Sunday, 15th December 2024

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದ ಮಳೆ: ಶಾಲಾ – ಕಾಲೇಜುಗಳಿಗೆ ರಜೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ದಿನದಿಂದ ಎಡಬಿಡದೆ ಸುರುಯುತ್ತಿರುವ ಮಳೆ ಹಿನ್ನಲೆಯಲ್ಲಿ ಜಿಲ್ಲೆಯಾಧ್ಯಾಂತ ಶಾಲಾ – ಕಾಲೇಜುಗಳಿಗೆ, ಇಂದು ಬೆಳಗ್ಗೆ ರಜೆ ಘೋಷಣೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರ ಸೂಚನೆಯಂತೆ ಇಂದು ರಜೆ ಘೋಷಣೆ ಮಾಡಲಾಗಿದ್ದು ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಮುಂದುವರೆದರೆ ಈ ಸೂಚನೆ ನೀಡಿದ್ದಾರೆ.

ಘಟ್ಟ ಪ್ರದೇಶವಾದುದರಿಂದ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ಬರುವುದಕ್ಕೆ ಕಷ್ಟವಾಗುತ್ತೆ, ಹೀಗಾಗಿ ರಜೆ ಘೋಷಣೆ ಮಾಡಲಾ ಗಿದ್ದು ,ಮಕ್ಕಳ ಸುರಕ್ಷಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ರಜೆಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಆದರೆ ರಜೆ ಘೋಷಣೆ ತಡವಾಗಿ ಮಾಡಿದ್ದ ರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಅತ್ತ ಮನೆಯನ್ನೂ ತೊರೆದು ಇತ್ತ ಶಾಲೆಗೆ ತೆರಳಿದರೆ ಶಾಲೆಯೂ ಇಲ್ಲದೆ ಅತಂತ್ರವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿದ್ದು ವಿದ್ಯಾರ್ಥಿಗಳ ಪರಿಸ್ಥಿತಿಗೆ ಸಾರ್ವಜನಿಕರು ಹೆಗಲಾಗಿದ್ದಾರೆ. ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ತಡವಾಗಿ ರಜೆ ಘೊಇಷಣೆ ಮಾಡಿದರೆ ಹೇಗೆ ಎನ್ನುವ ಮಾತೂ ಸಹ ಕೇಳಿ ಬಂದಿದೆ. ನಿನ್ನಯೇ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು.

***

ಈಗಾಗಲೇ ಶಾಲೆಗೆ ಹೋಗಲು ಮಗನನ್ನ ನಮ್ಮನೆಯವರು ಬಸ್ ಹತ್ತಿಸಿ ಬಂದಿದ್ದಾರೆ. ಬಸ್ ಹತ್ತಿಸಲು ಸುಮಾರು ಆರು ಕಿಲೋ ಮೀಟರ್ ಬೈಕಿನಲ್ಲಿ ಹೋಗಬೇಕು. ನಂತರ ಬಸ್ ನಲ್ಲಿ 8 ಕಿಲೋ ಮೀಟರ್ ಶಾಲೆಗೆ ಹೋಗಬೇಕು ಇವರು ವಾಪಸ್ ಮನೆಗೆ ಬಂದಮೇಲೆ ತಿಳಿದದ್ದು ಶಾಲೆಗೆ ರಜಾ ಎಂದು. ಈಗ ವಾಪಸ್ ಹೋದರೆ ಬಸ್ ಗೆ ಅವನು ಹೋಗಿರುತ್ತಾನೆ. ಅತ್ತ ಶಾಲೆ ಇಲ್ಲ ವೆಂದರೆ ಅವನು ವಾಪಸ್ ಆಗೋದು ಹೇಗೆ. ಇವರು ಕರೆತರಲು ಹೋಗಲು ಸಾಧ್ಯವಿಲ್ಲ. ಶಾಲೆಗೆ ಮೊಬೈಲ್ ತೆದುಕೊಂಡು ಹೋಗಲ್ಲ. ಸಂಪರ್ಕ ಸಾಧ್ಯವಿಲ್ಲ. ಇದು ಈ ಭಾಗದ ಎಲ್ಲರ ಮನೆ ಮಕ್ಕಳ ಕಥೆ. ರಾತ್ರೆಯೇ ಈ ಸುದ್ದಿ ತಿಳಿದಿದ್ದರೆ ಒಳ್ಳೆಯದಿತ್ತು ಎನ್ನುವುದು ಯಲ್ಲಾಪುರ ತಾಲೂಕಿನ ಹಲವಾರು ಗ್ರಾಮಗಳ ಪಾಲಕರದ್ದಾಗಿದೆ.