ತುಮಕೂರು: ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಕೆರೆಗೆ ಇದೇ ತಿಂಗಳಲ್ಲಿ ಹೇಮಾವತಿ ಜಲಾಶಯದಿಂದ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ನಗರದ ನಾಗರಿಕರು ಮಿತವಾಗಿ ನೀರು ಬೆಳೆಸಬೇಕು. ಇದರಿಂದ ಬೇಸಿಗೆಯಲ್ಲಿ ತಲೆದೋರಬಹುದಾದ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗೆ ಸಚಿವ ಪರಮೇಶ್ವರ್ ಸೂಚಿಸಿದ್ದಾರೆ.
ಬುಗುಡನಹಳ್ಳಿ ಕೆರೆಯ ಒಟ್ಟು ಸಂಗ್ರಹ ಸಾಮರ್ಥ್ಯ 363 ಎಂಸಿಎಫ್‌ಟಿ. ಪ್ರಸ್ತುತ 155 ಎಂಸಿಎಫ್‌ಟಿ ಲಭ್ಯವಿದ್ದು, ಏಪ್ರಿಲ್ ವರೆಗೂ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ. ಡೆಡ್ ಸ್ಟೋರೇಜ್ ಪ್ರಮಾಣ 19 ಎಂಸಿಎಫ್‌ಟಿ. ಇದನ್ನು ಕಳೆದರೆ 135 ಎಂಸಿಎಫ್‌ಟಿ ಬಳಕೆಗೆ ಲಭ್ಯವಾಗಲಿದೆ. ಪ್ರತಿ ದಿನ ನಗರಕ್ಕೆ 1.50 ಎಂಸಿಎಫ್‌ಟಿ ನೀರು ಪೂರೈಕೆ ಮಾಡಿದರೆ ಮುಂದಿನ ಮೂರು ತಿಂಗಳವರೆಗೂ ನೀರಿನ ಲಭ್ಯತೆ ಇರುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.