Sunday, 15th December 2024

ಸುಳ್ಳು ಹೇಳುವ ಪಕ್ಷ ನಮಗೆ ಬೇಕಾಗಿಲ್ಲ: ಡಿಸಿಎಂ ಡಿಕೆಶಿವಕುಮಾರ್‌

ಶಿರಸಿ: ಕರ್ನಾಟಕದಲ್ಲಿ ಒಂದೇ ಒಂದು ಡ್ಯಾಂ ಗಳನ್ನು ಬಿಜೆಪಿ ಸರಕಾರ ಕಟ್ಟಿಸಿಲ್ಲ. ನಾವು ಉಚಿತ ನೀರು, ವಿದ್ಯುತ್, ಅನ್ನ ನೀಡಿದ್ದೇವೆ. ಉಚಿತ ಶಿಕ್ಷಣ ವನ್ನೂ ನಾವು ಮಾಡಿದ್ದೇವೆ ಎಂದ ಡಿಸಿಎಂ ಡಿಕೆಶಿವಕುಮಾರ್‌, ನರೇಗಾ ಕಾರ್ಯದಲ್ಲಿ ಪೂರ್ತಿ ಮಾನವ ದಿನ ಶ್ರಮಿಸಿ ಬರಗಾಲದಲ್ಲಿ ಸಂಪೂರ್ಣ ಕೆಲಸ ನೀಡದ ಬಿಜೆಪಿ ನಮಗೆ ಬೇಕಾ ಎಂದು ಪ್ರಶ್ನಿಸಿದ ಅವರು, ಸುಳ್ಳು ಹೇಳುವ ಪಕ್ಷ ನಮಗೆ ಬೇಕಾಗಿಲ್ಲ ಎಂದರು.

ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದರು.

ಧರ್ಮದಲ್ಲಿ ರಾಜಕೀಯ ಸಲ್ಲ. ಬಿಜೆಪಿಯವರ ಕಾಲದಲ್ಲಿ ಯಾರ ಬದುಕಿಗೂ ಆಶ್ತಯವಾಗಿಲ್ಲ ನಾವು ಜನರಿಗೆ ಬದುಕು ನೀಡುತ್ತಿದ್ದೇವೆ. ಆದರೆ ಬಂದ ಜೆಪಿ ಭಾವನೆಗಳಮೇಲೆ ಕಾರ್ಯ ಮಾಡುತ್ತಿದೆ. ನೀ ದು ಜೀವನ ರೂಪಿಸುವುಸಿಲ್ಲ. ಎಂದು ಡಿಕೆಶಿವಕುಮಾರ್‌ ಹೇಳಿದರು.