Friday, 20th September 2024

ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿಯಬಾರದು: ವಲಿಭಾಷಾ

ತುಮಕೂರು: ಪ್ರತಿಯೊಬ್ಬ ಮಗುವಿಗೆ ಬಾಲ್ಯದಿಂದ ಪದವಿಯವರೆಗೆ ಶಿಕ್ಷಣ ದೊರೆಯುವಂತೆ ಪೋಷಕರು ಕಾಯ್ದುಕೊಂಡರೆ ಅಂತಹ ಮಗು ಶಿಕ್ಷಣದಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಜಿಲ್ಲಾ ಎಸ್ಪಿ ವಲಿಭಾಷಾ  ತಿಳಿಸಿದರು.
 ನಗರದ ಗೋಲ್ಡನ್ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪೂರ್ವ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ಬದುಕು ಕಟ್ಟುವುದಕ್ಕೆ ವಿದ್ಯಾಭ್ಯಾಸ ಒಂದೇ ದಾರಿದೀಪವಾಗಿದ್ದು ಮಕ್ಕಳನ್ನು ವಿದ್ಯಾ ಭ್ಯಾಸದಲ್ಲಿ ಹಿಂದುಳಿಯದಂತೆ ಗಮನಿಸಬೇಕಾಗಿದೆ ಯಾವುದೇ ವರ್ಗದ ಜನರು ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರಿಗೆ ಶಿಕ್ಷಣದ ಅವಶ್ಯಕತೆ ಹೆಚ್ಚಿದ್ದು ಪ್ರತಿ ಕುಟುಂಬದವರು ತಮ್ಮ ಮಕ್ಕಳಿಗೆ ಶಿಕ್ಷಣ ಇಲ್ಲದ ಕೆಲಸ ಹಚ್ಚಬಾರದು ಮೊದಲು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ ಎಂದು ಸಮುದಾಯದ ಜನರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಮಹಮ್ಮದ್ ರಫಿ ಅಹಮದ್, ಹಮ್ಜಾ ಹುಸೇನ್ ಎಸ್ಪಿ ಕಮಾಂಡೆಂಟ್ ಕೆ.ಎಸ್.ಆರ್.ಪಿ, ಮುಖಂಡರಾದ ಇಕ್ಬಾಲ್ ಅಹಮದ್, ವೇಕ್ಫ್ ಅಧ್ಯಕ್ಷರಾದ ಆಫ್ರೊಜ್ ಅಹಮದ್ ಸೇರಿದಂತೆ ಬೆಂಗಳೂರು ಹಾಗೂ  ಸರ್ಕಾರಿ ನೌಕರರು, ಮುಖಂಡರು ಉಪಸ್ಥರಿದ್ದರು.