ಇಂಡಿ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಬೆಂಗಳೂರು ಅವರು ಅರ್ಪಿಸುವ ವಿಶ್ವೇಶ್ವರಯ್ಯ ಅವರ 163ನೇ ಜನ್ಮದಿನಾಚರಣೆ ಅಂಗವಾಗಿ ಹಾಗೂ 9ನೇ ರಾಷ್ಟ್ರೀಯ ನೃತ್ಯ ಕಲಾಮೇಳದಲ್ಲಿ ನಯನ ರಂಗಮಂದಿರ ಬೆಂಗಳೂರಿನಲ್ಲಿ ಜರಗುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಕರ್ನಾಟಕ ವಿಧ್ಯಾಭೋಷಣ ರಾಜ್ಯ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಲಾಳಸಂಗಿ ಶಾಲೆಯ ಶಿಕ್ಷಕ ಸುಭಾಶ್ ಚಂದ್ರ ನಾವಿ ಇವರಿಗೆ ಚಲಚಿತ್ರ ಹಿರಿಯ ಕಲಾವಿದ ಶಂಕರಭಟ್ಟ ಇವರಿಂದ ಪ್ರಶಸ್ತಿ ನೀಡಿ ಗೌರವಿಸಿದರು.
ಕುಮಾರ ಚಂದ್ರಶೇಖರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದರು. ವಿಶ್ವಒಕ್ಕಲಿಗರ ಮಠ ಬೆಂಗಳೂರು ಡಾ.ಬಸವರಮಾನಂದ ಮಹಾಸ್ವಾಮಿಗಳು ಸಮಾರಂಭ ಉದ್ಘಾಟಿಸಿದರು. ಡಾ.ಎಲ್.ಎನ್ ಮುಂಕುಂದರಾಜ ,ಡಾ.ಚಂದ್ರಶೇಖರ ಮಠಪತಿ, ಡಾ.ಅಂಬರೀಶ ಜಿ.ಗೊಂದ್ಯಾಳ, ಶ್ರೀಮತಿ ಮೀನಾ, ಡಾ.ಸುಮ್ಮತಿ ಶ್ರೀ ,ಜಿ.ಡಿ.ಗೋಟ್ಯಾಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿದ್ದರು.
ಶಿಕ್ಷಕ ಸುಭಾಷಚಂದ್ರ ನಾವಿ ಇವರ ಸಾಧನೆಗೆ ಲಾಳಸಂಗಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಡಿ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ದ್ದಾರೆ.