ಗುಬ್ಬಿ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ಗೆಲ್ಲಲಾಗದ ವ್ಯಕ್ತಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ವಾಸಣ್ಣನವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ದಲಿತ ಮುಖಂಡ ಕೊಡಿಯಾಲ ಮಹದೇವ್ ಕಾಂಗ್ರೆಸ್ ಮುಖಂಡ ಜಿಎಸ್ ಪ್ರಸನ್ನಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಅಭಿರುದ್ದಿಬಗ್ಗೆ ಸಂಸದರನ್ನು ಪ್ರಶ್ನಿಸುವುದನ್ನು ಬಿಟ್ಟು ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ತಾಲೂಕಿನಲ್ಲಿ ಜಾತಿ ರಾಜಕೀಯ ಹುಟ್ಟು ಹಾಕುತ್ತಿರುವುದು ನೀವು ಮತ್ತು ನಿಮ್ಮ ಸಂಬಂಧಿ ಸಂಸದರು, 20 ವರ್ಷಗಳಿಂದ ಶಾಸಕರ ಅಭಿವೃದ್ಧಿಯ ಕೆಲಸಗಳೆನೆಂದು ಜನತೆಗೆ ತಿಳಿದಿದೆ ವಾಸಣ್ಣನವರು ನಿಮ್ಮ ಮಾತಿಗೆ ಉತ್ತರಿಸುವ ಅಗತ್ಯವಿಲ್ಲ ಬಹಿರಂಗ ಚರ್ಚೆಗೆ ಆಹ್ವಾನಿಸಿ ವಾಸಣ್ಣನವರ ಅಭಿಮಾನಿಗಳಾದ ನಾವು ಉತ್ತರಿಸುತ್ತೇವೆ ಎಂದು ಕಿಡಿಕಾರಿ ದರು.
ಮುಖಂಡ ಚನ್ನಬಸವಣ್ಣ ಮಾತನಾಡಿ ವಾಸಣ್ಣನವರ ಸಾಮರ್ಥ್ಯವನ್ನು ತಿಳಿದುಕೊಂಡು ರಾಜ್ಯ ನಾಯಕರು ಕಾಂಗ್ರೆಸ್ ಗೆ ಆಹ್ವಾನಿಸಿದ್ದಾರೆ. ರಾಮೇಗೌಡರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದಾರೆ ವಲಸೆ ಬಂದಿರುವವರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ತಿಳಿಸಿ ದರು.
ಮುಖಂಡ ಈಶ್ವರಯ್ಯ ಮಾತನಾಡಿ 20 ವರ್ಷಗಳಿಂದ ತಾಲೂಕಿನಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಲ್ಲಾ ಜನಾಂಗವನ್ನು ಒಗ್ಗೂಡಿಸುವ ಶಕ್ತಿ ವಾಸಣ್ಣನವರಿಗಿದೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದು ತಿಳಿಸಿದರು.
ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಮಾತನಾಡಿ ನಿಮ್ಮ ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ವಾಸಣ್ಣ ನವರ ಪಡೆಯನ್ನು ತಾಲೂಕಿನಾದ್ಯಂತ ಹೆಚ್ಚಿಸುತ್ತೇವೆ ಅತ್ಯಧಿಕ ಮತಗಳಿಂದ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಪ್ಪ, ಕಿಟ್ಟದಕುಪ್ಪೆ ನಾಗರಾಜು, ಈಶ್ವರಯ್ಯ, ಜಿ ಹರಿವೆಸಂದ್ರ ಕೃಷ್ಣಪ್ಪ, ಕೊಪ್ಪ ನಾಗರಾಜ್, ಕೋಟೆ ಕಲ್ಲೇಶ್, ಶ್ರೀನಿವಾಸ್, ರಂಗಧಾಮು, ಅಳಿಲುಘಟ್ಟ ರಮೇಶ್, ಸತೀಶ್ ಮುಂತಾದವರಿದ್ದರು.