ಬೆಂಗಳೂರು: ಉತ್ತರಾಖಂಡದ ಎತ್ತರದ ಸ್ಥಳ ಸಹಸ್ರಸ್ಥಳ್ ಮೈಯಾಳಿಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ 19 ಜನರ ತಂಡದಲ್ಲಿ ೮ ಮೃತಪಟ್ಟಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಉಳಿದವರ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದಲ್ಲಿ ಪ್ರಾಣ ಕಳೆದುಕೊಂಡ ನಾಲ್ವರು ಚಾರಣಿಗರಲ್ಲಿ, ಹೆಚ್ಚಾಗಿ ಬೆಂಗಳೂರಿನವರಾಗಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಗುರುತು ತಿಳಿದುಬಂದಿಲ್ಲ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಉತ್ತರಾಖಂಡದ ಸಹಸ್ರಸ್ಥಳ್ನಲ್ಲಿ ಸಿಕ್ಕಿಬಿದ್ದಿರುವ ಇತರ ಚಾರಣಿಗರ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಗತಿಯಲ್ಲಿದ್ದು, ಗರ್ವಾಲ್‌ನ ಜಿಲ್ಲಾ ಮ್ಯಾಜಿ ಸ್ಟ್ರೇಟ್ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಟ್ರೆಕ್ಕಿಂಗ್ ಅನ್ನು ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಶನ್ ಆಯೋಜಿಸಿದೆ ಎಂದು ತಿಳಿದುಬಂದಿದೆ. ಚಾರಣಿಗರ ತಂಡದಲ್ಲಿ ಒಟ್ಟು 19 ಚಾರಣಿಗರು, ನಾಲ್ವರು ಮಾರ್ಗದರ್ಶಿಗಳಿದ್ದಾರೆ
ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯವಾಗಿ ಲಭ್ಯ ಹೆಲಿಕಾಪ್ಟರ್ಗಳು ಬಳಕೆಯಾಗಿವೆ.