ಇಂಡಿ: ತಾಲೂಕಿನ ಗೌರವಾನ್ವಿತ ಗುರುಗಳು ಹಾಗೂ ಗುರು ಮಾತೆಯರಲ್ಲಿ ವಿನಯ ಪೂರ್ವಕವಾಗಿ ಕೇಳಿ ಕೊಳ್ಳುವು ದೇನೆಂದರೆ ಸತತವಾಗಿ ಅನೇಕ ವರ್ಷಗಳಿಂದ ಶಿಕ್ಷಕರ ಕುಂದು ಕೊರತೆಗಳಿಗೆ ತಕ್ಷಣ ಸ್ಪಂದಿಸಿ ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಮ್ಮ ಗುರು ಸ್ಪಂದನ ಹಳೆ ಪ್ಯಾನಲ್ ಮಾಡುತ್ತಿದೆ ಎಂದು ಜಿ.ಒ.ಸಿ.ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷರಾದ ಅಲ್ಲಾಬಕ್ಷ ವಾಲಿಕಾರ ಹೇಳಿದರು.
ಸರ್ಕಾರಿ ನೌಕರರ ಸಂಘದ ಇಂಡಿ ಶಾಖೆಯಲ್ಲಿ ಪ್ರಾಥಮಿಕ ಶಿಕ್ಷಕರ ೫ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಲ್ಲಾ ಪ್ರಾಥಮಿಕ ಶಿಕ್ಷಕರಿಗೂ ನಮ್ಮ ಗುರು ಸ್ಪಂದನ ಹಳೆಯ ಪ್ಯಾನಲ್‌ಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಸೇವೆ ಮಾಡುವ ಅವಕಾಶ ನೀಡಿ ಎಂದು ಮನವಿ ಮಾಡುತ್ತೇವೆ ಎಂದರು.
ನಮ್ಮ ತಂಡವು ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಯಾವಾಗಲೂ ಪ್ರಯತ್ನ ಮಾಡುತ್ತಾ ಬರುತ್ತಿದ್ದು, ಮುಂದುವರಿಯುವ ದೋರಣೆಯಲ್ಲಿಯೂ ಶಿಕ್ಷಕರಿಗಾಗಿ ಸೇವೆ ಮಾಡಲು ಬದ್ಧವಾಗಿದೆ ಎಂದು ಹೇಳಿದರು.
ಪಿ.ಎಸ್.ಟಿ ಶಿಕ್ಷಕರಿಗೆ ಆಗಿರುವ ಅನ್ಯಾಯದ ವಿರುದ್ಧ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿದಾಗ ಸೇವಾನಿರತ ಪದವೀಧರ ಶಿಕ್ಷಕರ ಸಂಘಟನೆ ಹಾಗೂ ಎಲ್ಲ ಸಂಘಟನೆಗಳ ಸಹಕಾರದೊಂದಿಗೆ ಇಡೀ ಜಿಲ್ಲೆಯ ಲ್ಲಿಯೇ ಮಾದರಿಯಾದ ಹೋರಾಟವನ್ನು , ಜಿಲ್ಲೆ ರಾಜ್ಯದಲ್ಲೆ ಯಶಸ್ವಿ ಹೋರಾಟವೆಂದು ಪ್ರಶಂಶಿಸಲ್ಪಟ್ಟಿರು ವುದು ಪಿ.ಎಸ್.ಟಿ ಸಮಸ್ಯೆ ನಿವಾರಿಸುವ ಅಂತಿಮ ಹಂತಕ್ಕೆ ಕೊಂಡೊಯ್ಯಲು ಅಧಿಕಾರಿಗಳಿಗೆ ಸಲಹೆ ನೀಡುತ್ತಿರು ವುದು. ರಾಜ್ಯದಲ್ಲಿ ಯಾವ ತಾಲೂಕಿನಲ್ಲಿ ಇರದ ಶಿಕ್ಷಕರ ಸಂಘಕ್ಕೆ ಭವ್ಯವಾದ ಸ್ವಂತ ಕಟ್ಟಡ ನಿರ್ಮಿಸಿರುವುದು.
ದಿನಾಂಕ ೨೮ ೧೦ ೨೦೨೪ರಂದು ನಡೆಯುವ ಇಂಡಿ ತಾಲೂಕ ಸರ್ಕಾರಿ ನೌಕರರ ಸಂಘದ ಚುನಾವಣೆ ಯಲ್ಲಿ ಗುರು ಸ್ಪಂದನ ಹಳೆ ಪೇನಲನಿಂದ ಸ್ಪರ್ಧಿಸಿರುವಭಾಗ ೬(೧)ರಲ್ಲಿ ಶ್ರೀ ಅರವಿಂದ ಮೇತ್ರಿ , ಶ್ರೀ ಜಯರಾಮ್ ಚವ್ಹಾಣ , ಶ್ರೀ ಡಿ ಎಸ್ ಕಣಮಸ ಭಾಗ -೬(೨) ಶ್ರೀ ಅಬೂತಾಲಿಬ ಹೊಸೂರ, ಶ್ರೀ ಸೋಮನಿಂಗ ಹರಳಯ್ಯ ಈ ಮೇಲಿನ ಐದು ಅಭ್ಯರ್ಥಿಗಳಿಗೆ ಅತಿ ಹೆಚ್ಚಿನ ಮತಗಳನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರುವುದರ ಮೂಲಕ ನಮ್ಮ ಸೇವೆಗೆ ಫಲ ನೀಡುವರೆಂದು ನಂಬಿರುವ ನಿಮ್ಮ ಈ ಗುರು ಸ್ಪಂದನ ಹಳೆ ಪೆನಲ್ ಎಂದರು.
ಇದನ್ನೂ ಓದಿ: Vijayapura News: ಅ.20 ರಂದು ಬಣಜಿಗ ಸಮಾಜದ ಸಭೆ