್ಯೂಷನ್ ನೆರವಿನಿಂದ ದೊರೆಯುವ ಸಮಗ್ರ ವಿಶ್ಲೇಷಣೆಯಿಂದ ಈ ಅಂಶಗಳಿಗೆ ಮತ್ತಷ್ಟು ಸಹಾಯವಾಗುತ್ತದೆ.
ಆರ್‌ಬಿಐ ಸಮಿತಿಯೊಂದು ಎಂಎಸ್‌ಎಂಇ ವಲಯದ 2019 ರ ವರದಿಯು ವಲಯದಲ್ಲಿನ ಒಟ್ಟಾರೆ ಸಾಲದ ಅಂತರವನ್ನು ರೂ 20-25 ಲಕ್ಷ ಕೋಟಿ ರೂಗಳು## ಎಂದು ಅಂದಾಜಿಸಿದೆ. ಉದ್ಯಮದ ಮತ್ತೊಂದು ವರದಿಯ ಪ್ರಕಾರ, ಭಾರತದಲ್ಲಿನ 64 ಮಿಲಿಯನ್‌ಗಿಂತಲೂ ಹೆಚ್ಚು ಎಮ್ಎಸ್ಎಮ್ಇ ಗಳಲ್ಲಿ, ಕೇವಲ 14 ಪ್ರತಿಶತದಷ್ಟಕ್ಕೆ ಮಾತ್ರ ಕ್ರೆಡಿಟ್ ಸುಲಭಲಭ್ಯವಾಗಿದೆ^^. ಮುಂಬರುವ ವರ್ಷಗಳಲ್ಲಿ ದೇಶದ ಎಮ್ಎಸ್ಎಮ್ಇ ಗಳ ಸಂಖ್ಯೆ 2.5 %** ಯೋಜಿತ ಸಿಎಜಿಆರ್ ದರದಲ್ಲಿ 6.3 ಕೋಟಿಯಿಂದ ಸರಿಸುಮಾರು 7.5 ಕೋಟಿಗೆ ಬೆಳೆಯುವ ನಿರೀಕ್ಷೆಯಿದೆ.
ಈ ಕ್ರೆಡಿಟ್ ಅಂತರವನ್ನು ಪರಿಹರಿಸುವಲ್ಲಿ ತಂತ್ರಜ್ಞಾನ ವಹಿಸಬೇಕಾದ ಪ್ರಮುಖ ಪಾತ್ರವನ್ನು ಗುರುತಿಸಿ ಮಾಡಿಕೊಂಡಿರುವ ವೀಫಿನ್ ಜೊತೆಗಿನ ಪಾಲುದಾರಿಕೆ, ರಾಷ್ಟ್ರದಾದ್ಯಂತ ಎಮ್ಎಸ್ಎಮ್ಇ ಗಳಿಗೆ ಆರ್ಥಿಕ ಪರಿಹಾರಗಳನ್ನು ವಿಸ್ತರಿಸುವ ಉಜ್ಜೀವನ್ ಎಸ್‌ಎಫ್‌ಬಿ ಉದ್ದೇಶದೊಂದಿಗೆ ಹೊಂದಿಕೆಯಾಗುತ್ತದೆ. ಈ ಉಪಕ್ರಮದಿಂದ, ಉಜ್ಜೀವನ್ ಎಸ್‌ಎಫ್‌ಬಿ ಗೆ ಸಪ್ಲೈ ಚೈನ್ ಫೈನಾನ್ಸಿಂಗ್ ಮೂಲಕ ಎಂಎಸ್‌ಎಂಇ ಗಳಿಗೆ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳನ್ನು ಒದಗಿಸಲು ಅನುಕೂಲವಾಗುತ್ತದೆ, ಸಾಂಪ್ರದಾಯಿಕ ಮಾದರಿಯಿಂದ ಸೃಷ್ಟಿಯಾಗಿರುವ ಅಂತರಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀ ಇಟ್ಟೀರ ಡೇವಿಸ್, “ವೀಫಿನ್ ಸಲ್ಯೂಷನ್ಸ್ ಜೊತೆ ಪಾಲುದಾರ ರಾಗಲು ನಮಗೆ ಸಂತೋಷವಾಗುತ್ತಿದೆ. ಇದು ಎಂಎಸ್‌ಎಂಇ ಗಳ ಕ್ರೆಡಿಟ್ ಸುಲಭಲಭ್ಯತೆಯನ್ನು ಹೆಚ್ಚಿಸಲು ನಮಗೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ನಮ್ಮ ಡಿಜಿಟಲ್ ಎಂಎಸ್‌ಎಂಇ ಕೊಡುಗೆಗಳು ಬಲಗೊಳ್ಳುತ್ತವೆ. ಈ ಸಹಯೋಗ ನಮ್ಮ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ; ಹೆಚ್ಚಿನ ಎಮ್ಎಸ್ಎಮ್ಇ ಗಳು ತಮ್ಮ ಬೆಳವಣಿಗೆಯ ಹಾದಿಯನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ.”
ವೀಫಿನ್ ಸಲ್ಯೂಷನ್ಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜಾ ದೇಬನಾಥ್, “ವೀಫಿನ್ ಜೊತೆ ಎಸ್‌ಸಿಎಫ್ ಪ್ರಯಾಣವನ್ನು ಆರಂಭಿಸಿರುವ ನಮ್ಮ ನಿರಂತರವಾಗಿ ಬೆಳೆಯುತ್ತಿರುವ ಗ್ರಾಹಕರ ಪಟ್ಟಿಗೆ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ. ಉಜ್ಜೀವನ್ ಎಸ್‌ಎಫ್‌ಬಿ ಯಂತಹ ಹಣಕಾಸು ಸಂಸ್ಥೆಗಳು ಎಸ್.ಸಿ.ಎಫ್ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವಲ್ಲಿ, ದೇಶಾದ್ಯಂತ ಇರುವ ಸೇವೆ ಸಿಗದ ಮತ್ತು ಕಡಿಮೆ ಸೇವೆ ಸಿಗುತ್ತಿರುವ ಗ್ರಾಹಕರನ್ನು ತಲುಪುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆ ಎಸ್.ಸಿ.ಎಫ್ ವ್ಯಾಪ್ತಿಯನ್ನು ವಿಸ್ತರಿಸಲು ಮಾತ್ರವಲ್ಲದೆ ನಮ್ಮ ಆರ್ಥಿಕತೆ ನಿರ್ಲಕ್ಷಿಸಿರುವ ವಿಭಾಗಗಳನ್ನು ಸಹ ತಲುಪುವಂತಹ ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯನ್ನು ಹೆಚ್ಚಿಸಲು ನಾವು ಸಜ್ಜಾಗಿದ್ದೇವೆ.”