Saturday, 14th December 2024

ವಂದೇ ಮಾತರಂ ಯುವ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ

ಮಾನ್ವಿ: ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಮಂಗಳವಾರ ವಂದೇ ಮಾತರಂ ಯುವ ಸಂಘ ಹಾಗೂ ಗ್ರಾಮಸ್ಥರಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ವಂದೇ ಮಾತರಂ ವೃತ್ತದ ಉದ್ಘಾಟನೆಯನ್ನು ಚೀಕಲಪರ್ವಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ನೆರವೇರಿಸಿದರು.

ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರನ್ನು ಸ್ಮರಿಸಿ ಮೇಣದ ಬತ್ತಿ ಗಳನ್ನು ಹಚ್ಚುವ ಮೂಲಕ ಮೌನಾಚರಣೆ ಹಾಗೂ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ ಚನ್ನಬಸವ ಬಿ.ಪಾಟೀಲ್, ಶೇಕಪ್ಪ, ಅಖಿಲ ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಚನ್ನರೆಡ್ಡಿ, ಹಾಗೂ ಮಾಜಿ.ಹಾಲಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಂದೇ ಮಾತರಂ ಯುವ ಸಂಘದ ಅಧ್ಯಕ್ಷರಾದ ಡಾ.ಮಹಿಬೂಬ್ ಮದ್ಲಾಪುರ, ಗ್ರಾ,ಪಂ.ಅಧ್ಯಕ್ಷೆ ಲಕ್ಮಿö್ಮ ವೆಂಕಟೇಶ, ಸದಸ್ಯರಾದ ರುದ್ರಗೌಡ, ಡಾ.ಪ್ರಜ್ಞಾ ಹರಿಪ್ರಸಾದ್,ಶರಣಬಸವ ದೇವರು, ಮುಖಂಡರಾದ ತಿಮ್ಮರೆಡ್ಡಿ ಭೋಗವತಿ, ಸಿದ್ದರಾಮಯ್ಯ ಸ್ವಾಮಿ,ತಾಯಪ್ಪ ಬಿ.ಹೊಸೂರು,ವಿರೇಶನಾಯಕ ಬೆಟ್ಟದೂರು, ಸೇರಿದಂತೆ ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು,ಗ್ರಾಮಸ್ಥಾರು ಇದ್ದರು.