Friday, 20th September 2024

Waqf: ವಕ್ಫ್ ತಿದ್ದುಪಡಿಯಿಂದ ಅಲ್ಪಸಂಖ್ಯಾತ ಆರ್ಥಿಕ ಮೂಲಕ್ಕೆ ಪೆಟ್ಟು

ತುಮಕೂರು: ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ-2024ರ ಮೂಲಕ ಅಲ್ಪಸಂಖ್ಯಾತ ಸಮುದಾಯದ ಅರ್ಥಿಕ ಮೂಲಕ್ಕೆ ಕೊಡಲಿ ಪೆಟ್ಟು ಕೊಡಲು ಹೊರಟಿದ್ದು,ಕೂಡಲೇ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಅಫ್ ಸಿವಿಲ್ ರೈಟ್ಸ್ ಇಂಡಿಯಾ  ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ವಕ್ಫ್ ತಿದ್ದುಪಡಿ ಮಸೂದೆ-2024ರ ಜಂಟಿ ಸಮಿತಿ ಅಧ್ಯಕ್ಷರಾದ ಜಗದಾಂಬಿಕಾ ಪಾಲ್ ಅವರಿಗೆ ಮನವಿ ಸಲ್ಲಿಸಿದರು.

ಈ ಸುದ್ದಿಯನ್ನು ಓದಿ: Zakir Naik: ʻವಕ್ಫ್‌ ಕಾಯ್ದೆಯನ್ನು ಒಗ್ಗಟ್ಟಾಗಿ ವಿರೋಧಿಸಿʼ- ಮುಸ್ಲಿಮರಿಗೆ ಜಾಕಿರ್‌ ನಾಯ್ಕ್‌ ಕರೆ; ಕಿರಣ್‌ ರಿಜಿಜು ಖಡಕ್‌ ವಾರ್ನಿಂಗ್‌

ವಕ್ಫ್ ಮೂಲ ಆಶಯಕ್ಕೆ ಧಕ್ಕೆಯಾಗಲಿದೆ

ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ 2024 ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತ ಮತ್ತು ಪಾರದರ್ಶಕತೆ ಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ 1995 ರ ವಕ್ಫ್ ಕಾಯಿದೆಗೆ ಹಲವಾರು ಬದಲಾವಣೆಗಳನ್ನು ತರಲು ಮುಂದಾಗಿದೆ.ವಕ್ಫ್ ತಿದ್ದುಪಡಿ ಮಸೂದೆಯಿಂದ ಸಮುದಾಯದ ಪ್ರಾತಿನಿಧ್ಯವನ್ನು ಕಡಿಮೆ ಮಾಡಿ, ರಾಜಕೀಯ ಹಸ್ತಕ್ಷೇಪವನ್ನು ಹೆಚ್ಚು ಮಾಡುವುದರಿಂದ ವಕ್ಫ್ ಮೂಲ ಆಶಯಕ್ಕೆ ಧಕ್ಕೆಯಾಗಲಿದೆ.

ಅಲ್ಲದೆ,ಕಾನೂನು ವಿವಾದಗಳಿಗೆ ಕಾರಣವಾಗುವ ಆಸ್ತಿ ಮಾಲೀಕತ್ವ ಮತ್ತು ನಿರ್ವಹಣೆಯ ಮೇಲಿನ ಕಾನೂನು ವಿವಾದಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ.ಧಾರ್ಮಿಕವಲ್ಲದ ಆಸ್ತಿಗಳನ್ನು ವಕ್ಫ್ ಮಂಡಳಿಗಳ ನಿಯಂತ್ರಣ ತರುವುದರಿಂದ ರಾಜ್ಯದ ಕಾನೂನುಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್,ವಕ್ಫ್ ತಿದ್ದುಪಡಿ ಮಸೂದೆ-2024ರಿಂದ ಸ್ಥಳೀಯ ಪ್ರಾಧಿ ಕಾರದ ಹಿಡಿತ ದುರ್ಬಲಗೊಂಡು, ವಿಕೇಂದ್ರೀಕರಣಕ್ಕೆ ಬದಲಾಗಿ,ಕೇಂದ್ರೀಕೃತ ವ್ಯವಸ್ಥೆಯಿಂದ ಸರಕಾರದ ಹಸ್ತಕ್ಷೇಪ ಹೆಚ್ಚಾಗಲಿದೆ ಎಂಬುದು ನಮ್ಮಗಳ ಅಭಿಪ್ರಾಯವಾಗಿದೆ. ಇದು ಮೂಲಕ ವಕ್ಪ್ ಕಾಯ್ದೆಯ ಆಶಯಗಳಿಗೆ ವಿರುದ್ದವಾಗಿದೆ.ಹಾಗಾಗಿ ತಿದ್ದುಪಡಿ ಮಸೂದೆಯನ್ನು ವಿರೋಧಿಸುವುದಾಗಿ ತಿಳಿಸಿದರು

ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಅಫ್ ಸಿವಿಲ್ ರೈಟ್ಸ್ ಇಂಡಿಯಾ ಶಾಖೆಯ ಖಾಲಿದ್ ಸುಹೇಲ್, ಹಮೀದ್ ಬೇಗ್, ಗೌನ್‌ಪಾಷಾ, ಅಫ್ಜಲ್‌ಖಾನ್, ಅಪ್ಸರ್ ಪಾಷ ಇದ್ದರು.