ಚಿಕ್ಕನಾಯಕನಹಳ್ಳಿ : ಹಳೆಯೂರು ಶ್ರೀ ಆಂಜನೇಯ ಸ್ವಾಮಿ ಜಾತ್ರೆಯ ಬ್ರಹ್ಮ ರಥೋತ್ಸವದ ದಿನದಂದು ದೇವಾಂಗ ಜನಾಂಗದವರು ಸೇರಿದಂತೆ ಕೆಲವು ಸಮುದಾಯದವರು ನಡೆಸುವ ಸಂಪ್ರದಾಯದAತೆ ಪಟ್ಟಣದಲ್ಲಿ ಉಪಾದಾನ ನಡೆಸಲಾಯಿತು.
ಕುಟುಂಬದಲ್ಲಿರುವ ಗಂಡು ಮಕ್ಕಳು, ಹಿರಿಯರು, ಹಬ್ಬದ ದಿನದಂದು ಬೆಳಗ್ಗೆ ಶುಭ್ರವಾಗಿ ಮಡಿಯುಟ್ಟು ತಾಮ್ರದ ಸಣ್ಣ ಪಾತ್ರೆ ಅಥವಾ ಬವನಾಸಿ ಪಡೆದು ಅದಕ್ಕೆ ಮೂರು ನಾಮ ಹಚ್ಚಿ ಪೂಜೆ ಸಲ್ಲಿಸಿ ಜನಾಂಗದ ಐದು ಮನೆಗಳಿಗೆ ಉಪಾದಾನ ಪಡೆಯಲು ತೆರಳುತ್ತಾರೆ. ಆ ಮನೆಯವರು ಕೈ ಭಿಕ್ಷೆಗೆ ಬರುವವರ ಕೈಯಲ್ಲಿರುವ ತಾಮ್ರದ ಪಾತ್ರೆ ಅಥವಾ ಬವನಾಸಿಗೆ ಪೂಜೆ ಮಾಡಿ ಅಕ್ಕಿ, ರಾಗಿಯ ಹಿಟ್ಟು ಮತ್ತು ಕಾಣಿಕೆಯನ್ನು ಹಾಕುತ್ತಾರೆ.
ಅಲ್ಲಿಂದ ಬಂದ0ತಹ ಪದಾರ್ಥಗಳಿಂದ ಆಹಾರ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ದಾಸಪ್ಪನವರನ್ನು ಕರೆದು ಪೂಜೆ ಸಲ್ಲಿಸಿ ಅವರಿಗೆ ಊಟ ಬಡಿಸಲಾಗುತ್ತದೆ. ಪ್ರತಿ ವರ್ಷವೂ ಈ ಸಂಪ್ರದಾಯವನ್ನು ನಡೆಸುತ್ತಾರೆ.