Monday, 16th September 2024

ಸಮಗ್ರ ವಾಹನ ಹಣಕಾಸು ಸೌಲಭ್ಯ ಒದಗಿಸಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಪಾಲುದಾರಿಕೆ ಮಾಡಿಕೊಂಡ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

• ದೇಶಾದ್ಯಂತ ಇರುವ ಗ್ರಾಹಕರಿಗೆ ವಾಹನ ಖರೀದಿಸಲು ಹಣಕಾಸು ಸೌಲಭ್ಯ ಒದಗಿಸುವ ಸಲುವಾಗಿ ಪಾಲುದಾರಿಕೆ
• ಖಾಸಗಿ ಬಳಕೆಯ ವಾಹನಗಳ ಆನ್-ರೋಡ್ ಬೆಲೆಯ ಶೇ.90ರವರೆಗೆ ಹಣಕಾಸು ಸೌಲಭ್ಯ nYd/

ಬೆಂಗಳೂರು:  ಕಾರು ಮಾಲೀಕರಾಗಬೇಕು ಎಂಬ ಗ್ರಾಹಕರ ಆಸೆಯನ್ನು ಸುಲಭವಾಗಿ ಪೂರೈಸುವ ಸಲುವಾಗಿ ಮತ್ತು ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸುವ ಸಲುವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ವಾಹನ ಖರೀದಿಗೆ ಸಮಗ್ರ ಹಣಕಾಸು ಸೌಲಭ್ಯ ದೊರಕಿಸಲು ಇಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ. ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಟೊಯೋಟಾ ವಾಹನಗಳನ್ನು ಸುಲಭವಾಗಿ ಲಭ್ಯವಾಗಿಸಲು ವಿನೂತನ ಮತ್ತು ಆಕರ್ಷಕ ಹಣಕಾಸು ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಈ ಪಾಲುದಾರಿಕೆ ಹೊಂದಿದೆ.

ಪಾಲುದಾರಿಕೆಯ ಪ್ರಮುಖ ಅಂಶಗಳು:
• ಸುಲಭ ಲಭ್ಯತೆ ಮತ್ತು ಕೈಗೆಟುಕುವಿಕೆ: ಈ ಪಾಲುದಾರಿಕೆಯ ಮೂಲಕ ಗ್ರಾಹಕರು ಖಾಸಗಿ ಬಳಕೆಗಾಗಿ ಖರೀದಿಸಲು ಬಯಸುವ ಯಾವುದೇ ಟೊಯೋಟಾ ವಾಹನಗಳ ಆನ್-ರೋಡ್ ಬೆಲೆಯ ಶೇ.90ರಷ್ಟು ಹಣಕಾಸು ಸೌಲಭ್ಯ ಪಡೆಯಬಹುದು. ಇಲ್ಲಿ ಯಾವುದೇ ಸ್ವತ್ತುಮರುಸ್ವಾಧೀನ ನಿಯಮ ಅಥವಾ ಭಾಗಶಃ ಪಾವತಿ ಶುಲ್ಕ ಹಾಕಲಾಗುವುದಿಲ್ಲ.
• ಯೂನಿಯನ್ ವೆಹಿಕಲ್ ಸ್ಕೀಮ್ ಅಡಿಯಲ್ಲಿ ಹಣಕಾಸು ಸೌಲಭ್ಯ: ಖಾಸಗಿ ವಾಹನ ಕೊಳ್ಳಲು ಬಯಸುವ ಗ್ರಾಹಕರು ಯೂನಿಯನ್ ವೆಹಿಕಲ್ ಸ್ಕೀಮ್ ಅಡಿಯಲ್ಲಿ ಹಣಕಾಸು ಸೌಲಭ್ಯ ಪಡೆಯಬಹುದು. 84 ತಿಂಗಳವರೆಗಿನ ಮರುಪಾವತಿ ಅವಧಿ ಆಯ್ಕೆಯನ್ನು ಗ್ರಾಹಕರು ಆಯ್ಕೆ ಮಾಡಬಹುದು. ಇಲ್ಲಿ ವಾರ್ಷಿಕವಾಗಿ 8.80%ರಿಂದ ಪ್ರಾರಂಭವಾಗುವ ಸ್ಪರ್ಧಾತ್ಮಕ ಬಡ್ಡಿದರಗಳು ಇರುತ್ತವೆ.
• ಯೂನಿಯನ್ ಪರಿವಾಹನ್ ಯೋಜನೆಯ ಅಡಿಯಲ್ಲಿ ಹಣಕಾಸು ಸೌಲಭ್ಯ: ವಾಣಿಜ್ಯ ವಾಹನಕ್ಕಾಗಿ ಯೂನಿಯನ್ ಪರಿವಾಹನ್ ಯೋಜನೆಯಡಿಯಲ್ಲಿ ಹಣಕಾಸು ಸೌಲಭ್ಯ ಪಡೆಯಬಹುದು. 60 ತಿಂಗಳವರೆಗಿನ ಮರುಪಾವತಿ ಅವಧಿ ಆಯ್ಕೆಗಳನ್ನು ಹೊಂದಬಹುದಾಗಿದ್ದು, ಸ್ಪರ್ಧಾತ್ಮಕ ಬಡ್ಡಿ ದರ ಇರುತ್ತದೆ.
• ವಿಸ್ತಾರ ಪ್ರದೇಶದಲ್ಲಿ ಲಭ್ಯತೆ: ಯೂನಿಯನ್ ಬ್ಯಾಂಕ್‌ ದೇಶದುದ್ದಕ್ಕೂ ವ್ಯಾಪಕ ನೆಟ್‌ವರ್ಕ್ ಹೊಂದಿದ್ದು, ಟೊಯೋಟಾ ಗ್ರಾಹಕರಿಗೆ ರಾಷ್ಟ್ರವ್ಯಾಪಿ ಹಣಕಾಸು ಸೌಲಭ್ಯಗಳನ್ನು ಸುಲಭವಾಗಿ ಒದಗಿಸುತ್ತದೆ.

ಹೊಸ ಪಾಲುದಾರಿಕೆ ಮತ್ತು ಯೋಜನೆ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸ್ ವೆಸ್ ಪ್ರೆಸಿಡೆಂಟ್ ಶ್ರೀ ಶಬರಿ ಮನೋಹರ್ ಅವರು, “ಟೊಯೋಟಾ ವಾಹನ ಖರೀದಿಸಲು ಬಯಸುವ ಗ್ರಾಹಕರಿಗೆ ರಾಷ್ಟ್ರದಾದ್ಯಂತ ವಾಹನ ಹಣಕಾಸು ಸೌಲಭ್ಯಗಳನ್ನು ಹೆಚ್ಚಿಸಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಪಾಲುದಾರಿಕೆ ಮೂಲಕ ವಾಹನದ ಫೈನಾನ್ಸಿಂಗ್ ಅನ್ನು ಹೆಚ್ಚು ಸರಳಗೊಳಿಸುವ ಮತ್ತು ಹೆಚ್ಚು ಸುಲಭವಾಗಿಸುವ ಮೂಲಕ ಅತ್ಯುತ್ತಮ ಗ್ರಾಹಕ ಅನುಭವಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಕಾಲಕ್ಕೆ ಸರಿಯಾಗಿ ನೆರವಾಗಿ ಗ್ರಾಹಕರ ವಾಹನ ಖರೀದಿ ಪ್ರಕ್ರಿಯೆಯನ್ನು ಆನಂದದಾಯಕವನ್ನಾಗಿಸಲು ನಾವು ಬದ್ಧರಾಗಿದ್ದೇವೆ. ಗ್ರಾಹಕರ ತೃಪ್ತಿಯನ್ನು ಬಯಸುವ ಸಂಸ್ಥೆಯಾಗಿ ನಮ್ಮ ಪ್ರಾಥಮಿಕ ಗಮನ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವುದೇ ಆಗಿರುತ್ತದೆ. ಹಾಗಾಗಿ ವಾಹನ ಖರೀದಿ ಸುಲಭಗೊಳಿಸಲು ನೆರವಾಗುವ ನವೀನ ಉತ್ಪನ್ನಗಳು ಮತ್ತು ಸರ್ವೀಸ್ ಗಳನ್ನು ನಿರಂತರವಾಗಿ ಪರಿಚಯಿಸುವ ಉದ್ದೇಶ ಹೊಂದಿದ್ದೇವೆ. ಹೊಸ ಪಾಲುದಾರಿಕೆಯ ಮೂಲಕ ಟೊಯೋಟಾ ವಾಹನವನ್ನು ಹೊಂದುವ ಆಸೆ ಇರುವ ಗ್ರಾಹಕರಿಗೆ ದೇಶಾದ್ಯಂತ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಬೆಂಬಲವನ್ನು ಒದಗಿಸುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.

ಈ ಕುರಿತು ಮಾತನಾಡಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಶ್ರೀ ಅರುಣ್ ಕುಮಾರ್ ಅವರು, “ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಿರುವ ನಾವು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಜೊತೆಗೆ ಪಾಲುದಾರಿಕೆ ಹೊಂದಲು ಸಂತೋಷ ಪಡುತ್ತೇವೆ. ರಾಷ್ಟ್ರವ್ಯಾಪಿ ಇರುವ ಗ್ರಾಹಕರ ವ್ಯಾಪಕ ಶ್ರೇಣಿಗೆ ಹಣಕಾಸು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆಯು ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತದಾದ್ಯಂತ ಇರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಿಸ್ತಾರವಾದ ಶಾಖೆಗಳು ಈ ಪಾಲುದಾರಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ಡಿಜಿಟಲ್ ವಿಧಾನಗಳ ಮೂಲಕವೂ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಈ ಸೌಲಭ್ಯ ಹೊಸ ಟೊಯೋಟಾ ವಾಹನವನ್ನು ಖರೀದಿಸುವ ಪ್ರಕ್ರಿಯೆಯನ್ನು ಸುಲಭವಾಗಿಸುತ್ತದೆ ಮತ್ತು ಅನುಕೂಲಕರವಾಗಿಸುತ್ತದೆ ಎಂದು ನಾವು ನಂಬಿದ್ದೇವೆ. ಸ್ವಯಂ ಹಣಕಾಸು ಪ್ರಕ್ರಿಯೆಯನ್ನು ಸುಗಮಗೊಳಿಸುವುದು ನಮ್ಮ ಬದ್ಧತೆಯಾಗಿದ್ದು, ಆ ಮೂಲಕ ಉತ್ಪನ್ನ ಮತ್ತು ಸರ್ವೀಸ್ ಎರಡೂ ವಿಭಾಗದಲ್ಲಿ ಉತ್ಕೃಷ್ಟ ಗ್ರಾಹಕ ಸೇವೆ ಒದಗಿಸುವ ಗುರಿ ಹೊಂದಿದ್ದೇವೆ” ಎಂದು ಹೇಳಿದರು.

ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾ, ಅರ್ಬನ್ ಕ್ರೂಸರ್, ಹೈರೈಡರ್, ಪಾರ್ಚುನರ್, ಲೆಜೆಂಡರ್, ಕ್ಯಾಮ್ರಿ ಹೈಬ್ರಿಡ್, ವೆಲ್ ಫೈರ್, ಎಲ್ ಸಿ 300, ಗ್ಲಾಂಜಾ ಮತ್ತು ರುಮಿಯಾನ್ ಸೇರಿದಂತೆ ಟಿಕೆಎಂ ನ ಸಂಪೂರ್ಣ ಉತ್ಪನ್ನ ಶ್ರೇಣಿಯ ಮೇಲೆ ಹೊಸದಾಗಿ ಪ್ರಾರಂಭಿಸಲಾದ ಯೋಜನೆ ಅನ್ವಯವಾಗುತ್ತದೆ. ಜೊತೆಗೆ ಹೊಸದಾಗಿ ಬಿಡುಗಡೆಯಾಗಿರುವ ಅರ್ಬನ್ ಕ್ರೂಸರ್ ಟೈಸರ್‌ ಮೇಲೆ ಕೂಡ ಈ ಯೋಜನೆ ಲಭ್ಯವಾಗುತ್ತದೆ.

ಟಿಕೆಎಂನ ಅದ್ಭುತ ಎಸ್ ಯು ವಿ ಉತ್ಪನ್ನ ಶ್ರೇಣಿಗೆ ಇತ್ತೀಚಿನ ಸೇರ್ಪಡೆಯಾಗಿರುವ ಹೊಚ್ಚ ಹೊಸ ಅರ್ಬನ್ ಕ್ರೂಸರ್ ಟೈಸರ್ ಟೊಯೋಟಾದ ಶ್ರೀಮಂತ ಎಸ್ ಯು ವಿ ಪರಂಪರೆಯನ್ನು ಮುಂದಕ್ಕೆ ಸಾಗಿಸುವ ವಿಶಿಷ್ಟ ಉತ್ಪನ್ನವಾಗಿದೆ. ಅದ್ಭುತ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಒದಗಿಸುವ ಈ ಉತ್ಪನ್ನವು ಸೊಗಸಾದ ಬಾಹ್ಯ ವಿನ್ಯಾಸ ಹೊಂದಿದೆ. ಅರ್ಬನ್ ಕ್ರೂಸರ್ ಟೈಸರ್ ಈ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ: 1.0ಲೀ ಟರ್ಬೊ, 1.2ಲೀ ಪೆಟ್ರೋಲ್ ಮತ್ತು ಇ- ಸಿ ಎನ್ ಜಿ.
ವರ್ಷದಿಂದ ವರ್ಷಕ್ಕೆ ಸುಲಭ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತಾ ಬಂದಿರುವ ಟಿಕೆಎಂ ಸಂಸ್ಥೆಯು ಸಮಯೋಚಿತವಾಗಿ ಮತ್ತು ಅವಶ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಹಕರ ವಾಹನ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದೆ ಮತ್ತು ವಾಹನ ಖರೀದಿ ಬಳಿಕದ ಅನುಭವವನ್ನು ಉತ್ತಮಗೊಳಿಸುತ್ತಿದೆ. ಹಣಕಾಸು ಉತ್ಪನ್ನಗಳನ್ನು ಒದಗಿಸುವ ಇನ್ ಹೌಸ್ ಸಂಸ್ಥೆ ಆಗಿರುವ ಟೊಯೋಟಾ ಫೈನಾನ್ಷಿಯಲ್ ಸರ್ವಿಸಸ್ (ಟಿಎಫ್ಎಸ್) ಮೂಲಕ ಗ್ರಾಹಕರಿಗೆ ಈಗಾಗಲೇ ಕಂಪನಿಯು ಅವರ ಅಗತ್ಯಕ್ಕೆ ತಕ್ಕಂತೆ ಹಲವಾರು ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಅದರ ಜೊತೆ ಹೊಸ ಯೋಜನೆಯು ಮತ್ತಷ್ಟು ಗ್ರಾಹಕರಿಗೆ ನೆರವಾಗಲಿದೆ. ಹೊಸ ವಾಹನ ಖರೀದಿಯ ಜೊತೆಗೆ ಬಳಸಿದ ಕಾರುಗಳ ಖರೀದಿ ಮತ್ತು ಅವರುಗಳ ಸರ್ವೀಸ್ ಗೆ ಪ್ಯಾಕೇಜ್ ಗಳನ್ನು ಒದಗಿಸುವ ಮೂಲಕ ಗ್ರಾಹಕರ ಅನುಭವವನ್ನು ಟೊಯೋಟಾ ಸಂಸ್ಥೆ ಉತ್ಕೃಷ್ಟಗೊಳಿಸುತ್ತಿದೆ.

ಎಲ್ಲದರ ಜೊತೆಗೆ ಕಂಪನಿಯು ಇತ್ತೀಚೆಗೆ ಕಂಪನಿ ಮಾಲೀಕತ್ವದ ತನ್ನ ಎರಡನೇ ಟೊಯೋಟಾ ಯೂಸ್ಡ್ ಕಾರ್ ಕಾರ್ ಔಟ್ಲೆಟ್ (ಟಿಯುಸಿಓ) ಅನ್ನು ಪ್ರಾರಂಭಿಸಿತು. ನವದೆಹಲಿಯಲ್ಲಿ “ಟೊಯೋಟಾ ಯು-ಟ್ರಸ್ಟ್” ಬ್ರಾಂಡ್ ಹೆಸರಿನಲ್ಲಿ ಈ ಔಟ್ ಲೆಟ್ ಕಾರ್ಯನಿರ್ವಹಿಸುತ್ತಿದೆ. ಈ ಮಳಿಗೆಗಳು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತವಾದ ಬಳಸಿದ ಕಾರುಗಳನ್ನು ಒದಗಿಸುತ್ತದೆ. ಈ ಮೂಲಕ ಗ್ರಾಹಕರಿಗೆ ಟೊಯೋಟಾ ಕಾರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಅನುಕೂಲತೆ ಮತ್ತು ಮನಃಶಾಂತಿ ಒದಗಿಸುತ್ತದೆ. ವಿಶೇಷವಾಗಿ ಟಿಕೆಎಂ ರಾಷ್ಟ್ರವ್ಯಾಪಿ 683 ಗ್ರಾಹಕ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ.

Leave a Reply

Your email address will not be published. Required fields are marked *