Saturday, 14th December 2024

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅಂಕೋಲಾದಲ್ಲಿ ಗುಡ್ಡ ಕುಸಿದು ಅವಾಂತರ ಸೃಷ್ಟಿಯಾಗಿದೆ. ಈ ನಡುವೆ ಭಾರತೀಯ ಹವಮಾನ ಇಲಾಖೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.21ರ ಬೆಳಗ್ಗೆ 8.30ರ ತನಕ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಗುಡ್ಡ ಕುಸಿತ, ಹಳ್ಳಕೊಳ್ಳಗಳು ತುಂಬಿರುವುದು, ನದಿಗಳು ತುಂಬಿ ಹರಿಯುತ್ತಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ, ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕದ್ರಾ, ಕೊಡಸಳ್ಳಿ, ಸೂಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಗೇರುಸೊಪ್ಪ ಡ್ಯಾಂಗಳಿವೆ. ಜುಲೈ 20ರ ಮಾಹಿತಿಯಂತೆ ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ?, ಒಳಹರಿವು, ಹೊರ ಹರಿವು? ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಡ್ಯಾಂಗಳ ನೀರಿನ ಮಟ್ಟ

* ಕಾರವಾರ ತಾಲೂಕಿನಲ್ಲಿರುವ ಕದ್ರಾ ಡ್ಯಾಂ ಗರಿಷ್ಠ ಮಟ್ಟ 34.50. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 30.00. ಇಂದಿನ ನೀರಿನ ಮಟ್ಟ 29.32. ನೀರಿನ ಒಳಹರಿವು 42,453.0 ಕ್ಯುಸೆಕ್. ಹೊರ ಹರಿವು 44,586.0 ಕ್ಯೂಸೆಕ್ ಆಗಿದೆ.

* ಕಾರವಾರ ತಾಲೂಕಿನಲ್ಲಿರುವ ಕೊಡಸಳ್ಳಿ ಡ್ಯಾಂ ಗರಿಷ್ಠ ಮಟ್ಟ75.50. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 70.00. ಇಂದಿನ ನೀರಿನ ಮಟ್ಟ 69.75. ನೀರಿನ ಒಳಹರಿವು 24,494 ಕ್ಯುಸೆಕ್. ಹೊರ ಹರಿವು 25,937 ಕ್ಯೂಸೆಕ್ ಆಗಿದೆ.

* ಜೋಯಿಡಾ ತಾಲೂಕಿನಲ್ಲಿರುವ ಸೂಪಾ ಡ್ಯಾಂ ಗರಿಷ್ಠ ಮಟ್ಟ 564. ಇಂದಿನ ನೀರಿನ ಮಟ್ಟ 531. ನೀರಿನ ಒಳಹರಿವು 41,278.49 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.

* ಹಳಿಯಾಳ ತಾಲೂಕಿನಲ್ಲಿರುವ ತಟ್ಟಿಹಳ್ಳ ಡ್ಯಾಂ ಗರಿಷ್ಠ ಮಟ್ಟ 468.38. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 466.30. ಇಂದಿನ ನೀರಿನ ಮಟ್ಟ 458.69. ನೀರಿನ ಒಳಹರಿವು 6,560.07 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.

* ದಾಂಡೇಲಿ ತಾಲೂಕಿನಲ್ಲಿರುವ ಬೊಮ್ಮನಹಳ್ಳಿ ಡ್ಯಾಂ ಗರಿಷ್ಠ ಮಟ್ಟ 438.38. ಜಿಲ್ಲಾಡಳಿತ ನಿಗದಿ ಮಾಡಿರುವ ನೀರಿನ ಮಟ್ಟ 436.63 ಇಂದಿನ ನೀರಿನ ಮಟ್ಟ 436.28. ನೀರಿನ ಒಳಹರಿವು 5894.0 ಕ್ಯುಸೆಕ್. ಹೊರ ಹರಿವು 7287.0 ಕ್ಯೂಸೆಕ್ ಆಗಿದೆ.

* ಹೊನ್ನಾವರ ತಾಲೂಕಿನಲ್ಲಿರುವ ಗೇರುಸೊಪ್ಪ ಡ್ಯಾಂ ಗರಿಷ್ಠ ಮಟ್ಟ 55.00. ಇಂದಿನ ನೀರಿನ ಮಟ್ಟ 50.12. ನೀರಿನ ಒಳಹರಿವು 12,102 ಕ್ಯುಸೆಕ್. ಹೊರ ಹರಿವು 14,590.0 ಕ್ಯೂಸೆಕ್ ಆಗಿದೆ.

* ಲಿಂಗನಮಕ್ಕಿ ಡ್ಯಾಂ, ಸಾಗರ. ಶಿವಮೊಗ್ಗ. ಡ್ಯಾಂ ಗರಿಷ್ಠ ಮಟ್ಟ 1819.00. ಇಂದಿನ ನೀರಿನ ಮಟ್ಟ 1794.30. ನೀರಿನ ಒಳಹರಿವು 69,724.00 ಕ್ಯುಸೆಕ್. ಹೊರ ಹರಿವು 00 ಕ್ಯೂಸೆಕ್ ಆಗಿದೆ.