Saturday, 14th December 2024

ರಾಜು ಅಡಕಳ್ಳಿಯವರ ವ್ಯಕ್ತಿ ಶಕ್ತಿ ಪುಸ್ತಕ ಬಿಡುಗಡೆ

ಶಿರಸಿ: ನಗರದ ರಂಗಧಾಮದಲ್ಲಿ ಬುಧವಾರ ಲೋಕಧ್ವನಿ ಅಂಕಣಕಾರ, ಪತ್ರಕರ್ತ ರಾಜು ಅಡಕಳ್ಳಿಯವರ ವ್ಯಕ್ತಿ ಶಕ್ತಿ ಪುಸ್ತಕ ಬಿಡುಗಡೆ ನಡೆಯಿತು.
ಸಾಹಿತಿ, ವಿ.ಉಮಾಕಾಂತ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.

ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಪುಸ್ತಕ ಬಿಡುಗಡೆಗೊಳಿಸಿದರು. ಲೋಕಧ್ವನಿ ಸಂಪಾದಕರಾದ ರಾಧಾಕೃಷ್ಣ ಭಡ್ತಿ ಪುಸ್ತಕ ಪರಿಚಯಿಸಿದರು. ವೇದಿಕೆಯ ಮೇಲೆ ಕೃತಿಕಾರ ರಾಜು ಅಡಕಳ್ಳಿ ಉಪಸ್ಥಿತರಿದ್ದರು.