ಗುಬ್ಬಿ : ತಾಲೂಕಿನ ಸಿಎಸ್ ಪುರ ಹೋಬಳಿ ಮಾವಿನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಸ್ವತ್ತು ಮಾಡಲು ವಿಳಂಬ ಮಾಡಲಾಗುತಿದೆ ಎಂದು ಮಾವಿನ ಹಳ್ಳಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಿದ ಘಟನೆ ನಡೆಯಿತು.
ಮಾವಿನಹಳ್ಳಿ ಗ್ರಾಮದ ಅಭಿಷೇಕ್ ಮಾತನಾಡಿ ಕಮರ್ಷಿಯಲ್ ಮಾಡಲು ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ತಕರಾರು ಅರ್ಜಿ ಸಲ್ಲಿಸಿದ್ದಾರೆಂದು ಈ ಸ್ವತ್ತು ಮಾಡಲು ಆರೇಳು ತಿಂಗಳಿಂದ ಸತಾಯಿಸುತ್ತಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜಕೀಯ ದ್ವೇಷವನ್ನು ಇಟ್ಟುಕೊಂಡು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಅಧ್ಯಕ್ಷರು ಬಂದು ಈ ವಿಷಯವಾಗಿ ಸ್ಪಷ್ಟೀಕರಣ ನೀಡಬೇಕು.ಮೇಲಾಧಿಕಾರಿಗಳು ಭೇಟಿ ನೀಡಿ ನಮಗೆ ನ್ಯಾಯ ದೊರಕಿಸಿಕೊಡ ಬೇಕು ಎಂದು ಪಟ್ಟು ಹಿಡಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಪಿಡಿಒ ಭೇಟಿ ನೀಡಿ, ಈ ಸ್ವತ್ತು ವಿಚಾರವಾಗಿ ತಕರಾಲು ಅರ್ಜಿ ಬಂದಿದ್ದು. ಇದೆ ತಿಂಗಳ 29ನೇ ತಾರೀಕು ಸಾಮಾನ್ಯ ಸಭೆ ಕರೆಯುವ ಮೂಲಕ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಗಿರೀಶ್, ಮಧು, ಗೌಸ್ ಪಾಷಾ, ಚಂದ್ರಶೇಖರ್ ಇತರರು ಇದ್ದರು.