Saturday, 14th December 2024

Vijayapura News: ರಾಮಾಯಣದಲ್ಲಿನ ಮೌಲ್ಯ ಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಬಿ.ಎಸ್.ಕಡಕಬಾವಿ

ವಾಲ್ಮೀಕಿ ರಾಮಾಯಣ ಜಗತ್ತಿನ ಮೊದಲ ಮಹಾಕಾವ್ಯ

ಇಂಡಿ: ಮಹಾಪುರುಷರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರು ಹೇಳಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಈ ಉತ್ಸವ ಸರ‍್ಥಕವಾಗುತ್ತದೆ ಎಂದು ತಹಶೀಲ್ದಾರ ಬಿ.ಎಸ್.ಕಡಕಬಾವಿ ಹೇಳಿದರು.

ಅವರು ತಾಲೂಕ ಆಡಳಿತ, ತಾಲೂಕ ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡ ಜಯಂತಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀ ರಾಮಾಯಣ ರಚನೆಕಾರರಾದ ವಾಲ್ಮೀಕಿ ಜಯಂತಿಯ ಆಚರಣೆಯನ್ನು ತುಂಬ ವಿಜ್ರಂಭಣೆಯಿಂದ ಆಚರಿಸುವುದರ ಜೊತೆಗೆ ರ‍್ಷದಲ್ಲಿ ೩೨ ಮಹಾಪುರುಷರ ಜಯಂತಿಗಳನ್ನು ನಮ್ಮ ಇಲಾಖೆ ಆಚರಿಸುತ್ತದೆ. ಪ್ರತಿಯೊಬ್ಬ ಮಹಾಪುರುಷರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರು ಹೇಳಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಈ ಉತ್ಸವ ಸಾರ್ಥಕವಾದಂತೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಸದಾನಂದ ಎಸ್ ಈರನಕೇರಿ ಮಾತನಾಡಿ,ರಾಮಾಯಣದ ರ‍್ತೃ, ಆದಿ ಕವಿ, ಋಷಿ ಕವಿ, ಆದ ವಾಲ್ಮೀಕಿ ಮರ‍್ಷಿಗಳು ಮಹಾಕಾವ್ಯ ಬರೆವುದರ ಮೂಲಕ ಈ ನಾಡಿಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಇವರ ಜಯಂತಿಯನ್ನು ಆಚರಿಸುವುದರ ಜೊತೆಗೆ ರಾಮಾಯಣದಲ್ಲಿರುವ ಮೌಲ್ಯಗಳನ್ನು ಇಂದಿನ ಜನಾಂಗ ಅಳವಡಿಸಿಕೊಳ್ಳಬೇಕು. ರಾಮಾಯಣ ಕಾವ್ಯ ಓದುವುದರಿಂದ ಜೀವನ ಬದಲಾವಣೆಯಾಗುತ್ತದೆ. ರಾಮಾಯಣಭ ದೇಶದಲ್ಲಿ ಅತ್ಯಂತ ಉತ್ಕೃಷ್ಟವಾದ ಮಹಾಕಾವ್ಯ ಇದಾಗಿದೆ. ರಾಮಾಯಣದಲ್ಲಿ ಬರುವ ಶ್ರೀ ರಾಮ ಚಂದ್ರ ಪಿತೃ ಪರಿಪಾಲಕ. ಜನಸೇವೆಯೇ ಜನರ‍್ದನ ಸೇವೆ ಎಂದು ತಿಳಿದ ನಾಯಕ ಶ್ರೀ ರಾಮಚಂದ್ರ .ಇದಕ್ಕಾಗಿ ಇಂತಹ ಮಹಾ ಕಾವ್ಯವನ್ನು ಬರೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನರ‍್ದೇಶಕ ಉಮೇಶ್ ಲಮಾಣಿ. ಪುರಸಭೆ ಮುಖ್ಯಾಧಿಕಾರಿ ಮಾಂತೇಶ್ ಹಂಗರಗಿ. ವಾಲ್ಮೀಕಿ ಮಹಾಸಭಾದ ರಾಜ್ಯ ನರ‍್ದೇಶಕ ಸಂಜು ನಾಯ್ಕೋಡಿ , ಎಇಇ ಆರ್.ಎಸ್. ಮೆಡೆಗಾರ, ನಾಗಪ್ಪ ನಾಯಕೋಡಿ ರ‍್ಜುನ ನಾಯ್ಕೋಡಿ, ಉಪಾಧ್ಯಕ್ಷರಾದ ಮಾರುತಿ ಕೊಡತೆ, ಧನರಾಜ್ ಮುಜುಗೊಂಡ,ಪಿಎಸೈ ಸಂಗಮೇಶ್ ನಾಯಕೋಡಿ, ಬಂಜಾರ ಸಮಾಜ ಅಧ್ಯಕ್ಷ ಸಂಜು ಚವ್ಹಾಣ, .ಡಿ.ಎಸ್.ಎಸ್ ಮುಖಂಡ ಬಾಬು ಗುಡುಮಿ, ಭೀಮರಾಯ ನಾಯ್ಕೋಡಿ, ಮಾದೇವ ವಾಲಿಕಾರ್, ಅಹಿರಸಂಗ ಗ್ರಾಪಂ ಅಧ್ಯಕ್ಷ ಹಸನ ಶೇಖ, ಭೀಮರಾಯ ಕಾ ನಾಯ್ಕೋಡಿ, ಹನುಮಂತ ಹಿಪ್ಪರಗಿ, ಎಲ್ಲಪ್ಪ ಪೂಜಾರಿ, ಸತೀಶ್ ಹಿಪ್ಪರಗಿ, ಗಂಗೂ ಬೇಡರ, ಸಿದ್ದು ಬೇಡರ,ಸೈಬಣ್ಣ ನಾಯ್ಕೋಡಿ, ರಾಜು ಬೇಡರ, ರಾಜು ನಾಯ್ಕೋಡಿ, ಸಿದ್ದು ಲಚ್ಚಣ, ಶಿವಪ್ಪನ ನಾಯಕೋಡಿ, ಶಿವಪ್ಪ ನಾಯಕೋಡಿ, ಬಸವರಾಜ್ ಗೊಲಗೇರಿ, ಪ್ರಕಾಶ್ ಸಣ್ಣಮನಿ,ಲಕ್ಷ್ಮೀಬಾಯಿ ನಾಯ್ಕೋಡಿ ಮೊದಲಾದವರು ಕರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉಮೇಶ್ ಲಮಾಣಿ ಸ್ವಾಗತಿಸಿದರು. ರಾಜಶೇಖರ್ ದಯವಾಡಗಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯರ‍್ಥಿಗಳಿಗೆ ಸನ್ಮಾನಿಸಲಾಯಿತು.