ಇಂಡಿ: ರಾಜ್ಯ ಸರಕಾರ ಒಡೆದಾಳು ನೀತಿ ಅನುಸರಿಸುತ್ತಿದ್ದು ವಕ್ಪ ಹೆಸರಿನಲ್ಲಿ ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರ ಮಾಡುತ್ತಿದೆ. ಪ್ರಾಣ ಹೊದರೂ ರೈತರ ಭೂಮಿ ಬಿಡುವುದಿಲ್ಲ ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಸುಮಾರು ವರ್ಷಗಳ ಕಾಲ ರೈತರು ಭೂಮಿ ಉಳಿಮೆ ಮಾಡುತ್ತಿದ್ದು ಸದ್ಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರೈತರ ಪಹಣಿಯಲ್ಲಿ ವಕ್ಫ ಹೆಸರು ಎಲ್ಲಿಂದ ಬಂತು ಎಂಬುದು ತನಿಖೆಯಾಗಲಿ ಈ ಹಿಂದೆ ಯಾರು ಮಾಡಿದ್ದಾರೆ ಎಂಬುದು ಸಾಭಿತು ಮಾಡಲಿ ವಿನಾಕಾರಣ ರೈತರ ಪಹಣಿಯಲ್ಲಿ ವಕ್ಪ ಹೆಸರು ಬಂದಿರಲು ಕಾರಣವಾದರೂ ಎನು ? ರೈತರ ಭೂಮಿ ಅಲ್ಲಾ ವಕ್ಪಗೆ ಒಂದು ಇಂಚು ಜಾಗ ಕೊಡುವುದಿಲ್ಲ.
ಬಿಜೆಪಿ ರೈತರ ಬಗ್ಗೆ ಕಾಳಜಿ ಮಾಡುವ ಪಕ್ಷವಾಗಿದ್ದು ಜಿಲ್ಲೆಯಲ್ಲಿ ತಾಲೂಕಿನಲ್ಲಿ ಪಹಣಿಯಲ್ಲಿ ವಕ್ಫ ಹೆಸರು ಬಂದರೆ ಕೂಡಲೆ ಬಿಜೆಪಿ ಮುಖಂಡರನ್ನು ರೈತರು ಸಂಪರ್ಕಿಸಬೇಕು ರೈತ ಈ ದೇಶದ ಅನ್ನಧಾತ ರೈತನಿಗೆ ಅನ್ಯಾಯವಾದರೆ ಬಿಡುವುದಿಲ್ಲ ಎಂದು ಹೇಳಿದರು.