Saturday, 23rd November 2024

ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಗೆ ಡಿಸಿಜಿ ಭೇಟಿ

ಶಿರಸಿ: ಜಿಲ್ಲಾ ಗೃಹರಕ್ಷಕದಳ ದ ಕಾರವಾರ ಕಛೇರಿಗೆ . ಉಪ ಮಹಾ ಸಮಾದೇಷ್ಟ, ಗೃಹರಕ್ಷಕದಳ ಹಾಗೂ ಉಪ ನಿರ್ದೇಶಕರು, ಐ.ಪಿ.ಎಸ್ ಅಕ್ಷಯ್ ಎಂ. ಹಾಕೆ ಶುಕ್ರವಾರ ಅಧಿಕೃತ ಭೇಟಿ ನೀಡಿ ಕಛೇರಿ ಕಡತಗಳನ್ನು ಪರಿಶೀಲಿಸಿದರು.

ಕಾಲ ಕಾಲಕ್ಕೆ ಗೃಹರಕ್ಷಕರಿಗೆ ಸೂಕ್ತ ಸಲಹೆ ತರಬೇತಿ ನೀಡಬೇಕು ಮತ್ತು ಅಗ್ನಿಶಾಮಕ ಮತ್ತು ಇತರೆ ಇಲಾಖೆ ಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದರು. ಗೃಹರಕ್ಷಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸುವಂತೆ ಸಮಾದೇಷ್ಟರಿಗೆ ಸೂಚನೆ ನೀಡಿದರು.

ಉ.ಕ ಜಿಲ್ಲೆಯಲ್ಲಿ ಪೌರ ರಕ್ಷಣಾ ಪಡೆಗಳನ್ನು ಇನ್ನಷ್ಟು ಮುನ್ನೆಲೆಗೆ ತರಲು ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಸಮಾದೇಷ್ಟರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರಾದ ಡಾ. ಸಂಜು ತಿಮ್ಮಣ್ಣ ನಾಯಕ ಮತ್ತು ಜಿಲ್ಲಾ ಬೋಧಕ ರಘು ಬಿ.ಸಿ, ಕಛೇರಿಯ ಪ್ರಥಮ ದರ್ಜೆ ಸಹಾಯಕ ಶ್ರೀನಿವಾಸ ನಾಯಕ , ದ್ವಿತೀಯ ದರ್ಜೆ ಸಹಾಯಕಿ ಮಧು. ಎಚ್. ಹಾಗೂ ಇತರ ಗೃಹ ರಕ್ಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಧಿಕೃತವಾಗಿ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಗೌರವ ವಂದನೆಯನ್ನು ಡಿ.ಸಿ. ಜಿ ರವರರಿಗೆ ನೀಡಲಾಯಿತು.