ಬೆಂಗಳೂರು: ಮದುವೆಯಾದ ಸಾಕಷ್ಟು ಮಹಿಳೆಯರು ಕುಟುಂಬ ನಿರ್ವಹಣೆ ಹಾಗೂ ಇತರೆ ವೈಯಕ್ತಿಕ ಕಾರಣದಿಂದಾಗಿ ತಮ್ಮ ವೃತ್ತಿ ಬದುಕನ್ನು ಅರ್ಧಕ್ಕೆ ನಿಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಕಾಲಕ್ರಮೇಣ ತಾವೂ ಸಹ ತಮ್ಮ ವೃತ್ತಿ ಬದುಕನ್ನು ಪುನಃಸ್ಥಾಪಿಸಿಕೊಳ್ಳುವ ಬಯಕೆಯೂ ಮೂಡಬಹುದು. ಅಂಥವರಿಗಾಗಿಯೇ ವಿಎಂವೇರ್ ಸಂಸ್ಥೆಯು ವಿಮಿ ನ್ಕ್ಲೂಷನ್ ತಾರ ಎನ್ನುವ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ, ಮಹಿಳೆಯರ ಸಬಲೀಕರಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಈವರೆಗೂ ಸುಮಾರು 5 ಸಾವಿರ ಮಹಿಳೆಯರು ಈ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಪಡೆದು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಈಗಾಗಲೇ 22 ಸಾವಿರಕ್ಕೂ ಹೆಚ್ಚು ನೋಂದಣಿಯಾಗಿರುವುದು ವಿಶೇಷ.
ಈ ಕಾರ್ಯಕ್ರಮದ ವಿಶೇಷತೆ ಏನು?: 2019ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಸಾಕಷ್ಟು ಮಹಿಳೆಯರ ವೃತ್ತಿ ಬದುಕನ್ನೇ ಬದಲಾಯಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಡೇಟಾಸೆಂಟರ್, ನೆಟ್ವರ್ಕಿಂಗ್, ಕ್ಲೌಡ್ ಮತ್ತು ಕ್ಲೌಡ್ ಮ್ಯಾನೇಜ್ಮೆಂಟ್ ತಂತ್ರಜ್ಞಾನಗಳು ಸೇರಿದಂತೆ ಕ್ಲೌಡ್ ತಂತ್ರಜ್ಞಾನಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳ ತರಬೇತಿಯನ್ನು ನೀಡಲಾಗುತ್ತದೆ.
ಈಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಹಾಗೂ ಈಗಾಗಲೇ ಉದ್ಯೋಗ ಪಡೆದು, ಕೆಲ ಕಾರಣದಿಂದ ಉದ್ಯೋಗ ತ್ಯಜಿಸಿ, ಈಗ ಮತ್ತೆ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವ ಮಹಿಳೆಯರಿಗೆ ಈ ತರಬೇತಿ ನೀಡಲಾಗುತ್ತದೆ. ಈ ತರಬೇತಿಯೂ ಸಂಪೂರ್ಣ ಉಚಿತವಾಗಿದ್ದು, ಆನ್ಲೈನ್ ಮೂಲಕವೇ ಇದಕ್ಕೆ ನೋಂದಣಿಯಾಗಬಹುದು. ಈ ತರಬೇತಿಯು ಕನಿಷ್ಠ 4 ರಿಂದ 6 ತಿಂಗಳ ಅವಧಿಯಾಗಿದ್ದು, ತರಬೇತಿ ಪಡೆದ ಬಳಿಕ ಈ ಸಂಸ್ಥೆಯು ರಾಜ್ಯ ಸರ್ಕಾರದ ಅಧಿಕೃತ ಸರ್ಟಿಫಿಕೇಟ್ ನೀಡಲಿದೆ.
ಕೋರ್ಸ್ನನ್ನು ಮೂರು ಹಂತದಲ್ಲಿ ವಿಂಗಡಿಸಲಾಗಿದೆ. ಈಗಾಗಲೇ ಕೆಲಸದ ಅನುಭವ ಇರುವವರಿಗೆ ತಮ್ಮ ವೃತ್ತಿಯನ್ನು ಉನ್ನತೀಕರಿಸಿಕೊಳ್ಳುವವರಿಗೆ ಮಧ್ಯಮದ ಹಂತದ ತರಬೇತಿ, ಈಗಷ್ಟೇ ಉದ್ಯೋಗ ಪ್ರಾರಂಭಿಸುವವರಿಗೆ ನೂತನವಾಗಿ ತರಬೇತಿ ಹಾಗೂ ಈಗಾಗಲೇ ಉದ್ಯೋಗದಲ್ಲಿ ಉನ್ನತ ಸ್ಥಾನದಲ್ಲಿದ್ದವರಿಗೆ ಅತ್ಯುನ್ನತ ಮಟ್ಟದ ತರಬೇತಿ ನೀಡಲಾಗುವುದು.
ಈ ತರಬೇತಿಗೆ ಸೇರಿಕೊಳ್ಳುವವರು ಕಡ್ಡಾಯವಾಗಿ ಕೆಲಸದಲ್ಲಿರಬಾರದು. ಜೊತೆಗೆ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ತರಬೇತಿ ಪಡೆಯಲು ಅರ್ಹರಾಗಿದ್ದಾರೆ. ಈ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://www.vmware.com/taara/ ವೆಬ್ಸೈಟ್ಗೆ ಭೇಟಿ ನೀಡಿ.