Monday, 16th September 2024

ನೀರು ಸಂರಕ್ಷಣೆಯಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ಹೊಸ ಮೈಲಿಗಲ್ಲು ಸ್ಥಾಪನೆ

· ಮಾಲೂರು ಸೇರಿ ತನ್ನ ನಾಲ್ಕು ಘಟಕಗಳಲ್ಲಿ ವಾರ್ಷಿಕ 67 ಮಿಲಿಯನ್ ಲೀಟರ್ ಗೂ ಅಧಿಕ ತ್ಯಾಜ್ಯನೀರು ಸಂಸ್ಕರಣೆ

· ಈ ಸಾಧನೆಗೆ ಐಜಿಬಿಸಿಯಿಂದ ನೆಟ್ ಝೀರೋ ವಾಟರ್ ಪ್ರಮಾಣಪತ್ರದ ಗೌರವ

ಬೆಂಗಳೂರು: ದೇಶೀಯ ಇ-ಕಾಮರ್ಸ್ ಸಂಸ್ಥೆಯಾಗಿರುವ ಫ್ಲಿಪ್ ಕಾರ್ಟ್ ಅಮೂಲ್ಯವಾದ ನೀರಿನ ಉಳಿತಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕರ್ನಾಟಕದ ಮಾಲೂರು, ಹರ್ಯಾಣದ ರೇವಾರಿ ಮತ್ತು ಸಂಕ್ಪ ಹಾಗೂ ಪಂಜಾಬಿನ ಲೂಧಿಯಾನದಲ್ಲಿರುವ ತನ್ನ ನಾಲ್ಕು ಘಟಕಗಳಲ್ಲಿ ವಾರ್ಷಿಕ 67 ಮಿಲಿಯನ್ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಸಂಸ್ಥೆಯ ನೀರಿನ ಸಂರಕ್ಷಣಾ ಉಪಕ್ರಮಗಳು ನೀರಿನ ಬಳಕೆಯಲ್ಲಿ ವಿವೇಚನಾಶೀಲ ವಿಧಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ನೀರಿನ ಬಳಕೆಯನ್ನು ಕಡಿಮೆ ಮಾಡುವುದು, ಮರುಬಳಕೆ ಮಾಡುವುದು ಮತ್ತು ಸಂಸ್ಕರಿಸುವ ವಿಚಾರಗಳಿಗೆ ಹೆಚ್ಚಿನ ಗಮನಹರಿಸಿದೆ. ಈ ಸಂರಕ್ಷಣಾ ಪ್ರಯತ್ನ ಗಳಿಂದಾಗಿ ಸುಮಾರು ವಾರ್ಷಿಕ 14 ಮಿಲಿಯನ್ ಲೀಟರ್ ನಷ್ಟು ಶುದ್ಧ ನೀರಿನ ಬಳಕೆಯನ್ನು ಕಡಿಮೆಗೊಳಿಸಲಾಗಿದೆ. ಇದರಿಂದಾಗಿ ದೇಶದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಾಗಿದೆ. ಎಲ್ಲಾ ನಾಲ್ಕು ಸ್ಥಳಗಳಲ್ಲಿ ಸರಾಸರಿ LPCD (ಪ್ರತಿದಿನಕ್ಕೆ ತಲಾ ಲೀಟರ್) ಶೇ.30 ರಷ್ಟು ಕಡಿತಗೊಳಿಸುವ ಮೂಲಕ ನೀರಿನ ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಾಗಿದೆ. ಇದಲ್ಲದೇ, ಅಂತರ್ಜಲ ಮರುಪೂರಣ ಮೂಲ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಸಮರ್ಪಕ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕೈಗೊಂಡಿದೆ.

ಸರ್ಕಾರದ `ಜಲ ಶಕ್ತಿ ಅಭಿಯಾನ: ಮಳೆನೀರು ಸಂಗ್ರಹ’ಕ್ಕೆ ಪೂರಕವಾಗಿ ತಳಮಟ್ಟದಿಂದ ನೀರು ಸಂರಕ್ಷಣೆಗೆ ಫ್ಲಿಪ್ ಕಾರ್ಟ್ ತನ್ನ ಬದ್ಧತೆಯನ್ನು ಹೊಂದಿದೆ. ಇದಕ್ಕಾಗಿ ಹಲವಾರು ಉಪಕ್ರಮಗಳನ್ನೂ ಕೈಗೊಂಡಿದೆ.

ಫ್ಲಿಪ್ ಕಾರ್ಟ್ ನ ನೀರು ಸಂರಕ್ಷಣೆ ಕ್ರಮಗಳ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಅವರು, “ಫ್ಲಿಪ್ ಕಾರ್ಟ್ ಗ್ರೂಪ್ ನಲ್ಲಿ ನಾವು ನೈಸರ್ಗಿಕ ಮೂಲಗಳ ಮಹತ್ವವನ್ನು ತಿಳಿದುಕೊಂಡಿದ್ದೇವೆ ಮತ್ತು ಆ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವು ಪ್ರಜ್ಞಾಪೂರ್ವಕ ಹೆಜ್ಜೆಗಳನ್ನು ಇಟ್ಟಿದ್ದೇವೆ. ಪರಿಸರ ಮತ್ತು ವ್ಯಾಪಾರ ಪರಿಸರ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉತ್ತಮ ಅಭ್ಯಾಸಗಳನ್ನು ನಾವು ಸ್ಥಾಪಿಸಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನಾವು ಭಾವಿಸಿದ್ದೇವೆ.

Leave a Reply

Your email address will not be published. Required fields are marked *