Sunday, 24th November 2024

ವಿಹಿಂಪ ಬಜರಂಗದಳ ಕಾರ್ಯಕರ್ತರಿಂದ ಹನುಮ ಮಾಲಾ ಧಾರಣೆ

ಕಲಬುರಗಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಲಬುರಗಿ ಮಹಾನಗರ ಜಿಲ್ಲೆಯ ವತಿಯಿಂದ ಇದೇ. ಡಿ 4ರಂದು ನಡೆಯಲಿರುವ ಬೃಹತ್ ಸಂಕೀರ್ತನ ಯಾತ್ರೆ ಪ್ರಯುಕ್ತ ಎಂಟು ವಿಹಿಂಪ ಕಾರ್ಯಕರ್ತರು ಐದು ದಿನಗಳ ಹನುಮ ಮಾಲಾ ಧಾರಣೆ ಮಾಡಿ ದರು.

ಹನುಮ ಭಕ್ತರಾದ ದಯಾನಂದ ಪಾಟೀಲ, ಸತೀಶಕುಮಾರ ಮಾಹೂರ, ಕಲ್ಯಾಣ ಪಾಟಿಲ್ ಕಣ್ಣಿ, ಶಿವಕುಮಾರ ಸಾವಳಗಿ, ವಿಜಯ ಪುರಾಣಿಕಮಠ್, ಮಂಜು ಬಿರಾದಾರ, ಶರಣು ಕನಕೇರಿ ಮತ್ತು ಉದಯ ಐನೋಳ್ಳಿ ಅವರು ಶ್ರೀ ಹನುಮಮಾಲೆ ಧರಿಸಿದರು.

ಚಿಂಚೋಳಿಯಲ್ಲೂ ಮಾಲೆ ಧರಿಸಿದ ಹನುಮ ಭಕ್ತರು: ಚಿಂಚೋಳಿ ತಾಲೂಕು ವಿಶ್ವ ಹಿಂದೂ ಪರಿಷತ್-ಬಜರಂಗದಳ ಪ್ರಖಂಡದ ವತಿಯಿಂದ ಪಟ್ಟಣದ ಹಿರೆಅಗಸಿಯ ಹನುಮಾನ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಿಂಚೋಳಿ, ಐನೋಳಿ ಮತ್ತು ಸುಲೆಪೇಟ್ ಗ್ರಾಮಗಳ ಸಹಸ್ರ ಯುವಕರು ಹನುಮ ಮಾಲಾಧಾರಣೆ ಮಾಡಿದ್ದಾರೆ.

ಇದೇ ಡಿ. 4ರಂದು ಬೃಹತ್ ಸಂಕೀರ್ತನ ಯಾತ್ರೆ ಹಿನ್ನೆಲೆ ಹನುಮಂತನ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಗಾಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಕಿಷ್ಕಿಂಧೆಗೆ ತೆರಳಿ ಪವಮಾನ ಹೋಮದಲ್ಲಿ ಪಾಲ್ಗೊಂಡ ಬಳಿಕ ಮಾಲೆಯನ್ನು ವಿಸರ್ಜನೆ ಮಾಡಲಾಗು ವುದು ಎಂದು ಪರಿಷತಿನ ಪ್ರಮುಖ ಗಿರಿರಾಜ ನಾಟಿಕಾರ್ ತಿಳಿಸಿದರು.