Sunday, 15th December 2024

ಭಾರತ ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ

ಗುಬ್ಬಿ : ಗುರುಕುಲವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ವಿಶಾಲ ಪರಂಪರೆ ಹೊಂದಿರುವ ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗುವ ಜೊತೆಗೆ ಭಾರತ ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್ಎಸ್ ಸಚ್ಚಿದಾನಂದ ಮೂರ್ತಿ ತಿಳಿಸಿದರು.

ಪಟ್ಟಣದ ಚಿದಂಬರ ಆಶ್ರಮದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಲಲಿತಾ ಪೂಜಾ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಯಾವುದೇ ಸರ್ಕಾರಿ ಅನುದಾನವಿಲ್ಲದೆ ಸುಮಾರು 70 ವರ್ಷಗಳಿಂದ ವೇದ ವಿದ್ಯೆ ಸನಾತನ ಧಾರ್ಮಿಕ ಭಾವೈಕ್ಯತೆಗಳನ್ನು ಸಾರುವಲ್ಲಿ ಗುಬ್ಬಿಯ ಚಿದಂಬರಾಶ್ರಮ ಯಶಸ್ವಿಯಾಗಿದೆ, ಇಲ್ಲಿ ವಿದ್ಯೆ ಕಲಿತಂತಹ ವಿದ್ಯಾರ್ಥಿಗಳು ಇಲ್ಲಿಯೇ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಆಶ್ರಮದ ಸೇವೆಯಲ್ಲಿ ತೊಡಗಿರುವುದು ವಿಶೇಷ ವಾಗಿದೆ. ನಮ್ಮ ದೇಶವಲ್ಲದೆ ಅಮೇರಿಕಾ, ಜಪಾನ್, ಜರ್ಮನಿಗಳಲ್ಲಿ ಉದ್ಯೋಗ ಸೃಷ್ಟಿಸಿ ಕೊಂಡಿದ್ದಾರೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿದಂಬರಾಶ್ರಮದ ಅಧ್ಯಕ್ಷ ಶ್ರೀ ಶಿವ ಚಿದಂಬರ ಶರ್ಮ ಎಲ್ಲರಿಗೂ ಸಮನಾದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಚಿದಂಬರ ಶಿಕ್ಷಣ ಸಂಸ್ಥೆಯು ಅನೇಕ ವರ್ಷಗಳಿಂದ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಮಕ್ಕಳು ತಂದೆ ತಾಯಿಗಳಿಗೆ ಗೌರವ ಕೊಡಬೇಕು ಎಲ್ಲಾ ಮಕ್ಕಳಿಗೂ ಸುಖ ಸಮೃದ್ಧಿ ಜೀವನ ನಡೆಸಲು ಭಗವಂತ ಆಶೀರ್ವದಿಸಲಿ ಎಂದು ತಿಳಿಸಿದರು.
ಸುಮಾರು 500 ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಲಲಿತ ದೇವಿ ಪೂಜಾ ಕಾರ್ಯಕ್ರಮಕ್ಕೆ ಭಾಗಿಯಾಗಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ವತ್ಸಲ ನಾಗೇಶ್, ಜಗದೀಶ್ ಹುನಗುಂದ, ಮ್ಯಾನೇಜಿಂಗ್ ಟ್ರಸ್ಟಿ ಡಾ.ಸಚ್ಚಿದಾನಂದ, ಲಕ್ಷ್ಮಿಕಾಂತ್, ರಶ್ಮಿ, ಪ್ರಾಂಶುಪಾಲ ಶ್ರೀರಾಮ ಶಂಕರ , ಜಗದೀಶ್, ನಿವೃತ್ತ ಮುಖ್ಯೋ ಪಾಧ್ಯಾಯ ವಿದ್ವಾನ್ ಶ್ರೀ ಅನಂತ ಭಟ್, ಹಾಜರಿದ್ದರು.