Tuesday, 22nd October 2024

Vijayapura news: ಸರ್ವಸಮುದಾಯ ಶಾಂತಿ, ಪ್ರೀತಿಯಿಂದ ಕಾಣುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲ- ಜಾವೀದ ಮೋಮಿನ್ ಅಭಿಮತ


ಇಂಡಿ:ಗಡಿ ಭಾಗ ಇಂಡಿ ನಂಜುAಡಪ್ಪ ವರದಿಯ ಪ್ರಕಾರ ಅತ್ಯೆಂತ ಹಿದುಳಿದ ತಾಲೂಕಾ ಎಂದು ಹಣೆಪಟ್ಟಿ ಕಟ್ಟಿಕೊಂಡಿತ್ತು ಇಂದು ಶಾಸಕ ಯಶವಂತರಾಯಗೌಡ ಪಾಟೀಲ ಶಾಸಕರಾದ ನಂತರ ಅಭಿವೃದ್ದಿಯ ದಶದಿಕ್ಕು ಬದಲಾವಣೆ ಮಾಡಿ ಭೀಮಾ ತೀರ ಕಳಚಿ ಲಿಂಬೆ ನಾಡು ಮಾಡಿದ್ದಾರೆ. ಜೊತೆಗೆ ಸರ್ವಸಮುದಾಯ ಪರಸ್ಪರ ಶಾಂತಿ, ನೆಮ್ಮದಿಯಿ0ದ ಬದುಕಲು ದಾರಿದೀಪವಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್ ಹೇಳಿದರು.

ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮಾನ ಬಳಗ ಹಮ್ಮಿಕೊಂಡ ಶಾಸಕ ಯಶವಂತರಾಯಗೌಡ ಪಾಟೀಲರ ಜನ್ಮದಿನದ ನಿಮಿತ್ಯ ರಕ್ತಧಾನ ಶಿಬೀರ, ಸಸಿವಿತರಣೆ, ಸ್ಪಂದಾ ಆಸ್ಪತ್ರೆ ಉಚಿತ ಆರೋಗ್ಯ ಕಾರ್ಡ ವಿತರಣೆ ಮಾಡಿ ಮಾತನಾಡಿದ ಅವರು ಶಾಸಕ ಯಶವಂತರಾಯಗೌಡ ಪಾಟೀಲರು ಈ ಮತಕ್ಷೇತ್ರ ಅಭಿವೃದ್ದಿಪಡಿಸಲೆಂದು ದೇವರ ಸ್ವರೂಪದಲ್ಲಿ ಶಾಸಕರಾಗಿ ಈ ಭಾಗದ ಜ್ವಲಂತ ಸಮಸ್ಯಗಳಾದ ನೀರಾವರಿ, ಬಹುದಿನಗಳಿಂದ ಆಸ್ತಿಪಂಜರದ0ತೆ ಪಾಳು ಬಿದ್ದ ಶ್ರೀಭೀಮಾಶಂಕರ ಶುರ‍್ಸ ಕಾರ್ಖಾನೆ ಸ್ಥಾಪಿಸಿ , ಕುಡಿಯುವ ನೀರಿನ ಸಮಸ್ಯ ಪರಿಹರಿಸಿ ಮತಕ್ಷೇತ್ರದ ಜನರ ,ರೈತರ, ಬಡವರ ಪಾಲಿನ ಭಾಗ್ಯವಿದಾತ ಆಗಿದ್ದಾರೆ ಇಂತಹ ಶಾಸಕರನ್ನು ಪಡೇದಿರುವುದು ನಮ್ಮೇಲ್ಲೆ ಸೌಭಾಗ್ಯ. 

ಇಂದು ಶಾಸಕ ಪಾಟೀಲರು ಜನ್ಮದಿನ ಆಚರಿಸಲು ಯಾರಿಗೂ ಹೇಳಿಲ್ಲ ಎಂದಿಗೂ ಆಚರಣೆ ಮಾಡಿ ಕೊಂಡಿಲ್ಲ ಸಾರ್ವಜನಿಕರಿಗೆ ಬಡವರಿಗೆ ಇವತ್ತು ಒಳ್ಳೇಯದಾದರೆ ಅಡಂಬರ,ಢಾಂಬಿಕ ಕಾರ್ಯಕ್ರಮಗಳು ಮಾಡುವುದು ಬೇಡ ಎಂದು ಹೇಳಿದ್ದಾರೆ. ಆದರೆ ಯಶವಂತರಾಯಗೌಡ ಪಾಟೀಲ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಶೇಯದ ಮೇರೆಗೆ ಸರಳ ರೀತಿಯ ಸಾರ್ವಜನಿಕರಿಗೆ ಉಪಯೋಗ ವಾಗುವ ಆರೋಗ್ಯ ತಪಾಸಣೆ ಶಿಬೀರ, ರಕ್ತಧಾನ, ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡುವ ಮೂಲಕ ಶಾಸಕರ ಜನ್ಮದಿನ ಆಚರಿಸುತ್ತಿದ್ದೇವೆ. ಭಗವಂತ ಶಾಸಕರಿಗೆ ನೂರು ವರ್ಷಕ್ಕಿಂತ ಅಧಿಕ ಧೀರ್ಘ ಆಯಸ್ಸು, ಆರೋಗ್ಯ,ಸಂಪತ್ತು ಕರುಣಿಸಲಿ ಇನ್ನಷ್ಟು ಬಡವರ ದೀನ ದುರ್ಬಲರ ನೊಂದವರ ಧ್ವನಿಯಾಗಿ ಮುಂಬರುವ ದಿನಗಳಲ್ಲಿ ಸಚಿವರಾಗುವ ಸೌಭಾಗ್ಯ ಸಿಗಲಿ ಎಂದು ಅಭಿಪ್ರಾಯಪಟ್ಟರು.

ಇಲಿಯಾಸ ಬೋರಾಮಣಿ, ಜಟ್ಟೆಪ್ಪ ರವುಳಿ ಶಾಸಕರ ದೂರದೃಷ್ಠಿ ಅಭಿವೃದ್ದಿ ಕಾರ್ಯಕಗಳ ಕುರಿತು ಮಾತನಾಡಿದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಜೆಟ್ಟೆಪ್ಪ ರವುಳಿ, ಭೀಮಣ್ಣಾ ಕೌಲಗಿ, ಭೀಮಾಶಂಕರ ಮೂರಮನ್, ಸದಾಶಿವ ಪ್ಯಾಟಿ,ರಷೀದ ಅರಬ, ಸತಾರ ಬಾಗವಾನ, ಸೋಮಶೇಖರ ಮ್ಯಾಕೇರಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಮುನ್ನಾ ಭಾಗವಾನ ,ಲಕ್ಷಿö್ಮÃಕಾಂತ ಮೇತ್ರಿ,ಅಪ್ಪು ಕಲ್ಲೂರ, ಡಾ.ರಾಜಶೇಖರ ಕೊಳೇಕರ್, ಶಿವಯೋಗಿ ಚೆನಗೊಂಡ, ಪ್ರಶಾಂತ ಅಲಗೊಂಡ, ಕಾಮೇಶ ಉಕಲಿ,ಹರೀಶ್ಚಂದ್ರ ಪವಾರ, ಸುಮಾ ಮಮದಾಪೂರ, ಶೈಲಜಾ ಜಾಧವ,ಕಲ್ಲನಗೌಡ ಬಿರಾದಾರ ವೇದಿಕೆಯಲ್ಲಿದ್ದರು.

ಅತೀಕ ಮೋಮಿನ್, ಜೈನೂದಿನ ಭಾಗವಾನ, ಶೇಖರ ನಾಯಕ, ಹಣವಂತ ಕೊಡತೆ, ಮುಸ್ತಾಕ ಇಂಡಿಕರ್, ಮಲ್ಲು ಮಡ್ಡಿಮನಿ, ಮಹೇಶ ಹೊನ್ನಬಿಂದಗಿ, ಚಂದುಸಾಹುಕಾರ ಸೊನ್ನ, ಪ್ರಶಾಂತ ಕಾಳೆ, ರಾಜು ಕುಲಕರ್ಣಿ, ರೈಸ್ ಅಷ್ಠೇಕರ್, ಶ್ರೀಶೈಲ ಪೂಜಾರಿ, ಹಣಮಂತ ಅರವತ್ತು, ಅಯೂಬ ಬಾಗವಾನ , ಎಮ್ ಎ ಸೌದಾಗರ.ಸುಭಾಷ ಬಾಬರ, ಸಿದ್ದು ಇಮ್ಮನ್ನದ್ , ನೀಲಕಂಠ ರೂಗಿ, ಹಮ್ಮೀದ ಮುಲ್ಲಾ, ಭೀಮುಸಾಹುಕಾರ ಬಸನಾಳ ಸೇರಿದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಶಾಸಕರ ಜನ್ಮದಿನದ ಕಾರ್ಯಕ್ರಮದಲ್ಲಿದ್ದರು.

ಧರ್ಮರಾಜ ವಾಲೀಕಾರ ಸ್ವಾಗತಿಸಿ, ಶಿಕ್ಷಕ ಬಸವರಾಜ ಗೋರನಾಳ ನಿರೂಪಿಸಿ, ವಂದಿಸಿದರು.

ಇದೆ ಸಂಧರ್ಬದಲ್ಲಿ ನೂರಾರು ಜನರಿಗೆ ಸಿಸಿ ವಿತರಣೆ ಮಾಡಿದರು, ರಕ್ತಧಾನ ಶಿಬಿರದಲ್ಲಿ ಯಶವಂತರಾಯಗೌಡ ಪಾಟೀಲ ಅಭೀಮಾನಿ ಬಳಗ ನೂರಾರು ಯುವಕರು ರಕ್ತಧಾನ ಮಾಡಿ ಹೃದಯಶ್ರೀಮಂತಿಕೆಯಿ0ದ ಮೆರೆದರು.
ಕಾರ್ಯಕ್ರಮ ಪ್ರಾರಂಭವಾಗುವದಕ್ಕಿಂತ ಮುಂಚ್ಚೆ ಭಾರತ ದೇಶದ ಖ್ಯಾತ ಉದ್ದೀಮಿ ಕ್ಷೇತ್ರದ ರತ್ನ ದಿ|| ರತನ್ ಟಾಟಾ ದೈವಾದೀನರಾಗಿರುವದರಿಂದ್ದ ಅಗಲೀದ ಆತ್ಮಕ್ಕೆ ಭಗವಂತ ಚಿರ ಶಾಂತಿ ಸಿಗಲಿ ಎಂದು ವೇದಿಕೆಯಲ್ಲಿ ಒಂದು ನಿಮಿಷ್ಯ ಮೌನ ಆಚರಣೆ ಮಾಡಿ ಸಂತಾಪ ಸೂಚಿಸಲಾಯಿತು.

ಬಾಕ್ಸ- ಹುಟ್ಟು ಸಹಜ ಸಾವು ಖಚಿತ ನಾವು ಬದಕಿರುವ ದಿನಗಳಲ್ಲಿ ಮಾಡಿರುವ ಕಾರ್ಯ ಸದಾ ಶಾಶ್ವತ ಇಂದು ಶಾಸಕ ಯಶವಂತರಾಯಗೌಡ ಪಾಟೀಲ ಶಾಸಕರಾದ ನಂತರ ಅವರು ಮಾಡಿದ ಸಾಧನೆ ಅದ್ಭುತ, ಅನೇಕ ರಾಜಕಾರಣಿಗಳನ್ನು ನೋಡಿದ್ದೇನೆ ಕಂಡಿದ್ದೆನೆ ಆದರೆ ದೂರದೃಷ್ಠಿಯುಳ್ಳ ಎಕೈಕ ನಾಯಕ ಒಬ್ಬ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಶಾಸಕ ಯಶವಂತರಾಯಗೌಡ ಪಾಟೀಲರ ಬಗ್ಗೆ ಪ್ರಶಂಸೆಯ ಮಾತುಗಳಾಡಿದ್ದು ಇದು ಇಡೀ ಕ್ಷೇತ್ರದ ಜನರಿಗೆ ಸಂದಗೌರವ ನಮ್ಮ ನಾಯಕ ಎಲ್ಲ ಜಾತಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ಅವರ ಕುಟುಂಬಸ್ಥರು ಯಾರೂ ತಾಲೂಕಿನಲ್ಲಿ ಆಡಳಿತ ಕ್ಷೇತ್ರ ಸಾರ್ವಜನಿಕ ವಲಯಗಳಲ್ಲಿ ಕೈಹಾಕುವುದಿಲ್ಲ ಎಲ್ಲಾ ಮತಕ್ಷೇತ್ರದ ಜನರು ನನ್ನ ಕುಟುಂಬದವರು ಎಂಬ ಕಳಕಳಿ ಅವರಲ್ಲಿದೆ.