Friday, 20th September 2024

Vijayapura News: ಉತ್ತರತುದಿಯಿಂದ ದಕ್ಷಿಣತುದಿ ಸಂವಿಧಾನದ ಅರಿವು ಮೂಡಿಸುವುದೇ ಸರ್ಕಾರದ ಉದ್ದೇಶ- ಎಸಿ ಅಬೀದ ಗದ್ಯಾಳ

ಇಂಡಿ:ಜಿಲ್ಲಾ ಪಂಚಾಯತಿ ವಿಜಯಪೂರ, ತಾಲೂಕಾಡಳಿತ, ತಾಲೂಕಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಇಂಡಿ, ಚಡಚಣ ತಾಲೂಕಿನ ಸಹಭಾಗಿತ್ವದಲ್ಲಿ ಇಂಡಿ ತಾಲೂಕಿನ ಬಳ್ಳೋಳ್ಳಿ ವ್ಯಾಪ್ತಿಯ ಜೇವೂರ ಗ್ರಾಮದ ಹತ್ತಿರ ಇರುವ ಸಾಲುಮರದ ತಿಮ್ಮಕ್ಕ ನರ್ಸರಿಯಲ್ಲಿ ಅಂತರಾ ಷ್ಟ್ರೀಯ ಪ್ರಜಾ ದಿನಾಚರಣೆ ಇಂದು ಮಾನವ ಸರಪಳಿ ಮಾಡಿ, ಸಂವಿಧಾನ ಪೀಠಿಕೆ ಪ್ರತಿ ವಿತರಣೆ ನಂತರ ಪ್ರತಿಜ್ಞೆ ಮಾಡಿ, ಅರಣ್ಯ ಇಲಾಖೆಯಿಂದ ಸಾವಿರಾರು ಸಸಿಗಳನ್ನು ನೆಡುವ ಮೂಲಕ ಅತ್ಯಂತ ಅದ್ದೂರಿ ಯಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ ಪ್ರಜಾಪ್ರಭುತ್ವದ ಅಂಗ ಸಂಸ್ಥೆ ಗಳಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಕೂಡಾ ಪ್ರಜಾಪ್ರಭುತ್ವದ ಆಧಾರ ಸ್ಥಂಭ ವಾಗಿದ್ದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರವರು ಬರೆದ ಸಂವಿಧಾನ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ಪ್ರಜಾಪ್ರಭುತ್ವ ಮಾನವ ಬದುಕಿಗೆ ದಾರಿದೀಪವಾಗಿದೆ.

ಇದನ್ನೂ ಓದಿ: indi news: ಮಾಲಗಂಭ ವಿಶೇಷ ಪೂಜೆ, ಧರ್ಮ ಸಭೆ

ಜಾಪ್ರಭುತ್ವ ದೇಶವಾದ ಭಾರತ ಸ್ವಾತಂತ್ರ್ಯ , ಸಮಾನತೆ ಮತ್ತು ಭಾತೃತ್ವ ಎಂಬ ಸಂಕಲ್ಪದೊಂದಿಗೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶದೊಂದಿಗೆ ದೇಶ ಮುಂದುವರೆದಿದೆ. ಬೇರೆ ಬೇರೆ ದೇಶಗಳಲ್ಲಿ ಸರ್ವಾಧೀಕಾರ ಆಡಳಿತ ಇರುವದರಿಂದ ಮಾನವರ ಹಕ್ಕು ಬಾಧ್ಯತೆಗಳು ಕಂಟಿತಗೊಂಡಿವೆ, ಭಾರತ ಸಂವಿಧಾನ ಪ್ರಜಾರಾಜ್ಯ ವ್ಯವಸ್ಥೆ ಮಾಡಿ ಪ್ರಜೆಗಳೆ ಪ್ರಭುಗಳು.

ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜೆಗಳೆ ಆಳುವ ಸರಕಾರ ಎಂದು ಅರ್ಥ. 2007ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಉತ್ತೇಜಿಸುವ ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಸೆ,೧೫ಅನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಯಿತು. ಕರ್ನಾಟಕ ಸರಕಾರ ಉತ್ತರತುದಿ ಬೀದರಜಿಲ್ಲೆಯಿಂದ ದಕ್ಷಿಣತುದಿ ಚಾಮರಾಜನಗರ ಜಿಲ್ಲೆಯರವರೆಗೆ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಬಗ್ಗೆ ಅರಿವು ಮೂಡಿಸುವ ಪ್ರಜಾಪ್ರಭುತ್ವ ತತ್ವಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದರು.

ಪ್ರತಿಯೋಬ್ಬ ನಾಗರೀಕ ಸಂವಿಧಾನ ಪೀಠಿಕೆ, ಪ್ರಜಾಪ್ರಭುತ್ವದ ಧೈಯ ಉದ್ದೇಶಗಳನ್ನು ತಿಳಿದುಕೊಳ್ಳಬೇಕು. ಭಾರತ ದೇಶ ವಿಶ್ವದಲ್ಲಿಯೇ ಶಾಂತಿ, ಪ್ರೀತಿ, ನೆಮ್ಮದಿಗೆ ಪ್ರಜಾಪ್ರಭುತ್ವ ತತ್ವಗಳೆ ಆಧಾರ ಸ್ಥಂಭವಾಗಿದೆ. ಬೇರೆ ಬೇರೆ ದೇಶಗ ಳಲ್ಲಿ ಸರ್ವಾಧಿಕಾರ ಆಡಳಿತವಿದೆ. ಉದಾಹರಣೆ ಉತ್ತರ ಕೋರಿಯಾ ಕಿಂಗ ಜಾಂಗ ಇವರ ಆಡಳಿತ ಸರ್ವಾಧಿ ಕಾರ ಆಡಳಿತವಿವೆ ಅಲ್ಲಿನ ಜನರಿಗೆ ,ಶೋಷಣೆ ,ದಬ್ಬಾಳಿಕೆ ಮತ್ತು ಪ್ರಜೆಗಳಿಗೆ ಮಾತನಾಡುವ ಪ್ರಶ್ನಿಸುವ ಅಧಿಕಾರ ವಿಲ್ಲ. ಆದರೆ ಭಾರತ ದೇಶದಲ್ಲಿ ಪ್ರಜೆಗಳೆ ಪ್ರಭುಗಳು ಯಾರೇ ತಪ್ಪು ಮಾಡಿದರೆ ಪ್ರಶ್ನಿಸುವ, ಶಿಕ್ಷಿಸುವ ಅಧಿಕಾರ ಪ್ರಜಾ ರಾಜ್ಯದಲ್ಲಿ ಕಾಣಬಹುದು ನಮ್ಮಲ್ಲಿ ಹಲವರಸರ್ಕಾರ ಕೆಲವರದಲ್ಲ ಪ್ರತಿಯೋಬ್ಬ ನಾಗರಿಕನಿಗೆ ಸ್ವಾತಂತ್ರ್ಯವಿದೆ ಎಂದು ಉಪನ್ಯಾಸಕ ಸರಳಿ ಹೇಳಿದರು.

ಬುದ್ದ, ಬಸವ, ಅಕ್ಕಮಹಾದೇವಿ, ಅಂಬೇಡ್ಕರವರ ಸಮಾನತೆಯ ಸಿದ್ದಾಂತ ತತ್ವ ಆದರ್ಶಗಳು  ಬದುಕಿಗೆ ದಾರೀ ದೀಪವಾಗಿದೆ. ಅಂಬೇಡ್ಕರ ಧ್ವನಿ ಇಲ್ಲದವರಿಗೆ, ಬಡವರಿಗೆ, ದೀನ-ದುರ್ಬಲರಿಗೆ  ದೇವರ ಸ್ವರೂಪದಲ್ಲಿ ಭೂಮಿಗೆ ಬಂದು ಉದ್ದರಿಸಿದ ಪುಣ್ಯಾತ್ಮ, ಬಡವರು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಕಾರ್ಯಕ್ರಮದ  ದಿವ್ಯ ಸಾನಿಧ್ಯ ವಹಿಸಿದ  ತದ್ದೇವಾಡಿ ವೇದಮೂರ್ತಿ  ಮಹಾಂತಯ್ಯಾ ಸ್ವಾಮಿ ಹಿರೇಮಠ ಆರ್ಶೀವಚನ ನೀಡಿದರು.

ಚಡಚಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಖಡಗೆಕರ್ ಪ್ರಾಸ್ತಾವಿಕ ಮಾತನಾಡಿದರು.

ತಹಶೀಲ್ದಾರ ಕಡಕಭಾವಿ, ತಾ.ಪಂ ಇಒ ಬಾಬು ರಾಠೋಡ, ಚಡಚಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಖಡಗೆಕರ್, ಪತ್ರಕರ್ತರಾದ ಉಮೇಶ ಕೊಳೆಕರ್, ಯಲಗೊಂಡ ಬೇವನೂರ, ಜಮಾದಾರ, ರಾಮಚಂದ್ರ ಕಾಂಬಳೆ,ಅರಣ್ಯಾಧಿಕಾರಿ ಮಂಜುನಾಥ ಧುಳೆ, ಎಸ್.ಜಿ ಸಂಗಳಕರ್, ಅಕ್ಷರ ದಾಸೋಹ ಯೋಜನಾಧಿಕಾರಿ ಶ್ರೀಮತಿ ಹೂಗಾರ, ಧನರಾಜ ಮುಜಗೊಂಡ, ಶೀಲವಂತ ಕೊಟಲಗಿ, ಮಹಾಂತೇಶ ಹೂಗೂಡಿ, ಚಡಚಣ ತಾಲೂಕಾ ಹೆಸ್ಕಾಂ ಎಇಇ ಹವಾಲ್ದಾರ, ಸೇರಿದಂತೆ ಅನೇಕ ಪತ್ರಕರ್ತರು, ಜನಪ್ರತಿನಿಧಿಗಳು ಹಾಗೂ ತಾಲೂಕಾಧಿಕಾರಿಗಳು, ಅಭಿವೃದ್ದಿ ಅಧಿಕಾರಿಗಳು, ಎನ್.ಎಲ್.ಆರ್.ಎಂ ತಂಡ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಇದ್ದರು.

ಅರಣ್ಯ ಇಲಾಖೆ ಅಧಿಕಾರಿ ಧನರಾಜ ಮುಜಗೊಂಡ ಕಾರ್ಯಕ್ರಮ ನಿರೂಪಿಸಿ , ಪ್ರಾದೇಶಿಕ ಅರಣ್ಯವಲಯ ಅಧಿಕಾರಿ ಆರ್.ಎಫ್ .ಒ ಎಸ್.ಜಿ ಸಂಗಳಕರ್, ಸ್ವಾಗತಿಸಿ ವಂದಿಸಿದರು.