Wednesday, 9th October 2024

ಜಯಕರ್ನಾಟಕ ಜನಪರ ವೇದಿಕೆ, ಜೇಮ್ಸ್ ಫೌಂಡೇಶನ್ ವತಿಯಿಂದ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭ

ತಿಪಟೂರು: ನಗರದ ಅರಳೀಕಟ್ಟೆ ವೃತ್ತದಲ್ಲಿ ಶ್ರೀ ಸತ್ಯ ಗಣಪತಿ ೯೩ನೇ ವಿಸರ್ಜನಾ ಮಹೋತ್ಸವ ಹಾಗೂ ಕನ್ನಡ ರಾಜ್ಯೋ ತ್ಸವದ ಅಂಗವಾಗಿ ತಿಪಟೂರು ಜಯಕರ್ನಾಟಕ ಜನಪರ ವೇದಿಕೆ, ಜೇಮ್ಸ್ ಫೌಂಡೇಶನ್ ಮತ್ತು ಹೂ-ಹಣ್ಣು, ತರಕಾರಿ ವ್ಯಾಪಾರಿಗಳ ಸಂಘ ಹಾಗೂ ತರಕಾರಿ ಗಂಗಾಧರ್ ಸ್ನೇಹವೃಂದದ ವತಿಯಿಂದ ನಡೆದ ಜಿಲ್ಲಾ, ತಾಲ್ಲೂಕು ರಾಜ್ಯೋತ್ಸವವ ಪ್ರಶಸ್ತಿ ಪರಸ್ಕೃತರು, ಐಎಎಸ್/ಕೆಎಎಸ್ ಉತ್ತೀರ್ಣರಾದವನ್ನು ಗುರ್ತಿಸಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಜಿ.ಎಸ್. ಶ್ರೀಧರ್, ಕಳೆದೆರಡು ವರ್ಷಗಳಿಂದ ಕರೋನಾ ನಂತರದಲ್ಲಿ ಉತ್ತಮ ಮಳೆ-ಬೆಳೆಗಾಗಿ ತಾಲ್ಲೂಕಿನ ಜನರೂ ಸೇರಿದಂತೆ ರಾಜ್ಯದ ಜನರು ನೆಮ್ಮದಿಯಿಂದಿದ್ದಾರೆ.

ಇದೇ ರೀತಿಯ ವಾತಾವರಣ ಮುಂದೆಯೂ ಇದ್ದು ಜನರು ಮಳೆಯಿಂದ ಬೆಳೆ ತೆಗೆದು ಇನ್ನೂ ಹೆಚ್ಚಿನ ವಿಜೃಂಬಣೆಯಿAದ ಇಂತಹ ಉತ್ಸವಗಳನ್ನು ಆಚರಿಸುವಂತಾಗಲಿ ಎಂದರು.

ನಗರಸಭೆ ಸದಸ್ಯೆ ಡಾ.ಓಹಿಲಾ ಗಂಗಾಧರ್ ಮಾತನಾಡಿ, ನಮ್ಮ ಒಕ್ಕೂಟದಿಂದ ರಾಜ್ಯ ಮತ್ತು ಜಿಲ್ಲೆಗಳಲ್ಲಿ ವಿವಿಧ ಸೇವೆಯನ್ನು ಸಲ್ಲಿಸಿರುವ ಸಾಧಕರನ್ನು ಗುರ್ತಿಸಿ ಅಭಿನಂದನೆ ಯನ್ನು ಸಲ್ಲಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ನಮ್ಮ ಒಕ್ಕೂಟ ಮತ್ತು ಸಂಸ್ಥೆಯಿ0ದ ಮುಂದೆಯೂ ಇದೇ ರೀತಿಯ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಕಾ0ಗ್ರೆಸ್ ಮುಖಂಡ ಲೋಕೇಶ್ವರ್, ಟೂಡಾ ಶಶಿಧರ್, ನಗರಸಭಾ ಅಧ್ಯಕ್ಷ ರಾಮ್‌ಮೋಹನ್, ಸದಸ್ಯೆ ಭಾರತಿ ಮಂಜುನಾಥ್, ಪೌರಾಯುಕ್ತ ಉಮಾಕಾಂತ್, ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಬಿ.ಟಿ.ಕುಮಾರ್, ಡಾ. ಎ.ಎಂ.ಮೋಹನ್, ಜೇಮ್ಸ್ ಫೌಂಡೇಶನ್‌ನ ತರಕಾರಿ ಗಂಗಾಧರ್, ದುರ್ಗಾ ಇಂಡಸ್ರೀಸ್‌ನ ಚಂದ್ರಶೇಖರ್, ನಿಖಿಲ್ ರಾಜಣ್ಣ, ವೊಡೋಫೋನ್ ಚಂದ್ರು, ಜಯಣ್ಣ, ಬದ್ರಿ, ಕೌಟ್ ಗಿರೀಶ್, ಕಮಲಮ್ಮ, ಸಂಗೀತಾ ರಮೇಶ್, ರಾಜೇಶ್, ತುಳಸಿ, ಸತೀಶ್, ಉಮೇಶ್ (ಶಿಷ್ಯ) ಹೇಮಂತ್, ಮುಖಂಡ ಲಿಂಗರಾಜ್, ಜೆಕೆಜೆವಿ ಜಿಲ್ಲಾ ಉಪಾಧ್ಯಕ್ಷ ಬಿ.ಬಿ.ಬಸವರಾಜು, ಯೂನಸ್, ಜುನೇದ್, ಕಿರಣ್, ಲೋಕೇಶ್, ರವಿ ಮತ್ತು ಶ್ವೇತಕುಮಾರ್ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.